ಮಧ್ಯಪ್ರದೇಶ ವಿಧಾನಸಭೆ ಚುನಾವಣೆ – ದಿಮಾನಿ ಕ್ಷೇತ್ರದಲ್ಲಿ ಘರ್ಷಣೆ, ಇಬ್ಬರಿಗೆ ಗಾಯ

ಮಧ್ಯಪ್ರದೇಶ ವಿಧಾನಸಭೆ ಚುನಾವಣೆ – ದಿಮಾನಿ ಕ್ಷೇತ್ರದಲ್ಲಿ ಘರ್ಷಣೆ, ಇಬ್ಬರಿಗೆ ಗಾಯ

ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. 230 ಸ್ಥಾನಗಳಿಗೆ ಏಕಕಾಲದಲ್ಲಿ ಮತದಾನ ನಡೆಯುತ್ತಿದೆ. ಮೊರೆನಾ ಜಿಲ್ಲೆಯ ದಿಮಾನಿ ವಿಧಾನಸಭೆ ಕ್ಷೇತ್ರದಲ್ಲಿ ಘರ್ಷಣೆ ನಡೆದಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಪ್ರತಿನಿಧಿಸುವ ದಿಮಾನಿ ವಿಧಾನಸಭೆ ಕ್ಷೇತ್ರದ ಮಿರ್ಫಾನ್‌ ಗ್ರಾಮದ ಮತಗಟ್ಟೆ 147 ಹಾಗೂ 148 ರಲ್ಲಿ ಘರ್ಷಣೆ ನಡೆದಿದೆ. ಎರಡು ಗುಂಪುಗಳ ಮಧ್ಯೆ ಕಲ್ಲುತೂರಾಟ ನಡೆದಿದ್ದು ಇಬ್ಬರು ಗಾಯಗೊಂಡಿದ್ದಾರೆ ಎಂದು ಮೊರೆನಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಶೈಲೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹಮಾಸ್‌ ಉಗ್ರರಿಗಾಗಿ ಮೂಲೆ ಮೂಲೆಯಲ್ಲೂ ಶೋಧ! – ಗಾಜಾದಲ್ಲಿ ಉಗ್ರ ಮುಖಂಡನ ಮನೆಯಲ್ಲಿ ಬಾಂಬ್ ಇಟ್ಟು ಉಡಾಯಿಸಿದ ಇಸ್ರೇಲ್

ಮತದಾರರು ಮತದಾನ ಮಾಡದಂತೆ ತಡೆಯುತ್ತಿದ್ದಕ್ಕೆ ಮಿರ್ಧಾನ್ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ವರದಿಯಾಗಿದೆ. ಗ್ರಾಮದಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಕೆಲವು ವಾಹಿನಿಗಳು ತಪ್ಪಾಗಿ ವರದಿ ಮಾಡಿವೆ. ಗುಂಡಿನ ದಾಳಿ ನಡೆದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಘರ್ಷಣೆಯಲ್ಲಿ ಗಾಯಗೊಂಡವರನ್ನು ಅಜಯ್ ಶರ್ಮಾ ಮತ್ತು ರಾಮ ಪ್ರತಾಪ್ ಶರ್ಮಾ ಎಂದು ಗುರುತಿಸಲಾಗಿದೆ.  ಇವರಿಗೆ ದುಷ್ಕರ್ಮಿಗಳು ದೊಣ್ಣೆಗಳಿಂದ ಹೊಡೆದು ಗಾಯಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.

Shwetha M