ಟೀಮ್ ಇಂಡಿಯಾ ಪಂದ್ಯಕ್ಕೆ ಕೂಲ್ ಕ್ಯಾಪ್ಟನ್ ಸಾಥ್ – ಇಂಗ್ಲೆಂಡ್‌ನಲ್ಲಿ ಅಭಿಮಾನಿಗಳ ಮನಗೆದ್ದ ಎಂ.ಎಸ್ ಧೋನಿ

ಟೀಮ್ ಇಂಡಿಯಾ ಪಂದ್ಯಕ್ಕೆ ಕೂಲ್ ಕ್ಯಾಪ್ಟನ್ ಸಾಥ್ – ಇಂಗ್ಲೆಂಡ್‌ನಲ್ಲಿ ಅಭಿಮಾನಿಗಳ ಮನಗೆದ್ದ ಎಂ.ಎಸ್ ಧೋನಿ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದ ವೇಳೆ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಅಭಿಮಾನಿಗಳ ಮನಗೆದ್ದಿದ್ದಾರೆ. ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡ ಎಂಎಸ್ ಧೋನಿ ಟೀಮ್ ಇಂಡಿಯಾಕ್ಕೆ ಫುಲ್ ಸಫೋರ್ಟ್ ಮಾಡಿದರು.

ಇದನ್ನೂ ಓದಿ:ENG ಬೆವರಿಳಿಸಿದ ಬುಮ್ರಾ, ಬ್ರಾರ್ – ಇದು ಭಾರತದ ಅಸಲಿ ಬೌಲಿಂಗ್ ಕಿಚ್ಚು

ಬರ್ಮಿಂಗ್‌ಹ್ಯಾಮ್‌ ನ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಅತ್ತ ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ಮುಖಾಮುಖಿಯಾದರೆ, ಇತ್ತ ಎಂ.ಎಸ್ ಧೋನಿಯ ಖದರ್‌ಗೆ ಅಭಿಮಾನಿಗಳು ಬೆರಗಾದರು. ಕಪ್ಪು ಕನ್ನಡಕ ಮತ್ತು ಕಪ್ಪು ಜಾಕೆಟ್ ಧರಿಸಿ ಸ್ಟೇಡಿಯಂಗೆ ಧೋನಿ ಎಂಟ್ರಿಕೊಟ್ಟಿದ್ದೇ ತಡ, ಅಭಿಮಾನಿಗಳ ಸಂಭ್ರಮ ಹೇಳತೀರದಾಗಿತ್ತು. ಸಾಕ್ಷಿ ಧೋನಿ ಕೂಡಾ ಈ ಸಂದರ್ಭದಲ್ಲಿ ಧೋನಿಗೆ ಸಾಥ್ ನೀಡಿದರು. ಪಂದ್ಯದ ವೇಳೆ ಕ್ಯಾಮೆರಾ ಸ್ಟ್ಯಾಂಡ್‌ಗಳ ಕಡೆಗೆ ತಿರುಗಿದಾಗ, ಒಂದು ಮಗು ಧೋನಿ ಅವರಿಗೆ  ಪಾಪ್‌ಕಾರ್ನ್ ಕೊಟ್ಟಿರುವ ದೃಶ್ಯ ಸೆರೆಯಾಯಿತು. ಮಗು ಪ್ರೀತಿಯಿಂದ ಕೊಟ್ಟಿದ್ದನ್ನು ಧೋನಿ ನಿರಾಕರಿಸದೆ ತಿಂದರು. ಸಂತೋಷದಿಂದ ಮಗುವಿನೊಂದಿಗೆ ನಗುತ್ತಾ ಪಾಪ್‌ಕಾರ್ನ್ ಹಂಚಿಕೊಂಡರು. ಕೆಲವು ನಿಮಿಷಗಳ ನಂತರ ಆ ಹುಡುಗ ಮತ್ತೆ ಪಾಪ್‌ಕಾರ್ನ್ ಕೊಡಲು ಹೋದಾಗ, ಧೋನಿ ನಯವಾಗಿ ನಿರಾಕರಿಸಿ, “ನನಗೆ ಈಗಾಗಲೇ ಸಾಕು ಆಗಿದೆ” ಎಂದು ಸನ್ನೆ ಮಾಡಿದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿರಬಹುದು. ಆದರೆ ಭಾರತ ತಂಡ ಮತ್ತು ಕ್ರಿಕೆಟ್‌ನೊಂದಿಗಿನ ಅವರ ಸಂಬಂಧ ತುಂಬಾ ಚೆನ್ನಾಗಿದೆ. ಟೀಮ್ ಇಂಡಿಯಾ ಪಂದ್ಯಗಳಲ್ಲಿ ಧೋನಿ ಬಂದರೆ ಆಟಗಾರರಿಗೂ ಅಭಿಮಾನಿಗಳಿಗೂ ಕೂಡಾ ಅದೇ ವಿಶೇಷ. ಇದೀಗ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲೂ ಕ್ಯಾಪ್ಟನ್ ಕೂಲ್ ಧೋನಿ ಕಾಣಿಸಿಕೊಂಡಿದ್ದು, ರೋ-ಕೋ-ಧೋ ಕಾಂಬಿನೇಷನ್ ನೋಡಿ ಅಭಿಮಾನಿಗಳಂತೂ ಸಂಭ್ರಮಿಸಿದ್ದಾರೆ.

Sulekha

Leave a Reply

Your email address will not be published. Required fields are marked *