6 ಗಂಟೆ 4 ನಿಮಿಷ.. ಗ್ರಹಣ ಗ್ರಹಚಾರ – ಮಹಾಲಯ ಅಮಾವಾಸ್ಯೆಯಂದು ಕೆಡುಕಾಗುತ್ತಾ?
ಯಾರಿಗೆ ಕೆಟ್ಟದ್ದು..? ಯಾರಿಗೆ ಒಳ್ಳೆಯದ್ದು..?

6 ಗಂಟೆ 4 ನಿಮಿಷ.. ಗ್ರಹಣ ಗ್ರಹಚಾರ – ಮಹಾಲಯ ಅಮಾವಾಸ್ಯೆಯಂದು ಕೆಡುಕಾಗುತ್ತಾ?ಯಾರಿಗೆ ಕೆಟ್ಟದ್ದು..? ಯಾರಿಗೆ ಒಳ್ಳೆಯದ್ದು..?

ಗ್ರಹಣ ಅಂದ್ರೆ ಸಾಕಷ್ಟು ಜನರಿಗೆ ಭಯ ಶುರುವಾಗುತ್ತೆ.. ಗ್ರಹಣ ಸಂಭವಿಸಿದ ನಂತ್ರ ಸಾಕಷ್ಟು ಜನರಿಗೆ ಕೆಟ್ಟದ್ದು ಆಗುತ್ತೆ.. ಹಾಗೇ ಕೆಲವರಿಗೆ ಒಳ್ಳೆಯದು ಆಗುತ್ತೆ ಅನ್ನೋ ನಂಬಿಕೆಯಿದೆ. ಗ್ರಹಣ ಮುಗಿದ ನಂತ್ರ ಪೂಜೆ ಮಾಡಿ ಸಾಕಷ್ಟು ಮಡಿವಂತಿಕೆಯಿಂದ ಇರ್ತಾರೆ.. ಯಾವುದೇ ರೀತಿಯ ತೊಂದರೆ ಆಗದಂತೆ ದೇವರ ಮೊರೆ ಹೋಗುತ್ತಾರೆ.. ಈ ನಡುವೆ ಅಕ್ಟೋಬರ್ 2ರಂದು ಸೂರ್ಯ ಗ್ರಹಣ ಸಂಭವಿಸಲಿದೆ.. ಅದು ಮಹಾಲಯ ಅಮಾವಾಸ್ಯೆ ದಿನದಂದೆ.. ವರ್ಷದ ಕೊನೆಯ ಮತ್ತು ಎರಡನೇ ಸೂರ್ಯಗ್ರಹಣ ಸಂಭವಿಸಲಿದೆ. ಹಾಗಿದ್ರೆ ಈ ಸೂರ್ಯಗ್ರಹಣದಿಂದ ಏನೆಲ್ಲಾ ಆಗುತ್ತೆ..? ಯಾರಿಗೆ ತೊಂದ್ರೆಯಾಗುತ್ತೆ..? ಭಾರತದಲ್ಲಿ ಇದ್ರ ಎಫೆಕ್ಟ್ ಎಷ್ಟಿದೆ ಅನ್ನೋ ಕಂಪ್ಲೀಂಟ್ ಮಾಹಿತಿ  ಇಲ್ಲಿದೆ.

ಇದನ್ನೂ ಓದಿ : ಮಹಿಷಾ ದಸರಾದಿಂದ ಸಾಂಸ್ಕೃತಿಕ ನಗರಿಯ ಹೆಸರೇ ಚೇಂಜ್!‌ – ಮೈಸೂರು ಅಲ್ಲ.. ‘ಮಹಿಷೂರು’

ಅಕ್ಟೋಬರ್ 2ನೇ ತಾರೀಕು ಮಹಾಲಯ ಅಮಾವಾಸ್ಯೆ ಇದೆ. ಅದೇ ದಿನ ಕೇತುಗ್ರಸ್ತ ಸೂರ್ಯ ಗ್ರಹಣವೂ ಇದೆ. ಆದರೆ ಅದು ಭಾರತದಲ್ಲಿ ಗೋಚರವಾಗುತ್ತಿಲ್ಲ. ಆ ಕಾರಣಕ್ಕೆ ಯಾವುದೇ ಗ್ರಹಣಾಚರಣೆಗಳೂ ಇಲ್ಲ. ಆದರೆ ಮಹಾಲಯ ಅಮಾವಾಸ್ಯೆ ಅಂದಾಕ್ಷಣ ಕರಾಳ, ಭಯಾನಕ ಅನ್ನೋ ನಂಬಿಕೆಯಿದೆ.. ಅದೇ ದಿನ ಸೂರ್ಯಗ್ರಹಣ ಬಂದಿರೋದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಆದ್ರೆ ಭಯ ಪಡೋ ಅಗತ್ಯವಿಲ್ಲ..

ಅಕ್ಟೋಬರ್ 2 ರಂದು ನಡೆಯೋ ಗ್ರಹಣ ಸಂಪೂರ್ಣ ಸೂರ್ಯ ಗ್ರಹಣವಾಗಿರದೆ ವಾರ್ಷಿಕ ಸೂರ್ಯಗ್ರಹಣವಾಗಿರುತ್ತದೆ. ಇದನ್ನು ‘ರಿಂಗ್ ಆಫ್ ಫೈರ್’ ಎನ್ನುತ್ತಾರೆ. ಈ ಸಮಯದಲ್ಲಿ ಆಕಾಶದಲ್ಲಿ ಬೆಂಕಿಯ ಉಂಗುರ ಗೋಚರಿಸುತ್ತದೆ. ಯಾವಾಗಲೂ ಅಮವಾಸ್ಯೆಯಂದೇ ಗ್ರಹಣ ಉಂಟಾಗುತ್ತದೆ. ಈ ಸಲ ಚಂದ್ರಗ್ರಹಣದಿಂದ ಪಿತೃ ಪಕ್ಷ ಆರಂಭವಾಗಿದ್ದರೆ, ಸೂರ್ಯಗ್ರಹಣದೊಂದಿಗೆ ಪಿತೃ ಪಕ್ಷ ಅಂತ್ಯವಾಗುತ್ತದೆ. ವರ್ಷದ ಕೊನೆಯ ಸೂರ್ಯಗ್ರಹಣಕ್ಕೆ ಸಂಬಂಧಿಸಿದಂತೆ ರಿಂಗ್ ಆಫ್ ಫೈರ್‌ನ ದೃಶ್ಯವು ಭಾರತದಲ್ಲಿ ಗೋಚರಿಸುತ್ತದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿದೆ. ವಿಶೇಷವೆಂದರೆ, ಭಾರತದಲ್ಲಿ ಚಂದ್ರಗ್ರಹಣ ಹೇಗೆ ಗೋಚರಿಸಲಿಲ್ಲವೋ ಅದೇ ರೀತಿ ಸೂರ್ಯಗ್ರಹಣವೂ ಗೋಚರಿಸದು. ಆದ್ದರಿಂದ ಅದರ ಸೂತಕ ಅವಧಿಯೂ ಮಾನ್ಯವಾಗುವುದಿಲ್ಲ.

ಸೂರ್ಯ ಗ್ರಹಣ ಜಗತ್ತಿನ ವಿವಿಧ ದೇಶಗಳಲ್ಲಿ ಗೋಚರಿಸಲಿದೆ. ದಕ್ಷಿಣ ಅಮೆರಿಕ, ಉತ್ತರ ಅಮೆರಿಕದ ದಕ್ಷಿಣ ಭಾಗಗಳು, ಪೆಸಿಫಿಕ್ ಮಹಾಸಾಗರ, ಅಟ್ಲಾಂಟಿಕ್ ಸಾಗರ, ಚಿಲಿ, ಅರ್ಜೆಂಟೀನಾ, ಬ್ರೆಜಿಲ್, ಮೆಕ್ಸಿಕೊ, ಪೆರು, ನ್ಯೂಜಿಲೆಂಡ್ ಹಾಗು ಫಿಜಿ ಮೊದಲಾದ ದೇಶಗಳಲ್ಲಿ ಗ್ರಹಣ ಕೆಲಕಾಲ ಗೋಚರಿಸಲಿದೆ. ದಕ್ಷಿಣ ಚಿಲಿ ಮತ್ತು ದಕ್ಷಿಣ ಅರ್ಜೆಂಟೀನಾದಲ್ಲಿ ಮಾತ್ರ ಪೂರ್ಣವಾಗಿ ಗೋಚರಿಸುತ್ತದೆ. ಸೂರ್ಯಗ್ರಹಣದ ಒಟ್ಟು ಅವಧಿ 6 ಗಂಟೆ 4 ನಿಮಿಷ ಆಗಿರುತ್ತದೆ.

ರಿಂಗ್ ಆಫ್ ಫೈರ್ ಎಂದರೇನು ಗೊತ್ತಾ..?

ಭೂಮಿಯಂತೆಯೇ ಚಂದ್ರನೂ ಸೂರ್ಯನ ಸುತ್ತ ಸುತ್ತುತ್ತಾನೆ. ಇದೇ ವೇಳೆ ಚಂದ್ರ ಭೂಮಿಗೂ ಸುತ್ತು ಹಾಕುತ್ತಾನೆ. ಅನೇಕ ಬಾರಿ ಚಂದ್ರ ಸುತ್ತುತ್ತಿರುವಾಗ ಸೂರ್ಯ ಮತ್ತು ಭೂಮಿಯ ನಡುವೆ ಬರುತ್ತಾನೆ. ಚಂದ್ರ ಸೂರ್ಯನ ಬೆಳಕನ್ನು ಭೂಮಿಗೆ ತಲುಪದಂತೆ ಸ್ವಲ್ಪ ಸಮಯದವರೆಗೆ ನಿರ್ಬಂಧಿಸುತ್ತಾನೆ. ಈ ವಿದ್ಯಮಾನವನ್ನು ಸೂರ್ಯಗ್ರಹಣ ಎಂದು ಕರೆಯುವರು. ಈ ಸಮಯದಲ್ಲಿ ಚಂದ್ರನ ನೆರಳು ಭೂಮಿಯ ಮೇಲೆ ಬೀಳುತ್ತದೆ. ವೃತ್ತಾಕಾರದ ಸೂರ್ಯಗ್ರಹಣದಲ್ಲಿ ಚಂದ್ರನು ಭೂಮಿಯಿಂದ ದೂರದಲ್ಲಿದ್ದಾನೆ ಮತ್ತು ಸೂರ್ಯನನ್ನು ಸಂಪೂರ್ಣವಾಗಿ ಆವರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಆಕಾಶದಲ್ಲಿ ಬೆಂಕಿಯ ಉಂಗುರ ಗೋಚರಿಸುತ್ತದೆ. ಅದನ್ನೇ ‘ರಿಂಗ್ ಆಫ್ ಫೈರ್’ ಎಂದು ಕರೆಯಲಾಗುತ್ತದೆ.

ಸೂರ್ಯಗ್ರಹಣದಿಂದ ಭಾರತ ದೇಶದ ಜನರಿಗೆ ಯಾವುದೇ ಎಫೆಕ್ಟ್ ಆಗುತ್ತಿಲ್ಲ.. ಕಾಣೋದಿಲ್ಲ ಅಂದ ಮೇಲೆ ಎಫೆಕ್ಟ್ ಹೇಗ್ ಆಗುತ್ತೆ ಹೇಳಿ.. ಅದಕ್ಕೆ ನೀವು ಭಯ ಪಡೋ ಅಗತ್ಯವಿಲ್ಲ.. ಕೆಲ ರಾಶಿಗಳಿಗೆ ಇದ್ರ ಎಫೆಕ್ಟ್ ಆಗುತ್ತೆ ಅಂತಾ ಹೇಳುತ್ತಿದ್ದರು, ಕೆಲವರು ಇದ್ರಿಂದ ಯಾವ ರಾಶಿಗೂ ಎಫೆಕ್ಟ್ ಆಗಲ್ಲ ಎನ್ನುತ್ತಿದ್ದಾರೆ. ಆದ್ರೆ ಆಗಸದಲ್ಲಿ ನಡೆಯೋ  ಚಂದ್ರ ಹಾಗೂ ಸೂರ್ಯನ ಕಣ್ಣಾಮುಚ್ಚಾಲೇ ಆಟ ನೋಡೋದಕ್ಕೆ ನೇರವಾಗಿ ಸಿಗಲ್ಲ ಅನ್ನೋದೇ ಬೇಸರ.

Kishor KV