ಜಮ್ಮು- ಕಾಶ್ಮೀರದಲ್ಲಿ ಕಂದಕಕ್ಕೆ ಉರುಳಿ ಬಿದ್ದ ಸೇನಾ ವಾಹನ – ಮೂವರು ಸಿಬ್ಬಂದಿ ಸಾವು
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರದ ಮಚ್ಚಲ್ ಸೆಕ್ಟರ್‌ನ ಮುಂಚೂಣಿ ಪ್ರದೇಶದಲ್ಲಿ ಸೇನಾ ವಾಹನವೊಂದು ಕಂದಕಕ್ಕೆ ಉರುಳಿ ಬಿದ್ದು ಮೂವರು ಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ.
ಕುಪ್ವಾರದ ಮಚ್ಚಲ್ ಸೆಕ್ಟರ್‌ನ ಮುಂಚೂಣಿ ಪ್ರದೇಶದ ರಸ್ತೆಯಲ್ಲಿ ದಟ್ಟ ಮಂಜು ಆವರಿಸಿದ್ದರಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ಘಟನೆಯಲ್ಲಿ ಮೂವರು ಸೇನಾ ಸಿಬ್ಬಂದಿಗಳು ಮೃತಪಟ್ಟಿದ್ದಾರೆ ಎಂದು ಸೇನಾಪಡೆ ಟ್ವೀಟ್ ಮಾಡಿದೆ.
ಇದನ್ನೂ ಓದಿ: ವರ್ಷಕ್ಕೆ ಎಷ್ಟು ಪ್ರಮಾಣ ಕುಸಿಯುತ್ತಿದೆ ಗೊತ್ತಾ ಜೋಶಿಮಠ – ದುರಂತಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ತಜ್ಞರು
“ಫಾರ್ವರ್ಡ್ ಏರಿಯಾದಲ್ಲಿ ಆಪರೇಷನ್ ಕಾರ್ಯದ ಸಂದರ್ಭದಲ್ಲಿ ಈ ವಾಹನ ಕಿರಿಯ ಸೇನಾ ಅಧಿಕಾರಿಗಳನ್ನು ಹೊತ್ತೊಯ್ಯುತ್ತಿತ್ತು. ಈ ವೇಳೆ ಈ ಅಪಘಾತ ಸಂಭವಿಸಿದೆ. ಒಬ್ಬರು ಜೆಸಿಒ ಮತ್ತು ಇಬ್ಬರು ಓಆರ್ ಇದ್ದ ವಾಹನ ಪ್ರಯಾಣಿಸುತ್ತಿದ್ದ ರಸ್ತೆಯಲ್ಲಿ ಹಿಮ ತುಂಬಿಕೊಂಡಿತ್ತು. ಇದರಿಂದ ವಾಹನ ಆಳವಾದ ಕಮರಿಗೆ ಜಾರಿತು. ಎಲ್ಲಾ ಮೂವರು ಸೇನಾ ಸಿಬ್ಬಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದೆ” ಎಂದು ಚಿನಾರ್ ಕಾರ್ಪ್ಸ್ ತಿಳಿಸಿದೆ.
J&K | During a regular op task in the forward area in Machhal sector, a party of 1 JCO(Junior Commissioned Officer)& 2 OR(Other ranks)slipped into a deep gorge, when snow on the track gave way. Mortal remains of all three bravehearts have been retrieved: Chinar Corps, Indian Army
— ANI (@ANI) January 11, 2023