ಕದಿಯಲು ಬಂದು ಟಪಾಂಗುಚ್ಚಿ ಸ್ಟೆಪ್ – ಕಿಲಾಡಿ ಕಳ್ಳನಿಗೆ ಪೊಲೀಸರಿಂದ ಶೋಧ

ಕದಿಯಲು ಬಂದು ಟಪಾಂಗುಚ್ಚಿ ಸ್ಟೆಪ್ – ಕಿಲಾಡಿ ಕಳ್ಳನಿಗೆ ಪೊಲೀಸರಿಂದ ಶೋಧ

ಕಳ್ಳತನ ನಡೆಸುವ ವೇಳೆ ಯಾರಿಗೂ ಗುರುತು ಸಿಗಬಾರದು ಎಂದು ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಂಡು ಬರುತ್ತಾರೆ. ರಾತ್ರಿ ವೇಳೆ ಸೈಲೆಂಟ್ ಆಗಿ ಎಂಟ್ರಿಕೊಟ್ಟು, ಸುಳಿವೇ ಸಿಗದಂತೆ ಹೋಗಿರುತ್ತಾರೆ. ಆದರೆ ಇಲ್ಲೊಬ್ಬ ಕಳ್ಳತನಕ್ಕೆಂದು ಬಂದು ಆತ ಮಾಡಿದ್ದೇ ಬೇರೆ…. ಇದೀಗ ಆತನ ವಿಡಿಯೋ ವೈರಲ್ ಆಗುತ್ತಿದೆ.

ಮಧ್ಯಪ್ರದೇಶದಲ್ಲಿ ತಮಾಷೆಯ ಘಟನೆ ನಡೆದಿದ್ದು, ಎಲ್ಲೆಡೆ ವೈರಲ್ ಆಗಿದೆ. ಅಂಗಡಿಯೊಳಗೆ ಯಾರೂ ಇಲ್ಲದ ವೇಳೆ ಕಳ್ಳನೊಬ್ಬ ಸೈಲೆಂಟ್ ಆಗಿ ಎಂಟ್ರಿ ಕೊಟ್ಟಿದ್ದಾನೆ. ಈ ವೇಳೆ ಆತ ಗುಟ್ಖಾ ತಿಂದು ಮನಬಂದಂತೆ ಡ್ಯಾನ್ಸ್ ಮಾಡಿದ್ದಾನೆ. ಬಳಿಕ ಅಂಗಡಿಯಲ್ಲಿದ್ದ ಲ್ಯಾಪ್ ಟಾಪ್, ನಗದು ಮತ್ತು ಅಂಗಡಿಯಲ್ಲಿದ್ದ ಬ್ಯಾಂಕ್ ಖಾತೆಯ ಪ್ರತಿಗಳನ್ನು ತೆಗೆದುಕೊಳ್ಳುವ ದೃಶ್ಯ ಸಿಸಿ ಟಿವಿಯಲ್ಲಿ  ಸೆರೆಯಾಗಿದೆ.

ಇದನ್ನೂ ಓದಿ: ಗೂಳಿ ಕಾಳಗ ಬಿಡಿಸಲು ಹೋದ ಕುಡುಕ- ಹೀರೋ ಆಗಲು ಹೋಗಿ ಝೀರೋ ಆದ

ಈತ ಅದೇ ದಿನ ಎರಡು ಅಂಗಡಿಗಳನ್ನು ದರೋಡೆ ಮಾಡಿದ್ದಾನೆ. ಅಲ್ಲದೇ ಆತ ಸಿಸಿಟಿವಿಯನ್ನು ಗಮನಿಸಿದ್ದ ಆತ, ಹೊರಡುವ ಮೊದಲು ಅದನ್ನು ಒಡೆದು ಹಾಕಿದ್ದಾನೆ ಎಂದು ತಿಳಿದುಬಂದಿದೆ. ಈ ಸಂಬಂಧ ಖಣಿಯಾಧಾನ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಡ್ಯಾನ್ಸರ್ ಕಳ್ಳನಿಗಾಗಿ ಹುಡುಕಾಟ ನಡೆಸಿದ್ದಾರೆ.

suddiyaana