ಕರ್ಣನ ಪಾತ್ರದಿಂದ ಮನೆಮಾತಾಗಿದ್ದ ಬಹುಬಾಷ್ ನಟ ಪಂಕಜ್ ಧೀರ್ ವಿಧಿವಶ

ಹಿಂದಿಯ ಕಿರುತೆರೆಯಲ್ಲಿ ಸಾರ್ವಕಾಲಿಕ ಹಿಟ್ ಎನಿಸಿಕೊಂಡಿದ್ದ ಬಿ. ಆರ್. ಛೋಪ್ರಾ ನಿರ್ದೇಶನದ ‘ಮಹಾಭಾರತ’ ಸೀರಿಯಲ್‌ನಲ್ಲಿ ಕರ್ಣನ ಪಾತ್ರ ಮಾಡಿದ್ದ ನಟ ಪಂಕಜ್ ಧೀರ್ ಅವರು ಸಾವನ್ನಪ್ಪಿದ್ದಾರೆ. ಅಕ್ಟೋಬರ್ 15ರಂದು ಪಂಕಜ್ ನಿಧನರಾಗಿದ್ದು, ಅವರಿಗೆ ಕ್ಯಾನ್ಸರ್ ಕಾಯಿಲೆ ಇತ್ತು. ಚಿಕಿತ್ಸೆ ಫಲಕಾರಿಯಾಗದೇ ಪಂಕಜ್ ಕೊನೆಯುಸಿರೆಳೆದಿದ್ದಾರೆ. ಪಂಕಜ್ ಅವರ ಅಕಾಲಿಕ ನಿಧನ ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿದೆ.
ಇದನ್ನೂ ಓದಿ: SSLC , PUC ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್! – ಇನ್ಮುಂದೆ 33% ಅಂಕ ಗಳಿಸಿದ್ರೂ ಪಾಸ್!
ಪಂಕಜ್ ಧೀರ್ ಅವರ ಆತ್ಮೀಯ ಸ್ನೇಹಿತ ಹಾಗೂ ನಟ ಅಮಿತ್ ಬಹಲ್, ಪಂಕಜ್ ನಿಧನದ ಸುದ್ದಿಯನ್ನು ಖಚಿತಪಡಿಸಿದ್ದಾರೆ. “ಪಂಕಜ್ ಧೀರ್ ಅವರಿಗೆ ಕ್ಯಾನ್ಸರ್ ಇತ್ತು. ಅವರು ಈ ಕಾಯಿಲೆಯಿಂದ ಗುಣಮುಖರಾಗಿದ್ದರು. ಆದರೆ ಕೆಲವು ತಿಂಗಳ ಹಿಂದೆ ಕ್ಯಾನ್ಸರ್ ಮತ್ತೆ ಕಾಣಿಸಿಕೊಂಡಿತ್ತು. ಪಂಕಜ್‌ಗೆ ಶಸ್ತ್ರಚಿಕಿತ್ಸೆಯೂ ಕೂಡ ನಡೆದಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.

ಪಂಕಜ್ ಧೀರ್ ಅವರು ಅನೇಕ ಸಿನಿಮಾಗಳು ಮತ್ತು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ‘ಮಹಾಭಾರತ’ ಸೀರಿಯಲ್‌ನ ‘ಕರ್ಣ’ನ ಪಾತ್ರವು ಪಂಕಜ್‌ಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ‘ಚಂದ್ರಕಾಂತ’ ಧಾರಾವಾಹಿಯಲ್ಲಿ ಶಿವದತ್ತನ ಪಾತ್ರದಲ್ಲೂ ಅವರು ಪ್ರೇಕ್ಷಕರ ಮನಗೆದ್ದಿದ್ದರು. ‘ಬಢೋ ಬಹು’, ‘ಯುಗ್’, ‘ದ ಗ್ರೇಟ್ ಮರಾಠಾ’ ಮತ್ತು ‘ಅಜೂನಿ’ ಮುಂತಾದ ಧಾರಾವಾಹಿಗಳಲ್ಲಿಯೂ ನಟಿಸಿ, ಸೈ ಎನಿಸಿಕೊಂಡಿದ್ದರು.

ಪಂಕಜ್ ನಟಿಸಿದ್ದ ಸಿನಿಮಾಗಳು ಇದರ ಜೊತೆಗೆ ‘ಸೋಲ್ಜರ್’, ‘ತುಮ್ಕೋ ನಾ ಭೂಲ್ ಪಾಯೆಂಗೆ’, ‘ರಿಶ್ತೆ’, ‘ಅಂದಾಜ್’, ‘ಸಡಕ್’ ಮತ್ತು ‘ಬಾದ್‌ಷಾ’, ‘ಆಶೀಕ್ ಅವಾರ’, ‘ಇಕ್ಕೆ ಪೆ ಇಕ್ಕಾ’, ‘ಝಮೀನ್’, ‘ಜಾಗೃತಿ’ ಮುಂತಾದ ಸಿನಿಮಾಗಳಲ್ಲಿಯೂ ಪಂಕಜ್ ಧೀರ್ ನಟಿಸಿದ್ದಾರೆ. ಕೊನೆಯದಾಗಿ ಅವರು ‘ಧ್ರುವ್ ತಾರಾ’ ಎಂಬ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದರು.

ನೋಡಿರಿ

