ಈ ದೇವಸ್ಥಾನದಲ್ಲಿ ದೀಪಾವಳಿ ವೇಳೆ ಭಕ್ತರಿಗೆ ಚಿನ್ನ, ಬೆಳ್ಳಿಯೇ ಪ್ರಸಾದ! – ಭಾರತದಲ್ಲಿರುವ ಈ ದೇಗುಲದ ವಿಶೇಷತೆ ಏನು?

ದೇವಸ್ಥಾನಗಳಲ್ಲಿ ಪ್ರಸಾದವಾಗಿ ಸ್ಟೀಟ್, ಅನ್ನ ಪ್ರಸಾದ, ಲಡ್ಡು ಮುಂತಾದವುಗಳನ್ನ ಭಕ್ತರಿಗೆ ನೀಡಲಾಗುತ್ತದೆ. ಇನ್ನೂ ಕೆಲವು ದೇವಸ್ಥಾನಗಳಲ್ಲಿ ಮದ್ಯವನ್ನು, ಪುಸ್ತಕವನ್ನು, ನೂಡಲ್ಸ್ ಅಥವಾ ಸಿಡಿಗಳನ್ನು ನೀಡೋ ಬಗ್ಗೆ ನಾವು ಕೇಳಿದ್ದೇವೆ. ಆದ್ರೆ ಇಲ್ಲೊಂದು ದೇವಸ್ಥಾನದಲ್ಲಿ ದೀಪಾವಳಿ ವೇಳೆ ಭಕ್ತರಿಗೆ ಪ್ರಸಾದವಾಗಿ ಚಿನ್ನವನ್ನ ನೀಡಲಾಗ್ತಿದೆ.
ಇದನ್ನೂ ಓದಿ: ಹೃದಯದ ಆರೋಗ್ಯಕ್ಕೆ ಈ ವ್ಯಾಯಾಮ ಬೆಸ್ಟ್! – ದಿನಕ್ಕೆ 20 ನಿಮಿಷ ಹೀಗೆ ಮಾಡಿದ್ರೆ ಆಯಸ್ಸು ಹೆಚ್ಚಾಗುತ್ತೆ!
ಅಚ್ಚರಿಯಾದ್ರೂ ಸತ್ಯ.. ಮಧ್ಯಪ್ರದೇಶದ ರತ್ಲಾಂ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಪ್ರತಿ ವರ್ಷ ದೀಪಾವಳಿ ವೇಳೆ ದೇವಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತದೆ. ಹಬ್ಬದ ದಿನ ಭಕ್ತರು ದೇವಿ ದರ್ಶನ ಪಡೆಯುತ್ತಾರೆ. ಇನ್ನೊಂದು ವಿಶೇಷ ಏನಂದ್ರೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಿನ್ನ ಹಾಗೂ ಬೆಳ್ಳಿ ನಾಣ್ಯಗಳನ್ನು ಪ್ರಸಾದದ ರೂಪದಲ್ಲಿ ನೀಡುವ ವಾಡಿಕೆ ಸಾಕಷ್ಟು ವರ್ಷಗಳಿಂದ ಬಂದಿದೆ.
ಅಂದ್ಹಾಗೆ ರತ್ಲಾಂ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದದ ರೂಪದಲ್ಲಿ ಚಿನ್ನ, ಬೆಳ್ಳಿ ನೀಡುವುದಕ್ಕೂ ಒಂದು ಕಾರಣವಿದೆ. ಚಿನ್ನವನ್ನು ನೀಡುವ ಈ ಸಂಪ್ರದಾಯವು ದಶಕಗಳಿಗಿಂತ ಹಿಂದಿನಿಂದ ನಡೆದುಕೊಂಡು ಬರುತ್ತಿದೆ. ದಂತಕಥೆಯ ಪ್ರಕಾರ, ಈ ಪ್ರದೇಶವನ್ನು ಆಳ್ವಿಕೆ ಮಾಡುತ್ತಿದ್ದ ಮಹಾರಾಜರು ತಾಯಿಯ ಆಶೀರ್ವಾದಕ್ಕಾಗಿ ದೇವಿಗೆ ಆಭರಣ ಹಾಗೂ ಹಣವನ್ನು ಅರ್ಪಿಸುತ್ತಿದ್ದರು. ಅದೇ ಇಂದಿಗೂ ನಡೆಸಿಕೊಂಡು ಬರಲಾಗುತ್ತಿದೆ. ಧನತ್ರಯೋದಶಿಯಿಂದ ಆರಂಭಗೊಂಡು 5 ದಿನಗಳವರೆಗೆ ದೇವಿಯ ದರ್ಶನದ ನಂತರ ಪ್ರಸಾದದ ರೂಪದಲ್ಲಿ ಅಮೂಲ್ಯ ವಸ್ತುಗಳನ್ನು ನೀಡಲಾಗುತ್ತದೆ.
ಇನ್ನು ಈ ದೇವಸ್ಥಾನದಲ್ಲಿ ದೇವಿಯ ಅಲಂಕಾರವನ್ನ ಹೂವುಗಳ ಬದಲಾಗಿ ಕೋಟ್ಯಾಂತರ ರೂಪಾಯಿಗಳ ನೋಟಿನಲ್ಲಿ, ಬೆಲೆ ಬಾಳುವ ಚಿನ್ನ ಆಭರಣಗಳು, ವಜ್ರಗಳಂತಹ ಅಮೂಲ್ಯ ರತ್ನಗಳಿಂದ ಅಲಂಕರಿಸಲಾಗುತ್ತದೆ. ದೇವಿಯ ಬಳಿಯಲ್ಲಿರುವ ಈ ಎಲ್ಲಾ ಸಂಪತ್ತನ್ನು ಕುಬೇರನ ನಿಧಿ ಎಂದೇ ಕರೆಯಲಾಗುತ್ತದೆ. ದೇವಿಗೆ ಅಲಂಕರಿಸಲ್ಪಡುವ ಹಣ, ಆಭರಣಗಳನ್ನು ಭಕ್ತರೇ ದೇವಿಗೆ ನೀಡುತ್ತಾರೆ. ನಂತರ ಅವುಗಳನ್ನು ದೀಪಾವಳಿ ಹಬ್ಬದ ನಂತರ ಪ್ರಸಾದದ ರೂಪದಲ್ಲಿ ಭಕ್ತರಿಗೆ ಹಂಚಲಾಗುತ್ತದೆ.
ದೀಪಾವಳಿ ಹಬ್ಬದ ಸಮಯದಲ್ಲಿ ದೇವಿಗೆ ಅಲಂಕರಿಸಿದ ಆಭರಣಗಳು, ನಗದುಗಳನ್ನು ಗುರ್ಭಗುಡಿಯಲ್ಲಿ ಶೇಖರಿಸಿ ಇಡಲಾಗುತ್ತದೆ. ಅದನ್ನು ವಿಶೇಷವಾಗಿ ಕುಬೇರ ನಿಧಿ ದರ್ಶನ ಎಂದೇ ಕರೆಯುತ್ತಾರೆ. ಈ ದರ್ಶನಕ್ಕಾಗಿ ದೇಶದ ಹಲವು ಭಾಗಗಳಿಂದ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಸಂಪತ್ತಿನ ಬಿಗಿ ಭದ್ರತೆಗಾಗಿ ದೇವಸ್ತಾನದ ಸುತ್ತ ಪೋಲಿಸರು ಸುತ್ತುವರೆದಿರುತ್ತಾರೆ.

ನೋಡಿರಿ

