ಸಚಿವರ ಮೇಲೆ ತುರಿಕೆ ಪುಡಿ – ಸಭೆಯಲ್ಲೇ ಬಟ್ಟೆ ಬಿಚ್ಚಿ ತೊಳೆದುಕೊಂಡ ವಿಡಿಯೋ ವೈರಲ್..!
ಸಭೆಗೋ, ಕಾರ್ಯಕ್ರಮಕ್ಕೋ ಸಚಿವರು ಬರ್ತಾರೆ ಅಂದ್ರೆ ಕೇಳ್ಬೇಕಾ. ಸೇಬು, ಹೂವಿನ ಹಾರ ರೆಡಿ ಮಾಡ್ಕೊಂಡು ಕ್ರೇನ್ ಸಮೇತ ನಿಂತಿರುತ್ತಾರೆ. ಈಗಂತೂ ತೆಂಗಿನಕಾಯಿ, ಬಾದಾಮಿ ಅದು ಇದು ಅಂತಾ ಯಾವ್ಯಾವ ಹಾರನೋ ಹಾಕ್ತಾರೆ. ಆದ್ರೆ ಈ ಸಚಿವರಿಗೆ ಮಾತ್ರ ಸಭೆಯಲ್ಲೇ ಮೈಮೇಲೆ ತುರಿಕೆ ಪುಡಿಯನ್ನೇ ಹಾಕಿದ್ದಾರೆ.
ಇದನ್ನೂ ಓದಿ : ಕರಾವಳಿಯಲ್ಲಿ ಕೊರಗಜ್ಜನ ಕೋಲ – ಮಂಗಳೂರಲ್ಲಿ ಅಮಿತ್ ಶಾ ರೋಡ್ ಶೋ ರದ್ದು
ಮಧ್ಯಪ್ರದೇಶದ ಮುಂಗೋಲಿ ಗ್ರಾಮದ ಮೂಲಕ ಬಿಜೆಪಿ ವಿಕಾಸ್ ರಥಯಾತ್ರೆ ಸಾಗುವ ವೇಳೆ ಈ ಘಟನೆ ನಡೆದಿದೆ. ಸಾರ್ವಜನಿಕ ಸಭೆಯೊಂದರಲ್ಲಿ ರಾಜ್ಯ ಸಚಿವ ಬ್ರಜೇಂದ್ರ ಸಿಂಗ್ ಯಾದವ್ ಮೇಲೆ ಯಾರೋ ತುರಿಕೆ ಪುಡಿ ಎರಚಿದ್ದಾನೆ. ಈ ವೇಳೆ ಸಚಿವರ ಮೈಯೆಲ್ಲಾ ತುರಿಕೆ ಶುರುವಾಗಿದ್ದು, ಸಚಿವರು ಕುರ್ತಾ ತೆಗೆದು ಬಾಟಲಿ ನೀರಿನಿಂದ ತೊಳೆದುಕೊಂಡಿದ್ದಾರೆ. ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ವಿಕಾಸ ರಥವು ಖಾಂಡ್ವಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಸಂಚರಿಸುತ್ತಿದ್ದಾಗ ಹಾಳಾದ ರಸ್ತೆಯಲ್ಲಿ ಸಿಲುಕಿಕೊಂಡಿತ್ತು. ಈ ವೇಳೆ ಯಾತ್ರೆಯ ನೇತೃತ್ವ ವಹಿಸಿದ್ದ ಸ್ಥಳೀಯ ಬಿಜೆಪಿ ಶಾಸಕ ದೇವೇಂದ್ರ ವರ್ಮಾ ಮತ್ತು ಗ್ರಾಮದ ಮಾಜಿ ಸರಪಂಚ್ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಈ ಪ್ರದೇಶದಲ್ಲಿ ಸರ್ಕಾರವು 3 ಕಿ.ಮೀ ರಸ್ತೆಯನ್ನು ಸಹ ಮಂಜೂರು ಮಾಡಲು ಸಾಧ್ಯವಾಗಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ನಾವು ಕಾಂಗ್ರೆಸ್ ಅನ್ನು ಕೆಟ್ಟದಾಗಿ ಪರಿಗಣಿಸಿದ್ದೇವೆ. ಆದರೆ ನೀವು (ಬಿಜೆಪಿ) ಕಾಂಗ್ರೆಸ್‍ಗಿಂತ ಕೆಟ್ಟವರು. ನಮಗೆ ಸರಿಯಾದ ರಸ್ತೆಗಳನ್ನು ನೀಡಿ. ಇಲ್ಲದಿದ್ದರೆ ನಾವು ನಿಮಗೆ ಮತ ಹಾಕುವುದಿಲ್ಲ ಎಂದು ಶಾಸಕರನ್ನು ತರಾಟೆಗೆ ತೆಗೆದುಕೊಂಡ ವೀಡಿಯೋ ವೈರಲ್ ಆಗಿತ್ತು. ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ ಮತ ಹಾಕಬೇಡಿ, ಅದು ನಿಮ್ಮ ಹಕ್ಕು ಎಂದು ತಿರುಗೇಟು ನೀಡಿದರು.