ಲಕ್ನೋ ವಿರುದ್ಧ ಕೆಕೆಆರ್‌ಗೆ ಭರ್ಜರಿ ಜಯ – ಕೋಲ್ಕತ್ತಾದ ಪ್ಲೆ-ಆಫ್‌  ಕನಸು ಇನ್ನೂ ಜೀವಂತ

ಲಕ್ನೋ ವಿರುದ್ಧ ಕೆಕೆಆರ್‌ಗೆ ಭರ್ಜರಿ ಜಯ – ಕೋಲ್ಕತ್ತಾದ ಪ್ಲೆ-ಆಫ್‌  ಕನಸು ಇನ್ನೂ ಜೀವಂತ

ಲಕ್ನೋ ಸೂಪರ್‌ ಜೈಂಟ್ಸ್‌ ಹಾಗೂ ಕೋಲ್ಕತ್ತಾ ನೈಟ್‌ ರೈಡರ್ಸ್‌ ನಡುವೆ ನಡೆದ ಪಂದ್ಯದಲ್ಲಿ ಕೆಕೆಆರ್‌ ಗೆದ್ದು ಬೀಗಿದೆ. ಲಕ್ನೋ ವಿರುದ್ಧ ಕೋಲ್ಕತ್ತಾ 98 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಪ್ಲೇ-ಆಫ್‌ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಂಡಿದೆ.

ಲಕ್ನೋದ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ ಪಂದ್ಯದಲ್ಲಿ  ಮೊದಲು ಟಾಸ್ ಗೆದ್ದುಕೊಂಡ ಲಕ್ನೋ ಸೂಪರ್ ಜೆಂಟ್ಸ್ ತಂಡದ ನಾಯಕ ಕೆ.ಎಲ್ ರಾಹುಲ್ ಅವರು ಬೌಲಿಂಗ್ ಆಯ್ದುಕೊಂಡರು. ಎದುರಾಳಿ ಕೆಕೆಆರ್​ ಅನ್ನು ಬ್ಯಾಟಿಂಗ್​ಗೆ ಆಹ್ವಾನಿಸಿ ಭಾರೀ ತಪ್ಪು ಮಾಡಿದರು. ಕೆಕೆಆರ್ ಪರ ಓಪನರ್ಸ್ ಆಗಿ ಮೈದಾನಕ್ಕೆ ಬಂದ ಪಿಲಿಫ್ ಸಾಲ್ಟ್​ ಮತ್ತು ಸುನೀಲ್ ನರೈನ್ ಭರ್ಜರಿ ಓಪನಿಂಗ್ ಪಡೆದರು. 32 ರನ್​ ಗಳಿಸಿ ಆಡುವಾಗ ಸಾಲ್ಟ್,​ ನವೀನ್ ಬೌಲಿಂಗ್​ನಲ್ಲಿ ಔಟ್ ಆದರು. ಆದರೆ ಕ್ರೀಸ್ ಕಾಯ್ದುಕೊಂಡ ಸುನೀಲ್ ನರೈನ್ ಅವರು ಅಮೋಘ ಬ್ಯಾಟಿಂಗ್ ಮುಂದುವರೆಸಿ 6 ಬೌಂಡರಿ, 7 ಸಿಕ್ಸ್ ಸಮೇತ 81 ರನ್​ ಬಿಷ್ಣೋಯಿ ಸ್ಪೆಲ್​ಗೆ ಬಲೆಗೆ ಬಿದ್ದರು.

ಇದನ್ನೂ ಓದಿ: ರವೀಂದ್ರ ಜಡೇಜಾ ಆಲ್ರೌಂಡ್ ಆಟ – ಪಂಜಾಬ್ ವಿರುದ್ಧ ಚೆನ್ನೈಗೆ 28 ರನ್‍ಗಳ ಜಯ

ಆಂಗ್ಕ್ರಿಶ್ ರಘುವಂಶಿ 32 ರನ್​ಗಳ ಗಳಿಸಿದರು. ಆಂಡ್ರೆ ರಸೆಲ್ 12, ರಿಂಕು 16, ಕ್ಯಾಪ್ಟನ್ ಅಯ್ಯರ್ 23, ರಮಣದೀಪ್ ಸಿಂಗ್ ವೆಂಕಟೇಶ್ ಅಯ್ಯರ್ ರನ್ ಗಳಿಸಿದರು. ಈ ಮೂಲಕ ನಿಗದಿತ 20 ಓವರ್​​ಗಳಲ್ಲಿ 6 ವಿಕೆಟ್​​ಗೆ 235 ರನ್​ಗಳ ಬೃಹತ್ ಟಾರ್ಗೆಟ್​ ಅನ್ನು ಕೆಕೆಆರ್ ನೀಡಿತ್ತು.

ಈ ಟಾರ್ಗೆಟ್​ ಅನ್ನು ಬೆನ್ನತ್ತಿದ್ದ ಲಕ್ನೋ ಸೂಪರ್ ಜೆಂಟ್ಸ್ ಟೀಮ್ 20 ರನ್​ಗೆ ಅರ್ಶಿಣ್ ಕುಲಕರ್ಣಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕೆಎಲ್ ರಾಹುಲ್ ಹಾಗೂ ಸ್ಟೋನಿಸ್​ ಒಳ್ಳೆಯ ಪಾರ್ಟ್​ನರ್​ಶಿಪ್​ನಲ್ಲಿ ಆಡಿ 50 ರನ್​ ಕೂಡಿ ಹಾಕಿದರು. ಆದರೆ 25 ರನ್​ನಿಂದ ಆಡುತ್ತಿದ್ದ ರಾಹುಲ್ ಕ್ಯಾಚ್ ನೀಡಿ ಪೆವಿಲಿಯನ್​ಗೆ ನಡೆದರು.

ಇವರ ನಂತರ ಬಂದ ದೂಪಕ್ ಹೂಡ ಬಂದಷ್ಟೇ ವೇಗದಲ್ಲಿ ಪೆವಿಲಿಯನ್​ಗೆ ನಡೆದರು. ಸ್ಟೋನಿಸ್​ 36 ರನ್​ಗೆ ಔಟ್ ಆಗುತ್ತಿದ್ದಂತೆ ಉಳಿದ ಆಟಗಾರರು ಯಾರು 16 ರನ್​ಗಳ ಗಡಿ ಕೂಡ ದಾಟಲಿಲ್ಲ. ಹೀಗಾಗಿ 16.1 ಓವರ್​ಗೆ ಲಕ್ನೋ ತನ್ನೆಲ್ಲ ವಿಕೆಟ್​​ಗಳನ್ನ ಕಳೆದುಕೊಂಡು 137 ರನ್​ ಗಳಿಸಿ ಸೋಲೋಪ್ಪಿಕೊಂಡಿತು. ಇನ್ನು ಕೋಲ್ಕತ್ತಾ ಪರ ಹರ್ಷಿತ್ ರಾಣಾ ಹಾಗೂ ವರುಣ್​ ತಲಾ 3 ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ಕೋಲ್ಕತ್ತಾ 98 ರನ್​ಗಳಿಂದ ಅಮೋಘವಾದ ಗೆಲುವು ದಾಖಲಿಸಿತು.

Shwetha M