ಮಲೆ ಮಹದೇಶ್ವರನಿಗೆ ತಟ್ಟಲ್ಲ ಗ್ರಹಣದ ಎಫೆಕ್ಟ್! – ಚಂದ್ರಗ್ರಹಣವಿದ್ದರೂ ಮಾದಪ್ಪನ ದರ್ಶನಕ್ಕೆ ಭಕ್ತರಿಗೆ ಅವಕಾಶ!

ಮಲೆ ಮಹದೇಶ್ವರನಿಗೆ ತಟ್ಟಲ್ಲ ಗ್ರಹಣದ ಎಫೆಕ್ಟ್! – ಚಂದ್ರಗ್ರಹಣವಿದ್ದರೂ ಮಾದಪ್ಪನ ದರ್ಶನಕ್ಕೆ ಭಕ್ತರಿಗೆ ಅವಕಾಶ!

ಇಂದು ವರ್ಷದ ಮೊದಲ ಪೂರ್ಣ ಚಂದ್ರಗ್ರಹಣ ಸಂಭವಿಸಲಿದೆ. ಈ ಗ್ರಹಣವು ಮಧ್ಯಾಹ್ನ 03:20ಕ್ಕೆ ಆರಂಭವಾಗಿ ಸಂಜೆ 06:47ಕ್ಕೆ ಕೊನೆಗೊಳ್ಳಲಿದೆ. ಚಂದ್ರಗ್ರಹಣದ ಹಿನ್ನೆಲೆ ಎಲ್ಲರ ಗಮನ ಈಗ ದೇವಸ್ಥಾನಗಳತ್ತ ನೆಟ್ಟಿದೆ. ಗ್ರಹಣದ ಸೂತಕದ ಕಾರಣದಿಂದಾಗಿ ಕರ್ನಾಟಕದ ಕಾಶಿಯಿಂದ ಹಿಡಿದು ತಿರುಪತಿಯವರೆಗೆ ಬಹುತೇಕ ಪ್ರಮುಖ ದೇವಸ್ಥಾನಗಳ ಪೂಜೆ ಮತ್ತು ದರ್ಶನದ ಅವಧಿಯಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ಆದ್ರೆ ಗ್ರಹಣದ ಎಫೆಕ್ಟ್ ಮಲೆ ಮಹದೇಶ್ವರನಿಗೆ ತಟ್ಟಲ್ಲ. ಚಂದ್ರಗ್ರಹಣವಿದ್ದರೂ ಮಾದಪ್ಪನ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಲಕ್ಷ್ಮೀ ನಿವಾಸ ಸೀರಿಯಲ್‌ಗೆ ನಟಿ ಗುಡ್‌ಬೈ! – ನೀಲು ಪಾತ್ರಕ್ಕೆ ಹೊಸ ನಟಿ ಎಂಟ್ರಿ!

ಇಂದು ಮಧ್ಯಾಹ್ನದ ನಂತರ ಚಂದ್ರಗ್ರಹಣವಿದ್ದರೂ ಶ್ರೀ ಮಲೆ ಮಹದೇಶ್ವರ ಸ್ವಾಮಿಯ ದರ್ಶನಕ್ಕೆ ಯಾವುದೇ ತೊಂದರೆ ಇಲ್ಲ. ಭಕ್ತಾದಿಗಳು ಎಂದಿನಂತೆ ದರ್ಶನ ಮಾಡಬಹುದು ಎಂದು ಪ್ರಾಧಿಕಾರದ ಕಾರ್ಯದರ್ಶಿ ರಘು ಅವರು ತಿಳಿಸಿದ್ದಾರೆ.

ಇಂದು ಮಧ್ಯಾಹ್ನ 3:20ರಿಂದ ಸಂಜೆ 6:47ರವರೆಗೆ ಚಂದ್ರಗ್ರಹಣವಿದ್ದರೂ ಕೂಡ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ದರ್ಶನಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಈ ವೇಳೆಯಲ್ಲಿಯೂ ಭಕ್ತಾದಿಗಳು ಸ್ವಾಮಿಯ ದರ್ಶನ ಪಡೆದು ತಮ್ಮ ಹರಕೆ, ಕಾಣಿಕೆಗಳನ್ನು ಸಮರ್ಪಿಸಬಹುದು. ಚಂದ್ರಗ್ರಹಣ ಮುಗಿದ ನಂತರ ಧಾರ್ಮಿಕ ಸಂಪ್ರದಾಯದಂತೆ ದೇವಸ್ಥಾನದ ಆವರಣವನ್ನು ಶುದ್ಧೀಕರಿಸಿ, ವಿಶೇಷ ಪೂಜೆಯ ನಂತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

 

Shwetha M

Leave a Reply

Your email address will not be published. Required fields are marked *