ಶ್ರೀರಾಮನಿಗಾಗಿ ಸಿದ್ಧವಾಯ್ತು 108 ಅಡಿ ಉದ್ದದ ಊದುಬತ್ತಿ! – ಅಯೋಧ್ಯೆಯಲ್ಲಿ 48 ದಿನ ಪರಿಮಳ ಬೀರಲಿದೆ ವಿಶೇಷ ಅಗರಬತ್ತಿ!
ಎಲ್ಲೆಲ್ಲೂ ರಾಮನ ಜಪ ಶುರುವಾಗಿದೆ. ಕೋಟ್ಯಂತರ ಹಿಂದೂಗಳ ಆಶಯದಂತೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಶ್ರೀರಾಮನ ಜನ್ಮ ಸ್ಥಳದಲ್ಲೇ ರಾಮ ಮಂದಿರ ನಿರ್ಮಾಣವಾಗಿದೆ. ಜನವರಿ 22 ರಂದು ಅಯೋಧ್ಯಾ ರಾಮಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ (ಬಾಲ ರಾಮ) ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಆಗಲಿದ್ದು, ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಜ. 22 ರಂದು ರಾಮಮಂದಿರ ಲೋಕಾರ್ಪಣೆಗೊಳ್ಳುವ ಹಿನ್ನೆಲೆಯಲ್ಲಿ ಅಯೋಧ್ಯೆ ರಾಮಮಂದಿರಕ್ಕೆ ಕಾಣಿಕೆಗಳ ಮಹಾಪೂರವೇ ಹರಿಬರುತ್ತಿದೆ. ಇದೀಗ ಸುಮಾರು ಅಯೋಧ್ಯೆಗೆ ಸುಮಾರು 45 ದಿನ ಪರಿಮಳ ಸೂಸುವ 108 ಅಡಿ ಉದ್ದದ ಊದುಬತ್ತಿಯನ್ನು ಭಕ್ತರೊಬ್ಬರು ಕಾಣಿಕೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಅಯೋಧ್ಯೆ ಹೋರಾಟದ ಸನ್ನಿವೇಶಗಳ ಕುರಿತು ಮೂಡಿಬರುತ್ತಿದೆ ಸಿನಿಮಾ! – ಜನವರಿ 19 ರಂದು ತೆರೆಗೆ ಬರಲಿದೆ ‘695’ ಚಿತ್ರ
ಹೌದು, ದೇಶವೇ ಕಾಯುತ್ತಿರುವ ರಾಮ ಮಂದಿರ ಉದ್ಘಾಟನಾ ಸಮಾರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿಸಿದೆ. ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ನಡುವೆ ರಾಮಭಕ್ತರೊಬ್ಬರು ಐದೂವರೆ ಲಕ್ಷ ರೂಪಾಯಿ ವೆಚ್ಚ ವ್ಯಯಿಸಿ ತಯಾರಿಸಿದ ಬೃಹತ್ ಅಗರಬತ್ತಿ ಇದೀಗ ಗಮನ ಸೆಳೆಯುತ್ತಿದೆ. ಸುಮಾರು ಅಯೋಧ್ಯೆಗೆ ಸುಮಾರು 45 ದಿನ ಪರಿಮಳ ಸೂಸುವ 108 ಅಡಿ ಉದ್ದದ ಊದುಬತ್ತಿಯನ್ನು ಭಕ್ತರೊಬ್ಬರು ಕಾಣಿಕೆಯಾಗಿ ನೀಡಿದ್ದಾರೆ.
ವಡೋದರದ ತರ್ಸಾಲಿ ಮೂಲದ ರಾಮ ಭಕ್ತ ವಿಹಾಭಾಯಿ ಭರ್ವಾಡ್ ಅವರು ಈ ಬೃಹತ್ ಗ್ರಾತ್ರದ ಊದುಬತ್ತಿಯನ್ನು ತಯಾರಿಸಿದ್ದಾರೆ. ರಾಮಮಂದಿರ ಪ್ರಾಣ ಪ್ರತಿಷ್ಠಾ ಮಹೋತ್ಸವದಲ್ಲಿ ಈ ಧೂಪದ್ರವ್ಯವನ್ನು ಬಳಸಲಾಗುತ್ತಿದೆ. ಇದು 108 ಅಡಿ ಉದ್ದ ಮತ್ತು ನಾಲ್ಕೂವರೆ ಅಡಿ ಅಗಲದ ಬೃಹತ್ ಬತ್ತಿಯಾಗಿದೆ. ಡಿಸೆಂಬರ್ ಅಂತ್ಯದಲ್ಲಿ ವಡೋದರಾದಿಂದ ಅಯೋಧ್ಯೆಗೆ ಬೃಹತ್ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತಿದೆ.
108 ಅಡಿ ಉದ್ದದ ಈ ಧೂಪದ್ರವ್ಯವನ್ನು ಅಯೋಧ್ಯೆಗೆ ಸಾಗಿಸಲು ಸುಮಾರು ನಾಲ್ಕೂವರೆ ಲಕ್ಷ ರೂಪಾಯಿ ವೆಚ್ಚವಾಗಲಿದೆಯಂತೆ. ವಡೋದರದ ತಾರ್ಸಾಲಿಯಲ್ಲಿರುವ ವಿಹಾಭಾಯಿ ಅವರ ಮನೆಯ ಸಮೀಪ ತೆರೆದ ಮೈದಾನದಲ್ಲಿ ನಿರ್ಮಿಸುತ್ತಿರುವ ಬೃಹತ್ ಧೂಪದ್ರವ್ಯವನ್ನು ಸಿದ್ಧಪಡಿಸಿದ ನಂತರ ನವಲಖಿ ಮೈದಾನಕ್ಕೆ ಕೊಂಡೊಯ್ಯಲಾಗುತ್ತದೆ. ವಡೋದರಾದಿಂದ ಅಯೋಧ್ಯೆಗೆ ಸುಮಾರು 1,800 ಕಿ.ಮೀ ದೂರವಿದೆ ಅಗರಬತ್ತಿಗಳ ಸಾಗಣೆಗೆ ವಿಶೇಷ ಟ್ರೇಲರ್ ವ್ಯವಸ್ಥೆ ಮಾಡಲಾಗಿದೆ. ಇದನ್ನು ಒಮ್ಮೆ ಬೆಳಗಿಸಿದರೆ 45 ದಿನಗಳ ಕಾಲ ನಿರಂತರವಾಗಿ ಸುಗಂಧ ಸೂಸುತ್ತದೆ.
ಇನ್ನು ಅಗರಬತ್ತಿ ತಯಾರಿಸಲು ಯಾವುದೇ ರಾಸಾಯನಿಕಗಳನ್ನು ಬಳಸಲಾಗಿಲ್ಲ. ನೈಸರ್ಗಿಕ ಪದಾರ್ಥಗಳನ್ನು ಬಳಸಿ ತಯಾರಿಸಲಾಗಿದೆ. ಊದು ಬತ್ತಿ ತಯಾರಿಕೆಗೆ ಹಸುವಿನ ತುಪ್ಪ, ಗುಗ್ಗಿಲ್, ಗುಗ್ಗಿಲ್, ಎಳ್ಳು ಮುಂತಾದ ಸಾಮಾಗ್ರಿಗಳನ್ನು ಬಳಲಾಗಿದೆ. ಈ ಊದುಬತ್ತಿ ತಯಾರಿಸಲು, ಹಸುವಿನ ತುಪ್ಪ 91 ಕೆಜಿ, 376 ಕೆಜಿ ಗುಗ್ಗಿಲ್, 280 ಕೆಜಿ ಬಾರ್ಲಿ, 280 ಕೆಜಿ ಎಳ್ಳು, 376 ಕೆಜಿ ಒಣ ಕೊಬ್ಬರಿ ಪುಡಿ, 425 ಕೆಜಿ ಯಜ್ಞ ಸಾಮಗ್ರಿ ಬಳಸಲಾಗಿದೆ. ಒಟ್ಟು 3400 ಕೆ.ಜಿ ತೂಕದ ಈ ಅಗರಬತ್ತಿಯನ್ನು ಸಿದ್ಧಪಡಿಸಲಾಗಿದೆ. ಇದರ ತಯಾರಿಕೆಗೆ ಒಟ್ಟು 3428 ಕೆಜಿ ವಸ್ತುಗಳನ್ನು ಬಳಸಲಾಗಿದೆ. ಬಿಸಿಲು ಮತ್ತು ಬಿಸಿ ವಾತಾವರಣದಲ್ಲಿ ಹೊರಾಂಗಣದಲ್ಲಿ ತಯಾರಿಸಲಾಗುತ್ತಿದೆ.