ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ್ದು ಬೆಳ್ಳಿ ನಾಣ್ಯ! – ಗ್ರಾಹಕನ ಕೈಸೇರಿದ್ದು ಏನು ಗೊತ್ತಾ?

ಇದು ಆನ್‌ಲೈನ್ ಯುಗ.. ಮನೆಯಲ್ಲಿ ಕುಳಿತುಕೊಂಡೇ ತಿನ್ನೋ ಆಹಾರ.. ಬಟ್ಟೆ, ಮನೆಗೆ ಬೇಕಾದ ವಸ್ತುಗಳು ಸೇರಿದಂತೆ ಎಲ್ಲವನ್ನ ಆನ್‌ಲೈನ್ ಮೂಲಕ ಖರೀದಿಸುತ್ತೇವೆ. ಕೆಲವೊಮ್ಮೆ ಆನ್‌ಲೈನ್ ನಲ್ಲಿಆರ್ಡರ್ ಮಾಡಿದ ವಸ್ತುಗಳು ಲೇಟ್ ಆಗಿ ಬರುತ್ತೆ. ಇನ್ನೂ ಕೆಲವೊಮ್ಮೆ ನಾವು ಆರ್ಡರ್ ಮಾಡಿದ ವಸ್ತು ಬರೋ ಬದಲು ಇನ್ನೇನೋ ಬಂದಿರುತ್ತೆ. ಇಲ್ಲೊಬ್ಬ ವ್ಯಕ್ತಿಗೂ ಹೀಗೆ ಆಗಿದೆ. ವ್ಯಕ್ತಿಯೊಬ್ಬರು ಆನ್‌ಲೈನ್ ನಲ್ಲಿ ಬೆಳ್ಳಿ ನಾಣ್ಯಗಳು ಆರ್ಡರ್ ಮಾಡಿದ್ದಾರೆ. ಆದ್ರೆ ಮನೆಗೆ ಬಂದ ವಸ್ತುಗಳನ್ನ ನೋಡಿ ಅವರು ಶಾಕ್ ಆಗಿದ್ದಾರೆ.
ಇದನ್ನೂ ಓದಿ: 200 ರೂ. ಸಿನಿಮಾ ಟಿಕೆಟ್ ದರಕ್ಕೆ ತಡೆಯಾಜ್ಞೆ ಬೆನ್ನಲ್ಲೇ ಟಿಕೆಟ್ ದರ ಏರಿಕೆ! – ಹೊಂಬಾಳೆ ಫಿಲ್ಮ್ಸ್ ಗೆ ಹೈಕೋರ್ಟ್ ಶಾಕ್!
ಏನಿದು ಘಟನೆ?
ವಿನೀತ್ ಕೆ ಎಂಬಾತ ಸ್ವಿಗ್ಗಿಯಲ್ಲಿ ಬೆಳ್ಳಿ ನಾಣ್ಯಗಳನ್ನ ಆರ್ಡರ್ ಮಾಡಿದ್ದಾರೆ. ಆರ್ಡರ್ ಮಾಡಿದ ಕೆಲವೇ ಸಮಯದಲ್ಲಿ ಮನೆಬಾಗಿಲಿಗೆ ಬಂದಿದೆ. ಆದ್ರೆ ಇದನ್ನ ಓಪನ್ ಮಾಡಿ ನೋಡಿದಾಗ ವಿನೀತ್ ಶಾಕ್ ಆಗಿದ್ದಾರೆ. ಬೆಳ್ಳಿ ಕಾಯಿನ್ ಬದಲು ಮನೆಗೆ ಬಂದಿದ್ದು ಮ್ಯಾಗಿ ಹಾಗೂ ಹಳದಿರಾಮ್ಸ್ ಬ್ರ್ಯಾಂಡ್ ನ ಮಿಕ್ಸ್ಚರ್ ಪ್ಯಾಕೆಟ್ ಗಳು. ಇದೀಗ ಆನ್ಲೈನ್ ಶಾಪಿಂಗ್ ವೇಳೆ ತನಗಾದ ಈ ಕಹಿ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಹಂಚಿಕೊಂಡಿದ್ದಾರೆ.
ವಿನೀತ್ ಆರ್ಡರ್ ಮಾಡಿದ್ದನ್ನು ಸ್ಕ್ರೀನ್ ಶಾಟ್ ಸೇರಿದಂತೆ ಮನೆಗೆ ಬಂದ ಐಟಂಗಳ ಫೋಟೋವನ್ನು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಗೆ ಇದು ಸ್ವಿಗ್ಗಿ ಹಾರರ್ ಸ್ಟೋರಿ. ಬೆಳ್ಳಿ ನಾಣ್ಯಗಳನ್ನು ಆರ್ಡರ್ ಮಾಡಿದೆ, ಆದರೆ ಮ್ಯಾಗಿ ಮತ್ತು ಹಲ್ದಿರಾಮ್ ಪ್ಯಾಕೆಟ್‌ಗಳು ಸಿಕ್ಕಿತು. ಇಡೀ ಆರ್ಡರ್‌ನಲ್ಲಿ ಒಂದು ಪೌಚ್ ಮಾತ್ರ ಬೆಳ್ಳಿ ಕಾಯಿನ್ ಇತ್ತು. ಅದನ್ನು ಸೀಲ್ ಮಾಡಲಾಗಿತ್ತು. ಡೆಲಿವರಿ ನೀಡಿದ ಯುವಕ ನಾವು ಅದನ್ನು ತೆರೆಯಲು ಸಾಧ್ಯವಿಲ್ಲ ನೀವು ಸಂಪೂರ್ಣ ಆರ್ಡರ್ ತೆಗೆದುಕೊಳ್ಳಿ ಅಥವಾ ಆರ್ಡರ್ ರದ್ದುಗೊಳಿಸಿ ಎಂದರು ಎಂದು ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ.
ನಾನು ಸ್ವಿಗ್ಗಿ ಕಸ್ಟಮರ್ ಕೇರ್ ಜತೆಗೆ 40 ನಿಮಿಷ ಮಾತುಕತೆಯಲ್ಲೇ ಕಳೆಯಬೇಕಾಯ್ತು. ಆ ಬಳಿಕ ಕೇವಲ ಬ್ಯಾಗಷ್ಟನ್ನೇ ನಾನು ತೆಗೆದುಕೊಂಡೆ ಉಳಿದಿದ್ದನ್ನು ಡೆಲಿವರಿ ಬಾಯ್‌ಗೆ ನೀಡಿದೆ. ಹಿಂದಿರುಗಿಸಲು ಸಾಧ್ಯವಾಗದಿದ್ದರೆ ನೀವೇ ಸೇವಿಸಿ ನಾನು ಅದನ್ನು ಅರ್ಡರ್ ಮಾಡಿಲ್ಲ, ನನಗೆ ಅದು ಬೇಡ ಎಂದು ಹೇಳಿದೆ. ನಂತರ ಸ್ವೀಕರಿಸಿದ ಬೆಳ್ಳಿ ನಾಣ್ಯವೂ ಸರಿಯಾಗಿರಲಿಲ್ಲ, 999 ಕ್ವಾಲಿಟಿಯ ಬೆಳ್ಳಿ ನಾಣ್ಯದ ಬದಲಿಗೆ 925 ಮೌಲ್ಯದ ಬೆಳ್ಳಿ ನಾಣ್ಯ ಸ್ವೀಕರಿಸಬೇಕಾಯ್ತು. ಕಡಿಮೆ ಶುದ್ಧತೆಯ ನಾಣ್ಯದ ಜೊತೆಗೆ ಸ್ವಿಗ್ಗಿಯಲ್ಲಿ ಆರ್ಡರ್ ಮಾಡಲು ಹೋಗಿ ಹಲವು ರೀತಿಯ ಸಂಕಷ್ಟ ಎದುರಿಸಬೇಕಾಯ್ತು ಎಂದು ಹೇಳಿದ್ದಾರೆ.

ನೋಡಿರಿ

