ಮದನಪಲ್ಲೆ ಲಾಡ್ಜ್‌ನಲ್ಲಿ ಮ*ರ್ಡರ್!- ಅ*ನೈತಿಕ ಸಂಬಂಧದ ಶಂಕೆ ನೆ*ತ್ತರು ಹರಿಸಿದ ಪತಿ

ಮದನಪಲ್ಲೆ ಲಾಡ್ಜ್‌ನಲ್ಲಿ ಮ*ರ್ಡರ್!-  ಅ*ನೈತಿಕ ಸಂಬಂಧದ ಶಂಕೆ ನೆ*ತ್ತರು ಹರಿಸಿದ ಪತಿ

ಆಂಧ್ರಪ್ರದೇಶದ ಖಾಸಗಿ ಲಾಡ್ಜ್‌ನಲ್ಲಿ ಕರ್ನಾಟಕ ಮೂಲದ ವಿವಾಹಿತ ಮಹಿಳೆಯೊಬ್ಬರು ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಆತಂಕ ಮೂಡಿಸಿದೆ. ಅನೈತಿಕ ಸಂಬಂಧದ ಶಂಕೆಯೇ ಈ ಕೊಲೆಗೆ ಕಾರಣ ಎಂದು ಆರೋಪಿಸಲಾಗಿದ್ದು, ಮಹಿಳೆಯ ಪತಿಯೇ ಕೊಲೆ ನಡೆಸಿದ್ದಾನೆ ಎನ್ನಲಾಗಿದೆ. ಕೃತ್ಯ ಎಸಗಿದ ಬಳಿಕ ಆರೋಪಿ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ ಎಂದು ವರದಿಯಾಗಿದೆ.

ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಲ್ಲೆಯ ಖಾಸಗಿ ಲಾಡ್ಜ್‌ನಲ್ಲಿ ಈ ಘಟನೆ ನಡೆದಿದೆ. ಕರ್ನಾಟಕ ಮೂಲದ ಮಹಿಳೆ ಲಾಡ್ಜ್‌ನಲ್ಲಿ ಶವವಾಗಿ ಪತ್ತೆಯಾಗಿದ್ದು, ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ಪತ್ನಿಯ ನಡವಳಿಕೆ ಕುರಿತು ಪತಿಗೆ ಅನುಮಾನವಿತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ದಂಪತಿ ನಡುವೆ ಮನಸ್ತಾಪ ಉಂಟಾಗಿತ್ತೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅನೈತಿಕ ಸಂಬಂಧದ ಶಂಕೆಯಿಂದ ಪತಿಯೇ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಮೈಸೂರು ಬಳಿ ಭೀಕರ ಅಪಘಾತ! – ಬಸ್‌–ಲಾರಿ ಡಿಕ್ಕಿ, 4 ಮಂದಿ ಸಾವು!

ಕೊಲೆಯಾದ ಮಹಿಳೆಯನ್ನು ಕರ್ನಾಟಕದ ಕೋಲಾರ ಜಿಲ್ಲೆಯ ಮುಳಬಾಗಿಲು ಮೂಲದ ರೂಬಿಯಾ ತಾಜ್ (29) ಎಂದು ಗುರುತಿಸಲಾಗಿದೆ. ಈಕೆಗೆ ಬೈಕ್ ಮೆಕ್ಯಾನಿಕ್ ಶೇಕ್ ನವೀದ್ ಬಾಷಾ (ಅಲಿಯಾಸ್ ನವೀನ್ ಪಾಷಾ) ಎಂಬಾತನೊಂದಿಗೆ 13 ವರ್ಷಗಳ ಹಿಂದೆ ಮದುವೆಯಾಗಿದ್ದು, ನಾಲ್ವರು ಮಕ್ಕಳಿದ್ದಾರೆ. ಇತ್ತೀಚೆಗೆ ದಂಪತಿ ನಡುವೆ ಕೌಟುಂಬಿಕ ಕಲಹ ಹಾಗೂ ಅನೈತಿಕ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಗಲಾಟೆ ನಡೆದು ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.

ಬಳಿಕ ಸಂಬಂಧಿಕರು ಸಂಧಾನ ನಡೆಸಿ, ಇಬ್ಬರನ್ನೂ ಒಂದಾಗಿಸಲು ಪ್ರಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ಪಲಮನೇರಿಗೆ ತೆರಳಿದ್ದ ನವೀದ್, ಪತ್ನಿಯನ್ನು ಕರೆದುಕೊಂಡು ಚಿತ್ತೂರಿನಲ್ಲಿ ಶಾಪಿಂಗ್ ಮಾಡಿಸಿದ್ದಾನೆ. ತಡರಾತ್ರಿಯಾದ ಕಾರಣ ಮದನಪಲ್ಲೆಗೆ ಆಗಮಿಸಿ ಅಲ್ಲಿನ ಖಾಸಗಿ ಲಾಡ್ಜ್‌ ಒಂದರಲ್ಲಿ ರೂಮ್ ಬುಕ್ ಮಾಡಿದ್ದರು. ಲಾಡ್ಜ್‌ನಲ್ಲಿ ತಂಗಿದ್ದ ವೇಳೆ ಮತ್ತೆ ಇಬ್ಬರ ನಡುವೆ ಅನೈತಿಕ ಸಂಬಂಧದ ವಿಚಾರವಾಗಿ ತೀವ್ರ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆಕ್ರೋಶಗೊಂಡ ನವೀದ್, ಬಿಯರ್ ಬಾಟಲಿಯಿಂದ ರೂಬಿಯಾ ತಲೆಗೆ ಹೊಡೆದು, ಪಗಿಲಿದ್ದ ಬಾಟಲಿ ಚೂರಿನಿಂದ ಆಕೆಯ ಗಂಟಲು ಕೊಯ್ದು ಭೀಕರವಾಗಿ ಹತ್ಯೆ ಮಾಡಿದ್ದಾನೆ.

Kishor KV

Leave a Reply

Your email address will not be published. Required fields are marked *