ಮದ್ವೆ ನಿಲ್ಲಿಸಲು ಆತ್ಮಹತ್ಯೆಗೆ ಯತ್ನ.. ಸಾವು ಗೆದ್ದ ವರ್ಷ ಈಗ ಮಹಾನಟಿ – ಹಳ್ಳಿ ಹುಡ್ಗಿ ಬದುಕು ಬದಲಿಸಿದ ಶಿಕ್ಷಣ

ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಮಹಾನಟಿ ಸೀಸನ್ 2 ಮೊದಲ ವಾರದಲ್ಲೇ ಸಕ್ಷಸ್ ಕಂಡಿದೆ. 16 ಮಂದಿ ಸ್ಪರ್ಧಿಗಳು ಶೋಗೆ ಆಯ್ಕೆ ಆಗಿದ್ದಾರೆ. ಈ ಸ್ಪರ್ಧಿಗಳ ಮಧ್ಯೆ ಹೆಚ್ಚು ಹೈಲೈಟ್ ಆಗಿದ್ದು ಅಂದ್ರೆ ಚಿಕ್ಕೋಡಿಯ ವರ್ಷಾ ಡಿಗ್ರಜೆ.. ನಟನೆ ಜೊತೆ ಆಕೆಯ ಪಟಪಟ ಮಾತು ಕೂಡ ವೀಕ್ಷಕರಿಗೆ ಇಷ್ಟವಾಗಿದೆ. ಆದ್ರೆ ಈಕೆ ಸಣ್ಣ ವಯಸ್ಸಲ್ಲೇ ಸಾಕಷ್ಟು ಸವಾಲುಗಳನ್ನ ಫೇಸ್ ಮಾಡಿದ್ದಾಳೆ.. ಬಾಲ್ಯ ವಿವಾಹದಿಂದ ಪಾರಾಗಲು ಆತ್ಮಹತ್ಯೆಗೂ ಯತ್ನಿಸಿದ್ರು. ಅಷ್ಟೇ ಅಲ್ಲ ಇಡೀ ಊರಿನ ಕಟ್ಟುಪಾಡುಗಳ ವಿರುದ್ಧ ನಿಂತು ವಿದ್ಯಾಭ್ಯಾಸ ಕೂಡ ಪೂರೈಸಿದ್ರು. ಇದೀಗ ವರ್ಷಾ ಮಹಾನಟಿ ವೇದಿಕೆಗೆ ಎಂಟ್ರಿಕೊಟ್ಟಿದ್ದಾರೆ.
ಇದನ್ನೂ ಓದಿ: ಆಂಗ್ಲರ ನಾಡಲ್ಲಿ ಸಚಿನ್, ದ್ರಾವಿಡ್, ವಿರಾಟ್ ರನ್ ಸುನಾಮಿ – ಇಂಗ್ಲೆಂಡ್ ನಲ್ಲಿ ಹೇಗಿದೆ ರೆಕಾರ್ಡ್ಸ್?
ನಟಿಯರಾಗ್ಬೇಕು ಅಂತಾ ಕನಸು ಕಂಡವರಿಗೆ ಜೀ ಕನ್ನಡ ವಾಹಿನಿ ಒಂದೊಳ್ಳೆ ವೇದಿಕೆ ಕಲ್ಪಿಸಿಕೊಟ್ಟಿದೆ. ಮಹಾನಟಿ ಶೋ ಪ್ರತಿಭಾವಂತ ಹೆಣ್ಣುಮಕ್ಕಳಿಗೆ ಉತ್ತಮ ವೇದಿಕೆಯಾಗಿದೆ. ಮಹಾನಟಿ ಸೀಸನ್ 2 ಈಗಾಗಲೇ ಆರಂಭವಾಗಿದೆ. ಈ ಸೀಸನ್ ನ 16 ಸ್ಪರ್ಧಿಗಳಲ್ಲಿ ಚಿಕ್ಕೋಡಿಯ ವರ್ಷಾ ಡಿಗ್ರಜೆ ಕೂಡ ಒಬ್ರು. ಮೆಘಾ ಆಡಿಷನ್ ನಲ್ಲಿ ಆಕೆಯೇ ಬರೆದ ಸ್ಕ್ರಿಪ್ಟ್ ಅನ್ನು ನಟಿಸಿ, ತೋರಿಸುವ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ ವರ್ಷಾ. ಆದ್ರೆ ಈ ವೇದಿಕೆಗೂ ಹತ್ತೋಕೂ ಮುನ್ನ ವರ್ಷ ಸಾಕಷ್ಟು ಕಷ್ಟಗಳನ್ನ ಫೇಸ್ ಮಾಡಿದ್ದಾರೆ. ಈಕೆಯ ಬದುಕಿನಲ್ಲಿ ಕೆಲ ಕಹಿ ಘಟನೆಗಳೂ ನಡೆದಿದೆ.
ಅಂದ್ಹಾಗೆ ವರ್ಷಾ ಡಿಗ್ರಜೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಇಂಗಳಿ ಎಂಬ ಹಳ್ಳಿಯವರು. ಇಂಜಿನಿಯರಿಂಗ್ ಪದವೀಧರೆಯಾಗಿ ಪ್ರಸ್ತುತ ಜಿಂದಾಲ್ ಕಂಪನಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲ್ಸ ಮಾಡ್ತಿದ್ದಾರೆ. ಮಹಾ ನಟಿ ವೇದಿಕೆಯಲ್ಲಿ ಏಕಪಾತ್ರಾಭಿನಯ ಮಾಡಿ ಜಡ್ಜಸ್ ಮನಗೆದ್ದಿದ್ರು. ಗ್ರೀಲ್ ಲೈಟ್ ಬೀಳ್ತಿದ್ದಂತೆ ವರ್ಷಾ ಭಾವುಕರಾದ್ರು. ಬಳಿಕ ತನ್ನ ಜೀವನ ನೋವಿನ ಕತೆ ಹಾಗೂ ಸ್ಪೂರ್ತಿದಾಯಕ ಕತೆಯನ್ನ ಎಲ್ಲರ ಮುಂದೆ ಬಿಚ್ಚಿಟ್ಟಿದ್ದಾರೆ.
ಹೌದು, ವರ್ಷಾರದ್ದು ಬಡ ಕುಟುಂಬ. ತಂದೆ ಕೊಲ್ಲಾಪುರದಲ್ಲಿ ಕೊಮ್ಮನಹಳ್ಳಿ ಎಂಬಲ್ಲಿ ಶ್ರೀಮಂತರ ಮನೆಯಲ್ಲಿ ಕೆಲಸ ಮಾಡ್ಕೊಂಡಿದ್ದಾರೆ. ಇನ್ನು ಆಕೆಯ ಅಣ್ಣ ಕೂಡ ಸ್ಕೂಲ್ ಮೆಟ್ಟಿಲು ಹತ್ತಿಲ್ಲ.. ಇಡೀ ಊರಲ್ಲಿ ವರ್ಷಾ ಮಾತ್ರ ಓದಿದ್ದು.. ಎಸ್‌ಎಸ್‌ಎಲ್‌ಸಿ ಬೋರ್ಡ್ ಪರೀಕ್ಷೆಯಲ್ಲಿ 98% ಅಂಕ ಗಳಿಸಿದ್ರು.. ಬಳಿಕ ಇಂಜಿನಿಯರಿಂಗ್ ಓದಿ ಕೆಲಸ ಪಡ್ಕೊಂಡಿದ್ದಾರೆ.. ಇದೀಗ ಆಕೆ ಎಲ್ಲರಿಗೂ ಮಾದರಿ ಆಗಿದ್ದಾರೆ. ಓಕೆಯ ಸಾಧನೆ ನೋಡಿದ ಹಳ್ಳಿ ಮಂದಿ, ಬಳಿಕ ಅವ್ರ ಮಕ್ಕಳನ್ನ ಕೂಡ ವಿದ್ಯಾಭ್ಯಾಸಕ್ಕೆಂದು ಸ್ಕೂಲ್, ಕಾಲೇಜ್ ಗೆ ಕಳಿಸ್ತಿದ್ದಾರೆ. ಆದ್ರೆ ಈ ಹಂತ ತಲುಪಲು ವರ್ಷ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಹೌದು, ವರ್ಷಾ ಜೀವನದಲ್ಲಿ ಆಘಾತಕಾರಿ ಘಟನೆ ನಡೆದಿತ್ತು.. ಅದ್ರಿಂದ ಪಾರಾಗಲು ಆಕೆ ಆತ್ನಹತ್ಯೆಯ ದಾರಿ ಹಿಡಿದಿದ್ರು.
ವರ್ಷಾಗೆ ಸುಮಾರು 14 ವರ್ಷ ಇದ್ದಾಗ ಆಕೆಯ ಮನೆಯವರು ಮದುವೆ ಮಾಡಿಸಲು ಮುಂದಾಗಿದ್ರು.. ಆದ್ರೆ ಆಕೆಗೆ ತಾನು ಏನಾದ್ರೂ ಸಾಧನೆ ಮಾಡ್ಬೇಕು ಅನ್ನೋ ಆಸೆ, ಕನಸು ಇತ್ತು. ಹೀಗಾಗಿ ಬಾಲ್ಯ ವಿವಾಹದಿಂದ ತಪ್ಪಿಸಿಕೊಳ್ಳಲು ಆಕೆ ಆತ್ಮಹತ್ಯೆಯ ದಾರಿ ಹಿಡಿದಿದ್ರು. ಇದು ಗೊತ್ತಾಗ್ತಿದ್ದಂತೆ ಆಕೆಯನ್ನ ಮನೆಯವರು ಆಸ್ಪತ್ರೆಗೆ ಅಡ್ಮಿಟ್ ಮಾಡ್ತಾರೆ. ಕೆಲ ದಿನ ಸಾವು ಬದುಕಿನ ಮಧ್ಯೆ ಹೋರಾಡಿದ್ದ ವರ್ಷಾ ಕೊನೆಗೂ ಕಂಟಕದಿಂದ ಪಾರಾಗ್ತಾರೆ. ಅಷ್ಟೇ ಅಲ್ಲ ಫಿಕ್ಸ್ ಆಗಿದ್ದ ಮದುವೆ ಕೂಡ ನಿಂತು ಹೋಗುತ್ತೆ. ಮದುವೆ ನಿಲ್ತಿದ್ದಂತೆ ವರ್ಷಾ ಮತ್ತೆ ಸ್ಕೂಲ್ ಗೆ ಹೋಗಲು ಶುರುಮಾಡ್ತಾರೆ.. ಆದ್ರೆ ಮತ್ತೆ ವರ್ಷಾಗೆ ಮನೆಯವರಿಂದ ಪ್ರೆಷರ್ ಬೀಳುತ್ತೆ. ಎಸ್‌ಎಸ್‌ಎಲ್‌ಸಿಯಲ್ಲಿ ಶೇ.95ರಷ್ಟು ಮಾರ್ಕ್ಸ್ ತಗೊಂಡ್ರೆ ಮುಂದಕ್ಕೆ ಹೋಗ್ತಿಯಾ. ಇಲ್ಲ ಅಂದ್ರೆ ನಿಮ್ ಸೋದರಮಾವನ ಜೊತೆ ಮದುವೆ ಮಾಡಿಸ್ತೀನಿ ಅಂತಾ ಆಕೆಯ ತಾಯಿ ಭಯಪಡಿಸಿದ್ರು.. ಇದನ್ನೇ ವರ್ಷಾ ಸವಾಲಾಗಿ ತೆಗೆದುಕೊಂಡ್ರು. 95 ಅಲ್ಲ, 98 ಪರ್ಸೆಂಟ್ ಅಂಕ ಪಡೆದು ಎಲ್ಲರಿಗೂ ಮಾದರಿಯಾದ್ರು.. ಇನ್ನು ಇಂಜಿನಿಯರಿಂಗ್ ಸೇರುವಾಗಲೂ ಆಕೆ ಹತ್ರ ದುಡ್ಡು ಇರಲಿಲ್ಲ. ಆಕೆಯ ಗುರುಗಳೊಬ್ಬರು ಎಜುಕೇಷನ್ ಗೆ 2 ಲಕ್ಷ ರೂಪಾಯಿ ಕೊಟ್ಟು ಸಹಾಯ ಮಾಡಿದ್ರಂತೆ. ಅದಾದ ನಂತ್ರ ಎಜುಕೇಷನ್ ಲೋನ್ ಮಾಡಿ, ವಿದ್ಯಾಭ್ಯಾಸ ಮುಂದುವರಿಸಿದ್ದಾರಂತೆ.. ಇದೀಗ ವರ್ಷಾಳಿಂದ ಸ್ಪೂರ್ತಿ ಪಡೆದ ಅನೇಕ ಹೆಣ್ಣುಮಕ್ಕಳು ಇದೀಗ ವಿದ್ಯಾವಂತರಾಗಿದ್ದಾರೆ.. ವರ್ಷಾ ನಿಜಕ್ಕೂ ಗ್ರೇಟ್ ಅಲ್ವಾ.. ಎಲ್ಲಾ ಸೌಕರ್ಯ ಇದ್ದೂ ತನ್ನಿಂದ ಏನೂ ಆಗಲ್ಲ ಅಂತಾ ಕೂರುವವರ ಮಧ್ಯೆ ವರ್ಷ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ.

ನೋಡಿರಿ

