ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮೂರು ದಿನದ ಅಂತರದಲ್ಲಿ ಚೀತಾದ 3 ಮರಿ ಸಾವು

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮೂರು ದಿನದ ಅಂತರದಲ್ಲಿ ಚೀತಾದ 3 ಮರಿ ಸಾವು

ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿರುವ ಚೀತಾದ ಎರಡು ಮರಿಗಳು ಸಾವನ್ನಪ್ಪಿವೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಕಳೆದ ಮೂರು ದಿನದಲ್ಲಿ ಮೃತಪಟ್ಟ ಚೀತಾ ಮರಿಗಳ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: ಚೀತಾ, ಹೈನಾವನ್ನು ಹೀಗೂ ಮಂಗ ಮಾಡಬಹುದು! – ಜಿಂಕೆ ಚಳ್ಳೆಹಣ್ಣು ತಿನ್ನಿಸಿದ್ದು ಹೇಗೆ?

ಜ್ವಾಲಾ ಎಂಬ ಹೆಸರಿನ ಚೀತಾ ಮಾ.24 ರಂದು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ನಾಲ್ಕು ಮರಿಗಳ ಪೈಕಿ ಒಂದು ಮರಿ ಮೇ 23 ರಂದು ಸಾವನ್ನಪ್ಪಿತ್ತು. ಗುರುವಾರ ಮತ್ತೆ ಎರಡು ಮರಿಗಳು ಸಾವನ್ನಪ್ಪಿವೆ. ಬದುಕಿರುವ ಇನ್ನೊಂದು ಚೀತಾ ಮರಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ಮರಿ ಬಲಹೀನತೆಯಿಂದ ಸಾವನ್ನಪ್ಪಿತ್ತು. ಗುರುವಾರ 2 ಚೀತಾ ಮರಿಗಳು ಸಾವನ್ನಪ್ಪುವ ಮೂಲಕ 2 ತಿಂಗಳಲ್ಲಿ 6 ಚೀತಾಗಳು ಸಾವನ್ನಪ್ಪಿವೆ. ಈ ಪೈಕಿ  ಇಲ್ಲೇ ಹುಟ್ಟಿದ ಚೀತಾಗಳಷ್ಟೇ ಅಲ್ಲದೇ ಆಫ್ರಿಕಾದಿಂದ ತಂದಿದ್ದ ಮೂರು ಚೀತಾಗಳೂ ಇವೆ.

suddiyaana