ವಿಜಯ್‌ ಸಿನಿಮಾ ರಿಲೀಸ್‌ಗೆ ಸಿಕ್ತು ಗ್ರೀನ್‌ ಸಿಗ್ನಲ್!‌ – ಜನನಾಯಗನ್ ಗೆ U/A ಸರ್ಟಿಫಿಕೇಟ್‌ ನೀಡುವಂತೆ ಮದ್ರಾಸ್ ಹೈಕೋರ್ಟ್ ಆದೇಶ

ವಿಜಯ್‌ ಸಿನಿಮಾ ರಿಲೀಸ್‌ಗೆ ಸಿಕ್ತು ಗ್ರೀನ್‌ ಸಿಗ್ನಲ್!‌ – ಜನನಾಯಗನ್ ಗೆ U/A ಸರ್ಟಿಫಿಕೇಟ್‌ ನೀಡುವಂತೆ ಮದ್ರಾಸ್ ಹೈಕೋರ್ಟ್ ಆದೇಶ

ದಳಪತಿ ವಿಜಯ್‌ ಅವರು ನಟಿಸಿರುವ ಕೊನೆಯ ಸಿನಿಮಾ ಇಂದು ರಿಲೀಸ್‌ ಆಗ್ಬೇಕಿತ್ತು. ಆದ್ರೆ ಸೆನ್ಸಾರ್ ಕುರಿತ ಅಂಶಗಳು ಚಿತ್ರ ಬಿಡುಗಡೆಗೆ ಅಡ್ಡಿಯಾದ ಕಾರಣ ಸಿನಿಮಾ ರಿಲೀಸ್‌ಗೆ ಅಡಚಣೆಯಾಗಿತ್ತು. ಇದೀಗ ಕೊನೆಗೂ ಸಿನಿಮಾ ತಂಡಕ್ಕೆ ಬಿಗ್‌ ರಿಲೀಫ್‌ ಸಿಕ್ಕಿದೆ. ಚಿತ್ರ ರಿಲೀಸ್‌ಗೆ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ.

ಇದನ್ನೂ ಓದಿ: ಕರ್ಣನ ಮುಂದೆಯೇ ನಿಧಿಗೆ ಆಕ್ಸಿಡೆಂಟ್!‌ –  ನಿತ್ಯಾ ಮದುವೆ ಕ್ಯಾನ್ಸಲ್?  

ದಳಪತಿ ಅವರ ಕೊನೆಯ ಸಿನಿಮಾ ರಿಲೀಸ್‌ ಗೆ ಕೋಟ್ಯಂತರ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು.  ಇಂದು ಸಿನಿಮಾ ರಿಲೀಸ್‌ ಮಾಡಲು ಚಿತ್ರ ತಂಡ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ, ಕಳೆದ ಕೆಲವು ದಿನಗಳಿಂದ ಸೆನ್ಸಾರ್ ಮಂಡಳಿ ಹಾಗೂ ಸಿನಿಮಾದ ನಡುವಿನ ಗೊಂದಲ ಇದ್ದ ಕಾರಣ ಅಂದುಕೊಂಡ ದಿನ ರಿಲೀಸ್ ಆಗಿರಲಿಲ್ಲ. ಕೋರ್ಟ್‌ನಲ್ಲಿ ಈ ಬಗ್ಗೆ ಇಂದು ವಿಚಾರಣೆ ನಡೆದಿದ್ದು, ಚಿತ್ರ ಬಿಡುಗಡೆಗೆ ಗ್ರೀನ್‌ ಸಿಗ್ನಲ್ ನೀಡಿದೆ. ಮದ್ರಾಸ್‌ ಹೈಕೋರ್ಟ್‌ ಶುಕ್ರವಾರ (ಇಂದು) ಜನ ನಾಯಗನ್‌ ಸಿನಿಮಾಕ್ಕೆ ಯುಎ ಪ್ರಮಾಣ ಪತ್ರ ನೀಡುವಂತೆ ಸೆನ್ಸಾರ್‌ ಮಂಡಳಿಗೆ ಆದೇಶಿಸಿದೆ.

ಬದಲಾವಣೆಗಳನ್ನು ಮಾಡಿದ ಬಳಿಕ ಪ್ರಮಾಣ ಪತ್ರ ನೀಡಬೇಕೆಂದು ಸೆನ್ಸಾರ್‌ ಮಂಡಳಿಗೆ ಆದೇಶಿಸಿದೆ. ಮದ್ರಾಸ್‌ ಹೈಕೋರ್ಟ್‌ ಆದೇಶವು ಸೆನ್ಸಾರ್‌ ಸಂಕಷ್ಟಕ್ಕೆ ಸಿಲುಕಿದ್ದ ಸಿನಿ ತಂಡಕ್ಕೆ ಬಿಗ್‌ ರಿಲೀಫ್‌ ಸಿಕ್ಕಂತಾಗಿದೆ. ಅಲ್ಲದೇ ಇಂತಹ ದೂರುಗಳಿಗೆ ಉತ್ತೇಜನ ನೀಡುವುದು ಅಪಾಯಕಾರಿ ಪ್ರವೃತ್ತಿ. ಜನನಾಯಗನ್‌ ವಿರುದ್ಧ ಸಿನಿಮಾ ವಿರುದ್ಧ ಮೊದಲು ದೂರು ನೀಡಿ, ನಂತರ ಚಿಂತನೆ ಮಾಡ್ತಿರುವಂತೆ ತೋರುತ್ತದೆ ಎಂದು ಸೆನ್ಸಾರ್‌ ಮಂಡಳಿಯನ್ನ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿತು.

ಇನ್ನೂ ಜನನಾಯಗನ್ ತಮ್ಮ ಕೊನೆಯ ಸಿನಿಮಾ ಎಂದು ಈಗಾಗಲೇ ವಿಜಯ್‌ ಮಲೇಷ್ಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಹಾಗಾಗಿ, ಫ್ಯಾನ್ಸ್‌ ಈ ಸಿನಿಮಾದ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಮತ್ತೊಂದು ಕಡೆ ಕೇಂದ್ರ ಸರ್ಕಾರದ ದ್ವೇಷದ ರಾಜಕಾರಣ ಇದು ಅನ್ನೋ ಕೂಗು ವಿಜಯ್‌ ಅಭಿಮಾನಿಗಳ ಕಡೆಯಿಂದ ಕೇಳಿಬಂದಿದೆ. ಬ್ರಿಟನ್ ನಲ್ಲಿ ಸುಮಾರು 260 ಕ್ಕೂ ಹೆಚ್ಚು ಶೋಗಳನ್ನು ಜನನಾಯಗನ್ ಚಿತ್ರಕ್ಕೆ ನೀಡಲಾಗಿತ್ತು. ಇದುವರೆಗೆ, ಸುಮಾರು 65 ಸಾವಿರಕ್ಕೂ ಹೆಚ್ಚು ಟಿಕೆಟ್ ಗಳು ಮಾರಾಟವಾಗಿದ್ದವು.

Shwetha M