ದೀಪಿಕಾ ಬದುಕಲ್ಲಿ ಬರೀ ಕತ್ತಲು! – ಶಿಕ್ಷಣಕ್ಕಾಗಿ ಮಹಾನಟಿ ಕಷ್ಟಪಟ್ಟಿದ್ದು ಅಷ್ಟಿಷ್ಟಲ್ಲ!

ದೀಪಿಕಾ ಬದುಕಲ್ಲಿ ಬರೀ ಕತ್ತಲು! – ಶಿಕ್ಷಣಕ್ಕಾಗಿ ಮಹಾನಟಿ ಕಷ್ಟಪಟ್ಟಿದ್ದು ಅಷ್ಟಿಷ್ಟಲ್ಲ!

ಜೀಕನ್ನಡದಲ್ಲಿ ಮಹಾನಟಿ ಸೀಸನ್‌ 2 ಆರಂಭಗೊಂಡಿದೆ. ಮೆಘಾ ಆಡಿಷನ್‌ನಲ್ಲಿ 16 ಸ್ಪರ್ಧಿಗಳನ್ನ ಆಯ್ಕೆ ಮಾಡಿಕೊಳ್ಳಲಾಗಿದೆ. ಇದೀಗ ವಿಭಿನ್ನ ಕಾನ್ಸೆಪ್ಟ್‌ಗಳನ್ನ ಕೊಟ್ಟು ಮಹಾ ನಟಿಯರ ಪ್ರತಿಭೆಗಳನ್ನ ಆಚೆ ತರ್ತಿದ್ದಾರೆ ಜಡ್ಜಸ್‌.. ಅಷ್ಟೇ ಅಲ್ಲ ಪ್ರತಿ ಸ್ಪರ್ಧಿಗಳ ಒಂದೊಂದೇ ಕಥೆಗಳು ಈ ಕಾರ್ಯಕ್ರಮದಲ್ಲಿ ತೆರೆದುಕೊಳ್ಳುತ್ತಿವೆ. ಇದೀಗ ದೀಪಿಕಾ ಬದುಕಿನ ಕತೆ ತೆರೆದುಕೊಂಡಿದೆ.. ಪಟ ಪಟ ಅಂತಾ ಮಾತನಾಡೋ ಈಕೆಯ ಕಣ್ಣೀರಿನ ಕತೆಯಿದೆ.. ಬಡತನದಲ್ಲಿ ಬೆಳೆದ ಈ ಹುಡುಗಿ ಸಾಕಷ್ಟು ಸವಾಲುಗಳನ್ನ ಫೇಸ್‌ ಮಾಡಿ ಈಗ ಮಹಾನಟಿ ವೇದಿಕೆಗೆ ಎಂಟ್ರಿಕೊಟ್ಟಿದ್ದಾರೆ.

ಇದನ್ನೂ ಓದಿ: ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್‌ ಮಾಡದ ಕಣ್ಣಪ್ಪ! – ಮೊದಲ ದಿನದ ಗಳಿಕೆ ಇಷ್ಟೇನಾ?

ಮಹಾನಟಿ ಸೀಸನ್‌ 2 ಆರಂಭದಲ್ಲೇ ವೀಕ್ಷಕರ ಮನಗೆದ್ದಿದೆ.  ನಟಿಯಾಗಬೇಕು ಅಂತಾ ಕನಸು ಕಾಣುವವರಿಗೆ ಒಂದೊಳ್ಳೆ ವೇದಿಕೆ ಕಲ್ಪಿಸಿಕೊಡಲಾಗಿದೆ. ಈ ಸೀಸನ್‌ ನಲ್ಲಿ 16 ಸ್ಪರ್ಧಿಗಳು ಆಯ್ಕೆಯಾಗಿದ್ದಾರೆ.. ಇದೀಗ ತಮ್ಮ ಪ್ರತಿಭೆಯ್ನ ವೇದಿಕೆಯಲ್ಲಿ ಅನಾವರಣ ಮಾಡ್ತಿದ್ದಾರೆ.. ಇದ್ರಲ್ಲಿ ಪಟ ಪಟ ಅಂತಾ ಮಾತನಾಡೋ ದೀಪಿಕಾ ಸಖತ್‌ ಹೈಲೆಟ್‌ ಆಗಿದ್ದಾರೆ.. ತಮ್ಮ ಮುಗ್ದ ಮಾತುಗಳಿಂದ ಎಲ್ಲರನ್ನ ನಗಿಸುತ್ತಿದ್ದಾರೆ.. ಆದ್ರೆ ಎಲ್ಲರನ್ನ ನಗಿಸೋ ಈ ಹುಡುಗಿ ತನ್ನ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನ ಫೇಸ್‌ ಮಾಡಿ ಈ ಹಂತಕ್ಕೆ ಬಂದಿದ್ದಾರೆ.. ಇದೀಗ ವೇದಿಕೆಯಲ್ಲಿ ತನ್ನ ಫ್ಯಾಮಿಲಿ ಎದುರಿಸ್ತಿರೋ ಕಷ್ಟಗಳನ್ನ ಹೇಳಿಕೊಂಡಿದ್ದಾರೆ..

ಅಂದ್ಗಾಗೆ ತುಮಕೂರಿನ ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ತಾಲೂಕಿನ ಕಾಟೇನಹಳ್ಳಿಯವರು.. ಸದ್ಯ ಎಕನಾಮಿಕ್ಸ್‌ನಲ್ಲಿ MA ಮಾಡ್ತಿದ್ದಾರೆ. ಇದೀಗ ಮಹಾನಟಿ ವೇದಿಕೆ ಎಂಟ್ರಿಕೊಟ್ಟಿದ್ದಾರೆ. ಮೆಗಾ ಆಡಿಷನ್‌ನಲ್ಲೇ ದೀಪಿಕಾ ಮಂಜುಳಾ ಪಾತ್ರ ಮಾಡಿದ್ರು.  ತನ್ನ ಪರ್ಫಾಮೆನ್ಸ್‌ ಜೊತೆಗೆ ಮಾತಿನ ಮೂಲಕ ಗಮನ ಸೆಳೆದಿದ್ರು. ಈಕೆ ಮುಗ್ದ ಮಾತಿಗೆ ಎಲ್ಲರೂ ಮನಸೋತಿದ್ರು.. ಎರಡನೇ ವಾರ ಫೋಟೋ ಶೂಟ್‌ ರೌಂಡ್‌ ಇದ್ದಿದ್ರಿಂದ ದೀಪಿಕಾ ಗಗನಸಖಿಯಾಗಿ ಪೋಸ್‌ ಕೊಟ್ಟಿದ್ರು. ವೇದಿಕೆಯಲ್ಲೂ ಗಗನಸಖಿಯಾಗಿ ನಟಿಸಿದ್ರು.. ಆದರೆ ಈ ಅನುಭವ ಹಂಚಿಕೊಂಡ ದೀಪಿಕಾ ತನ್ನ ಬದುಕು ಹಾಗೂ ಬಡತನದ ಕಥೆಯನ್ನೂ ವೇದಿಕೆಯಲ್ಲಿದ್ದವರ ಮುಂದೆ ಹೇಳಿಕೊಂಡಿದ್ದಾರೆ. ಈಕೆಯ ಕರುಣಾಜನಕ ಕತೆ ಕೇಳಿ ಎಲ್ಲರೂ ಕಣ್ಣೀರು ಹಾಕಿದ್ದಾರೆ.

ದೀಪಿಕಾ ಬಡತನದ ಕುಟುಂಬದಲ್ಲಿ ಬೆಳೆದವರು. ತಂದೆ ಗಾರೆ ಕೆಲಸ ಮಾಡ್ತಿದ್ದಾರೆ. ತಾಯಿ ಫ್ಯಾಕ್ಟರಿಯೊಂದ್ರಲ್ಲಿ ಕೆಲಸ ಮಾಡ್ತಿದ್ದಾರೆ. ತಂದೆ ತಾಯಿ ದುಡಿದ್ರೆ ಮಾತ್ರ ಮನೆ ನಡೆಸಲು ಸಾಧ್ಯ. ಆದ್ರೂ ಈಕೆ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡ್ತಿದ್ದಾರೆ. ಕಾಲೇಜು ಫೀಸ್‌ ಕಟ್ಟಲು ಮನೆಯವರ ಬಳಿ ಹಣ ಕೇಳ್ಬೇಕಾಗುತ್ತೆ ಅಂತಾ ದೀಪಿಕಾ ಆಕೆ  ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸ್ತಿದ್ದಾರೆ. ಇದ್ರಲ್ಲಿ ವಿನ್‌ ಆದ್ರೆ ನಗದು ಬಹುಮಾನ ಸಿಗುತ್ತೆ.. ಇದ್ರಿಂದ ಫೀಸ್‌ ಕಟ್ಬೋದು ಅನ್ನೋ ಉದ್ದೇಶದಿಂದ ಆಕೆ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸ್ತಿದ್ರಂತೆ. 2 ಸಾವಿರ ನಗದು ಬಹುಮಾನ ಬಂದ್ರೆ, ಅದನ್ನ ಫೀಸ್‌ ಕಟ್ಟಲೆಂದು ಸೇವಿಂಗ್ಸ್‌ ಮಾಡ್ತಿದ್ರಂತೆ.. ಫೀಸ್‌ 4,000 ರೂಪಾಯಿ ಇದ್ರೆ, ಅಪ್ಪನ ಹತ್ತಿರ 2,000 ಅಂತ ಸುಳ್ಳು ಹೇಳಿ ಬಾಕಿ ಹಣವನ್ನು ಆಕೆಯೇ ಕಟ್ಟುತ್ತಿದ್ರಂತೆ. ಈ ವಿಚಾರವನ್ನ ಮಹಾನಟಿ ವೇದಿಕೆಯಲ್ಲಿ ಹೇಳಿದ್ದಾರೆ.

ಇನ್ನು ಎಲ್ಲರೂ ನನ್ನ ಗಂಡುಬೀರಿ ಅಂತಿದ್ರು, ಇವಳಿಗೆ ಯಾವುದೋ ನೋವಿಲ್ಲ, ಮನೆಯಲ್ಲಿ ಇವಳನ್ನ ಸ್ಟ್ರಿಕ್ಟ್‌ ಆಗಿ ಬೆಳೆಸಿಲ್ಲ ಅಂತೆಲ್ಲ ಮಾತನಾಡ್ತಿದ್ರು. ನಾನು ನನ್ನ ತಂದೆ ತಾಯಿಗೆ ತಲೆ ಎತ್ತುವಂತ ಕೆಲಸ ಮಾಡ್ತೀನಿ ಅಂತ ಮಾತು ಕೊಟ್ಟಿದ್ದೆ. ಇವತ್ತು ಮಹಾನಟಿ ಮೂಲಕ ಅದು ನಡೆಯುತ್ತಿದೆ ಎಂದು ಅಳುತ್ತಾ ವೇದಿಕೆಗೆ ಕೈಮುಗಿದಿದ್ದಾರೆ.  ಇನ್ನು ಮುಂದೆ ನಮ್ಮ ಅಪ್ಪ ಹಾಗೂ ಅಮ್ಮನನ್ನ ಸಂತೋಷವಾಗಿ ನೋಡಿಕೊಳ್ಳುತ್ತೇನೆ. ಅವರು ಹೆಮ್ಮೆ ಪಡುವ ಕೆಲಸ ಮಾಡ್ತೀನಿ ಎಂದಿದ್ದಾರೆ. ದೀಪಿಕಾ ಅವರ ಬಡತನದ ಬದುಕು, ಜೀವದಲ್ಲಿ ಎದುರಿಸಿದ ಸಂಕಷ್ಟಗಳನ್ನು ಕೇಳಿ ಅನುಶ್ರೀ, ನಿಶ್ವಿಕಾ ನಾಯ್ಡು, ಇತರೆ ಸ್ಪರ್ಧಿಗಳು ಕೂಡ ಕಣ್ಣೀರಿಟ್ಟಿದ್ದಾರೆ. ಪಟ್ಟಿರುವ ಕಷ್ಟಕ್ಕೆ ನಿಮಗೆ ಒಳ್ಳೆಯದಾಗುತ್ತೆ ಹಲವರು ದೀಪಿಕಾಗೆ ಧೈರ್ಯದ ಮಾತುಗಳನ್ನಾಡಿದ್ದಾರೆ.

ಇನ್ನು ಈ ವಾರ ಕೂಡ ದೀಪಿಕಾ ಮಂಜುಳಾ ಗೆಟಪ್‌ ನಲ್ಲಿ ವೇದಿಕೆಗೆ ಎಂಟ್ರಿ ಕೊಟ್ಟಿದ್ರು.. ಒಂದೇ ಒಂದು ಆಸೆಯೂ ಹಾಡಿಗೆ ಮಸ್ತ್‌ ಡ್ಯಾನ್ಸ್‌ ಮಾಡಿದ್ರು.. ಇವ್ರ ಡ್ಯಾನ್ಸ್‌ಗೆ ಜಡ್ಜಸ್‌ ಫಿದಾ ಆಗಿದ್ದಾರೆ.. ಇಷ್ಟೊಂದು ಟ್ಯಾಲೆಂಟ್‌ ಎಲ್ಲಿತ್ತು ಅಂತಾ ನಿಶ್ವಿಕಾ ನಾಯ್ಡು ಕೇಳಿದ್ದಾರೆ. ಒಟ್ಟಾರೆ ದೀಪಿಕಾ ವೀಕ್ಷಕರಿಗೆ ಸಖತ್‌ ಮನರಂಜನೆ ನೀಡ್ತಾ ಇದ್ದಾರೆ.. ನಟನಾ ಕ್ಷೇತ್ರದಲ್ಲಿ ದೀಪಿಕಾ ಒಳ್ಳೆ ಹೆಸ್ರು ಗಳಿಸಲಿ ಅನ್ನೋದೇ ಎಲ್ಲರ ಆಶಯ.

Shwetha M