ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾ ಶಿವರಾತ್ರಿ ಸಂಭ್ರಮ – ಭಕ್ತರಿಗೆ ಸಕಲ ಸೌಲಭ್ಯ

ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾ ಶಿವರಾತ್ರಿ ಸಂಭ್ರಮ – ಭಕ್ತರಿಗೆ ಸಕಲ ಸೌಲಭ್ಯ

ಪವಿತ್ರ ಕ್ಷೇತ್ರವಾದ ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾ ಶಿವರಾತ್ರಿ ಸಂಭ್ರಮ ಮನೆ ಮಾಡಿದ್ದು, ಒಟ್ಟು 5 ದಿನಗಳ ಜಾತ್ರೆ ನಡೆಯಲಿದೆ. 18 ರವರೆಗೆ  ನಡೆಯುವ ಮಹಾಶಿವರಾತ್ರಿ ಜಾತ್ರೆಯ ಪ್ರಯುಕ್ತ ಲಕ್ಷಾಂತರ ಭಕ್ತಾಧಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸುವ ಹಿನ್ನಲೆಯಲ್ಲಿ ಅಗತ್ಯ ಸಿದ್ಧತೆಗಳ ತಯಾರಿ ಮಾಡಲಾಗಿದೆ

ಇಂದು ಮಹಾಶಿವರಾತ್ರಿ ಶ್ರೀ ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ ಮತ್ತು ವಿಶೇಷ ಪೂಜಾ ಕಾರ್ಯಕ್ರಮಗಳು ಉತ್ಸಾವದಿಗಳು ಮತ್ತು ಜಾಗರಣೆ ಉತ್ಸವ ಹಾಗೂ ಯಾಮ ಪೂಜೆಯ ನಂತರ ಶ್ರೀ ಸ್ವಾಮಿಗೆ ಬಂಗಾರದ ಕಿರೀಟಧಾರಣೆ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ:  ಕಷ್ಟಗಳು ಕರಗಬೇಕಾ? – ಸೋಮವಾರ ಶಿವನ ಈ ಮಂತ್ರಗಳನ್ನ ಪಠಿಸಿ

16ರ ಸೋಮವಾರ ಶ್ರೀ ಸ್ವಾಮಿಗೆ ವಿಶೇಷ ಪೂಜೆ ಸೇವೆ ಮತ್ತು ಉತ್ಸಾವದಿಗಳು, 17ರ ಮಂಗಳವಾರ ಮಹಾಶಿವರಾತ್ರಿ ಅಮಾವಾಸ್ಯೆ ವಿಶೇಷ ಸೇವೆ ಮತ್ತು ಉತ್ಸಾವಾದಿಗಳು ನಡೆಯಲಿದೆ. 18ರ ಬುಧುವಾರ ಮಹಾಶಿವರಾತ್ರಿ ಮಹಾ ರಥೋತ್ಸವ ಬೆಳಗ್ಗೆ 10ರಿಂದ 11ಗಂಟೆಯವರೆಗೆ ಹಾಗೂ ಮಹಾರಾಥೋತ್ಸವದ ನಂತರ ಕುರು ಬ್ರಹ್ಮೋತ್ಸವ ಮತ್ತು ಅನ್ನಬ್ರಹ್ಮೋತ್ಸವ ಹಾಗೂ ರಾತ್ರಿ ಅಭಿಷೇಕ ಪೂಜೆ ಮುಗಿದ ನಂತರ ಕೊಂಡೋತ್ಸವ ವಿಶೇಷ ಪೂಜಾ ಕಾರ್ಯಕ್ರಮಗಳು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದೆ.

ಸಕಲ ಸೌಲಭ್ಯ   

ಕ್ಷೇತ್ರದಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಭಕ್ತರಿಗೆ ನೆರಳಿನ ವ್ಯವಸ್ಥೆ ಹಾಗೂ ವಿಶೇಷ ದಾಸೋಹ ವ್ಯವಸ್ಥೆಗೆ ಸಹ ಕ್ರಮ ಕೈಗೊಳ್ಳಲಾಗಿದೆ.ಮಹಾಶಿವರಾತ್ರಿ ಹಬ್ಬದ ದಿನದಂದು ಈ ಬಾರಿ ರಾತ್ರಿ ಜಾಗರಣೆ ಮಾಡುವ ಭಕ್ತರಿಗೆ ಅನುಕೂಲವಾಗಲು ಮಾದಪ್ಪನ ಭಕ್ತಿಗೀತೆ, ಜಾನಪದ ಗೀತೆ, ಕಥಾಪ್ರಸಂಗ, ಭಕ್ತಾದಿಗಳಿಗೆ ಮೂಲಭೂತ ಸೌಲಭ್ಯಗಳ ವ್ಯವಸ್ಥೆಯನ್ನು ಸಹ ಹಮ್ಮಿಕೊಳ್ಳಲಾಗಿದೆ.

Kishor KV

Leave a Reply

Your email address will not be published. Required fields are marked *