ಮನೆಯಲ್ಲಿ ಶಿವ ಪೂಜೆ ಮಾಡುವುದು ಹೇಗೆ? – ಶಿವರಾತ್ರಿಯ ದಿನ ಅನುಸರಿಸಬೇಕಾದ ಕ್ರಮಗಳೇನು?

ಮನೆಯಲ್ಲಿ ಶಿವ ಪೂಜೆ ಮಾಡುವುದು ಹೇಗೆ? – ಶಿವರಾತ್ರಿಯ ದಿನ ಅನುಸರಿಸಬೇಕಾದ ಕ್ರಮಗಳೇನು?

ಶಿವ ನಮ್ಮನ್ನೆಲ್ಲ ಪೊರೆವ ದೈವ. ಶಿವನೇ ಭಕ್ತರಿಗೆ ಅಭಯ ಹಸ್ತ ಚಾಚುವ ಶಕ್ತಿ. ಪೂರ್ಣ ಮನಸ್ಸಿನಿಂದ ಭಜಿಸುವ ಭಕ್ತರಿಗೆ ಹಿಂದೆಮುಂದೆ ನೋಡದೆ ವರ ಕೊಡುವವ ಶಂಕರ. ದೇಹದೊಳಗೆ ಹುದುಗಿರುವ, ದೇಹವನ್ನೂ ಮೀರಿ ಬೆಳೆಯಬಲ್ಲ ಮನಸ್ಸಿನಂತೆ ಜಗತ್ತನ್ನು ಆವರಿಸಿ ನಿಂತಿದೆ ಶಿವತತ್ವ. ಭಕ್ತರ ಇಷ್ಟಾನುಕೋರಿಕೆಯನ್ನು ನೆರವೇರಿಸುವ ಮಂಗಳ ಸ್ವರೂಪಿ ಶಿವ, ಧ್ಯಾನಪ್ರಿಯ.  ಧ್ಯಾನ-ಜಪದಂಥ ವೈಯಕ್ತಿಕ ಸಾಧನೆಯ ಜೊತೆಗೆ, ಸಂಕೀರ್ತನೆಯಂತಹ ಸಾಮೂಹಿಕ ಭಜನೆಯೂ ಶಿವರಾತ್ರಿಯಂದು ಇರುವುದು ವಿಶೇಷ. ಫಾಲ್ಗುಣ ಮಾಸದಲ್ಲಿ ಬರುವ ಶಿವರಾತ್ರಿ ಹಿಂದೂಗಳಲ್ಲಿ ಬಹಳ ವಿಶೇಷ. ಈ ಶಿವರಾತ್ರಿಯ ದಿನ ಶಿವನನ್ನು ಹೇಗೆ ಪೂಜಿಸಬೇಕು, ಮನೆಯಲ್ಲೇ ಶಿವನನ್ನು ಪೂಜಿಸಲು ಅನುಸರಿಸಬೇಕಾದ ಕ್ರಮಗಳೇನು ಎಂಬ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಕ್ರಿಕೆಟ್ ಅಭಿಮಾನಿಗಳಿಗೆ ಈ ವರ್ಷ ಸಿಕ್ಕಾಪಟ್ಟೆ ಮನರಂಜನೆ – T20 ವಿಶ್ವಕಪ್ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಉಚಿತ

ಹಿಂದೂ ಧರ್ಮಗ್ರಂಥಗಳಲ್ಲಿ ಮಹಾಶಿವರಾತ್ರಿಗೆ ಹೆಚ್ಚಿನ ಮಹತ್ವವಿದೆ. ಶಿವರಾತ್ರಿ ಹಬ್ಬದಂದು ಪರಮೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ದಿನ ಅನೇಕ ಶಿವಭಕ್ತರು ಶಿವಾಲಯಗಳಲ್ಲಿ ಜಲಾಭಿಷೇಕ ಮಾಡುತ್ತಾರೆ. ಆದರೆ ಕೆಲವರು ಮನೆಯಲ್ಲಿಯೇ ಶಿವನಿಗೆ ಪೂಜೆ ಮಾಡುತ್ತಾರೆ. ಮನೆಯಲ್ಲಿ ಶಿವ ಪೂಜೆ ಮಾಡುವವರು ಈ ಪೂಜಾ ವಿಧಾನಗಳನ್ನು ತಪ್ಪದೇ ಪಾಲಿಸಬೇಕಾಗುತ್ತದೆ.

ಪುರಾಣಗಳ ಪ್ರಕಾರ, ಮನೆಯಲ್ಲಿ ಶಿವಲಿಂಗ ಅಥವಾ ಶಿವನ ವಿಗ್ರಹವು ಯಾವಾಗಲೂ ಈಶಾನ್ಯ ದಿಕ್ಕಿಗೆ ಎದುರಾಗಿ ಇಡಬೇಕು. ಹೀಗೆ ಮಾಡಿದರೆ ಶಿವನ ಕೃಪೆ ಸಿಗುತ್ತದೆ. ಶಿವಲಿಂಗವನ್ನು ಈಶಾನ್ಯ ಮೂಲೆಯಲ್ಲಿ ಇರಿಸುವುದರಿಂದ ಮನೆಯಲ್ಲಿ ಯಾವುದೇ ಅಪಘಡಗಳು ಸಂಭವಿಸುವುದಿಲ್ಲ. ಶಿವಲಿಂಗವನ್ನು ಇರಿಸಿರುವ ಬಲಿಪೀಠವನ್ನು ಸ್ವಚ್ಛಗೊಳಿಸಿ, ನಂತರ ಶಿವಲಿಂಗವನ್ನು ಇಡಬೇಕು.

ಪುರಾಣಗಳ ಪ್ರಕಾರ, ಮನೆಯಲ್ಲಿ ಶಿವನ ಫೋಟೊ ಅಥವಾ ಮೂರ್ತಿಯನ್ನು ಇಡುವಾಗ ಧ್ಯಾನಸ್ಥ ಸ್ಥಿತಿಯಲ್ಲಿರುವುದನ್ನು ಇಡುವುದು ಮುಖ್ಯವಾಗುತ್ತದೆ. ಅಂತಹ ಫೋಟೊ ಅಥವಾ ವಿಗ್ರಹವನ್ನು ಇಟ್ಟುಕೊಳ್ಳುವುದರಿಂದ ಎಲ್ಲಾ ರೀತಿಯ ಸಂತೋಷ, ನೆಮ್ಮದಿ ಸಿಗುತ್ತದೆ ಎಂಬುದು ನಂಬಿಕೆ.

ಇನ್ನು ಶಾಸ್ತ್ರಗಳ ಪ್ರಕಾರ ಕಪ್ಪು ಬಣ್ಣದ ಶಿವಲಿಂಗವನ್ನು ಆಯ್ಕೆ ಮಾಡಬೇಕು. ಬಿಳಿಯ ಶಿವಲಿಂಗವನ್ನು ಪೂಜಿಸಬಾರದು ಎಂದು ಶಾಸ್ತ್ರಗಳು ಸೂಚಿಸುತ್ತವೆ. ಬಿಳಿಯ ಶಿವಲಿಂಗವನ್ನು ಅನೇಕರು ವೈರಾಗ್ಯದ ಸಂಕೇತವೆಂದು ಪರಿಗಣಿಸುತ್ತಾರೆ. ಮನೆಯಲ್ಲಿ ಕಪ್ಪು ಶಿವಲಿಂಗವು ಇರಿಸುವುದರಿಂದ ಹಲವು ಪ್ರಯೋಜನಗಳಿವೆ.

ಇನ್ನು ನರ್ಮದಾ ನದಿಯ ದಡದಲ್ಲಿ ಕಲ್ಲಿನಿಂದ ಮಾಡಿದ ಶಿವಲಿಂಗವನ್ನು ಪೂಜಿಸುವುದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ. ಮನೆಯಲ್ಲಿ ಒಂದೇ ಕಡೆ ಒಂದಕ್ಕಿಂತ ಹೆಚ್ಚು ಶಿವಲಿಂಗಗಳನ್ನು ಇಡಬೇಡಿ. ಶಿವಲಿಂಗ ಇರುವ ಪಾತ್ರೆಯಲ್ಲಿ ಚಿನ್ನ, ಬೆಳ್ಳಿ, ತಾಮ್ರ ಇದ್ದರೆ ಒಳ್ಳೆಯದು ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ.

ಇನ್ನು ಮಹಾಶಿವರಾತ್ರಿ ಹಬ್ಬದ ದಿನದಂದು, ಅನೇಕ ಭಕ್ತರು ತಮ್ಮ ಆರಾಧ್ಯ ದೇವಾದಿದೇವ ಮಹಾದೇವನನ್ನು ಪ್ರಸನ್ನಗೊಳಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಾರೆ. ಭಗವಾನ್ ಶಿವನ ಆರಾಧನೆಯು ಧರ್ಮಗ್ರಂಥಗಳಲ್ಲಿ ಅತ್ಯಂತ ಸುಲಭವಾಗಿದೆ ಎಂದು ಹೇಳಲಾಗುತ್ತದೆ. ಬಿಲ್ವ ಎಲೆಗಳು, ದಾತುರಾ ಮತ್ತು ಸಾಕಷ್ಟು ನೀರಿನಿಂದ ಕೂಡ ಶಿವನು ಪ್ರಸನ್ನನಾಗುತ್ತಾನೆ ಎಂದು ನಂಬಲಾಗಿದೆ. ಆದ್ದರಿಂದಲೇ ಭಕ್ತರು ತಮ್ಮ ಆರಾಧ್ಯ ಶಿವನ ಆರಾಧನೆಯಲ್ಲಿ ಈ ಮೂರು ವಿಷಯಗಳನ್ನು ಎಂದಿಗೂ ಮರೆಯಬಾರದು. ಮಹಾಶಿವರಾತ್ರಿಯ ಈ ಅಂತಿಮ ಮತ್ತು ಪವಿತ್ರ ದಿನದಂದು ನೀವು ಅವನನ್ನು ಮೆಚ್ಚಿಸಲು ಬಯಸಿದರೆ, ಮಹಾಶಿವರಾತ್ರಿಯ ಈ ಪವಿತ್ರ ದಿನದಂದು ಶಿವಪೂಜೆಯ ಸಮಯದಲ್ಲಿ ಅವನನ್ನು ಪಂಚಾಮೃತದಿಂದ ಅಭಿಷೇಕ ಮಾಡಿ, ಬಿಲ್ವಪತ್ರೆ ಮತ್ತು ದಾತುರಾವನ್ನು ಅರ್ಪಿಸಲು ಮರೆಯಬೇಡಿ. ಇದರಿಂದ ನೀವು ಮಹಾದೇವನ ಸಂಪೂರ್ಣ ಅನುಗ್ರಹವನ್ನು ಪಡೆಯಬಹುದು.

Shwetha M