ಸಿಎಸ್‌ಕೆ ವಿರುದ್ಧ ಎಲ್ಎಸ್‌ಜಿ ಸೆಣಸಾಟ – ಕೆ.ಎಲ್ ರಾಹುಲ್ vs ಧೋನಿ ಕಾಳಗ ನೋಡಲು ಅಭಿಮಾನಿಗಳ ಕಾತುರ

ಸಿಎಸ್‌ಕೆ ವಿರುದ್ಧ ಎಲ್ಎಸ್‌ಜಿ ಸೆಣಸಾಟ – ಕೆ.ಎಲ್ ರಾಹುಲ್ vs ಧೋನಿ ಕಾಳಗ ನೋಡಲು ಅಭಿಮಾನಿಗಳ ಕಾತುರ

ಕೂಲ್ ಆಗಿಯೇ ಬಂದು ಪಂದ್ಯದ ಗತಿಯನ್ನೇ ಬದಲಾಯಿಸಬಲ್ಲ ಎಂ.ಎಸ್ ಧೋನಿ. ತೋಳಿನಲ್ಲಿ ಇನ್ನೂ ಬಲವಿದೆ ಅಂತಾ ಎದುರಾಳಿಗಳಿಗೆ ನಡುಕಹುಟ್ಟಿಸಬಲ್ಲ ಆಟಗಾರ. ಸಿಎಸ್‌ಕೆ ಟೀಮ್ ಕೂಡಾ ಒನ್ ಟೀಮ್ ಒನ್ ಫ್ಯಾಮಿಲಿ ಅನ್ನೋ ರೀತಿ ಆಡ್ತಿದೆ. ತಂಡದ ಒಗ್ಗಟ್ಟೇ ಗೆಲುವಿನ ಗುಟ್ಟು. ಮತ್ತೊಂದೆಡೆ ಲಕ್ನೋ ಸೂಪರ್ ಜೈಂಟ್ಸ್ ಟೀಮ್ ಕೂಡಾ ಸ್ಟ್ರಾಂಗ್ ಆಗಿಯೇ ಇದೆ. ಅದ್ರಲ್ಲೂ ಎಲ್‌ಎಸ್‌ಜಿ ಕ್ಯಾಪ್ಟನ್ ಕೆ.ಎಲ್ ರಾಹುಲ್ ಬ್ರೇಕ್ ತಗೊಂಡು ಐಪಿಎಲ್‌ಗೆ ಮೆಗಾ ಕಮ್‌ಬ್ಯಾಕ್ ಮಾಡಿದ್ದಾರೆ. ಕನ್ನಡಿಗ ಕೆ.ಎಲ್​. ರಾಹುಲ್​​ ಬ್ಯಾಟಿಂಗ್​ ರೀತಿಯಂತೂ ಅವರೊಬ್ಬ ಕಂಪ್ಲೀಟ್ ಕ್ಲಾಸ್ ಕ್ರಿಕೆಟರ್​ ಅನ್ನೋದನ್ನ ಮತ್ತೊಮ್ಮೆ ಸಾಬೀತುಪಡಿಸಿದೆ. ಈ ಹಿಂದೆಯೂ ಫಾರ್ಮ್ ಕಳೆದುಕೊಂಡಾಗಲೆಲ್ಲಾ ರಾಹುಲ್​ ಗ್ರೇಟ್ ಕಮ್‌ಬ್ಯಾಕ್ ಮಾಡಿರೋ ಎಕ್ಸಾಂಪಲ್ ಕಣ್ಣೆದುರೇ ಇದೆ.  ಲಕ್ನೋ ಟೀಮ್ ಅಂತಾ ಸಿಕ್ಕಾಪಟ್ಟೆ ಜೋಶ್‌ನಲ್ಲಿದೆ. ಹೋಮ್‌ಗ್ರೌಂಡ್‌ನಲ್ಲಿ ನಡೆಯೋ ಪಂದ್ಯದಲ್ಲಿ ಸಿಎಸ್‌ಕೆ ಟೀಮ್ ಬಗ್ಗುಬಡಿಯಲು ಕೆ.ಎಲ್ ರಾಹುಲ್ ಪಡೆ ಕಾಯ್ತಿದೆ. ಇದ್ರ ಹೀಗಾಗಿ ಇವತ್ತಿನ ಪಂದ್ಯ ಅಭಿಮಾನಿಗಳಿಗೆ ಥ್ರಿಲ್ ಕೊಡೋದ್ರಲ್ಲಿ ಎರಡು ಮಾತಿಲ್ಲ.

ಇದನ್ನೂ ಓದಿ:ಕೊಹ್ಲಿಗೆ RCBಯೇ ಉಸಿರು! – ಆರ್‌ಸಿಬಿ ಸೋಲಿನ ನೋವಲ್ಲಿ ಏಕಾಂಗಿಯಾದ್ರಾ ವಿರಾಟ್ ಕೊಹ್ಲಿ?

ಐಪಿಎಲ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿರೋ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ತಂಡದ ಸ್ಟಾರ್ ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೇ ಇಂಜುರಿಯಿಂದ ಇನ್ನು ಚೇತರಿಸಿಕೊಂಡಿಲ್ಲ. ಇದೇ ಕಾರಣಕ್ಕೆ ಇಡೀ ಲೀಗ್​ನಿಂದಲೇ ಹೊರಬಿದ್ದಿದ್ದಾರೆ. ಡೆವೊನ್ ಕಾನ್ವೇ ಐಪಿಎಲ್ ಆರಂಭಕ್ಕೂ ಮೊದಲು ತಮ್ಮ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು, ಅದಕ್ಕಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ನಂತರ ಕಿವೀಸ್ ಬ್ಯಾಟರ್ ದ್ವಿತೀಯಾರ್ಧದ ಐಪಿಎಲ್​​ ವೇಳೆಗೆ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿತ್ತು. ಆದರೀಗ ಅವರು ಸಂಪೂರ್ಣ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಇವರ ಬದಲಿಯಾಗಿ ಸಿಎಸ್​ಕೆ, ಇಂಗ್ಲೆಂಡ್​ನ ರಿಚರ್ಡ್ ಗ್ಲೀಸನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಇಲ್ಲಿ ಅಚ್ಚರಿಯ ಸಂಗತಿಯೆಂದರೆ ಒಬ್ಬ ಬ್ಯಾಟರ್ ಐಪಿಎಲ್​ನಿಂದ ಹೊರಬಿದ್ದರೆ ಅವನ ಬದಲಿಯಾಗಿ ಮತ್ತೊಬ್ಬ ಬ್ಯಾಟರ್​ನನ್ನು ತಂಡಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಆದರೆ ವಿಭಿನ್ನವಾಗಿ ಚಿಂತಿಸಿರುವ ಸಿಎಸ್​ಕೆ ಫ್ರಾಂಚೈಸಿ ಬ್ಯಾಟರ್ ಬದಲಿಗೆ ಬೌಲರ್​ನನ್ನು ತಂಡಕ್ಕೆ ಕರೆತಂದಿದೆ. ಸದ್ಯ ಸಿಎಸ್​ಕೆ ತಂಡವನ್ನು ಸೇರಿಕೊಂಡಿರುವ ರಿಚರ್ಡ್ ಗ್ಲೀಸನ್ ವೇಗದ ಬೌಲರ್ ಆಗಿದ್ದು, 2022 ರಲ್ಲಿ ಭಾರತದ ವಿರುದ್ಧವೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಆಡಿದ ಚೊಚ್ಚಲ ಪಂದ್ಯದಲ್ಲೇ ಗ್ಲೀಸನ್ ಕೇವಲ 4 ಎಸೆತಗಳಲ್ಲಿ ಭಾರತದ ಮೂವರು ಸ್ಟಾರ್​ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ಅವರ ವಿಕೆಟ್‌ಗಳನ್ನು ಕಬಳಿಸಿದ್ದರು. ರಿಚರ್ಡ್ ಗ್ಲೀಸನ್​ಗೆ ಇದು ಚೊಚ್ಚಲ ಐಪಿಎಲ್ ಆವೃತ್ತಿಯಾಗಿದ್ದರೆ, ಅವರಿಗೆ ಟಿ20 ಲೀಗ್​ನಲ್ಲಿ ಆಡಿದ ಸಾಕಷ್ಟು ಅನುಭವವಿದೆ. ಗ್ಲೀಸನ್ ಐಪಿಎಲ್​ಗೂ ಮುನ್ನ BBL, PSL, SA20 ಮತ್ತು BPL ನಂತಹ ಪ್ರತಿ ಪ್ರಮುಖ ಟಿ20 ಲೀಗ್‌ನಲ್ಲಿ ಆಡಿದ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ಕಾನ್ವೇ ಅನುಪಸ್ಥಿತಿಯಲ್ಲಿ, ನ್ಯೂಜಿಲೆಂಡ್‌ನ ರಚಿನ್ ರವೀಂದ್ರ ಅವರು ನಾಯಕ ರುತುರಾಜ್ ಗಾಯಕ್‌ವಾಡ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುತ್ತಿದ್ದು, ಇಲ್ಲಿಯವರೆಗೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಕೆಎಲ್ ರಾಹುಲ್ ನೇತೃತ್ವದ ತಂಡ ಇದುವರೆಗೆ ಟೂರ್ನಿಯಲ್ಲಿ ಮೂರು ಪಂದ್ಯದಲ್ಲಿ ಗೆದ್ದರೆ ಮೂರರಲ್ಲಿ ಸೋತಿದೆ. ಮತ್ತೊಂದೆಡೆ, ಸಿಎಸ್‌ಕೆ ಎಂಟು ಅಂಕಗಳನ್ನು ಗಳಿಸಿ ಮೂರನೇ ಸ್ಥಾನದಲ್ಲಿದೆ. ರುತುರಾಜ್ ಗಾಯಕ್ವಾಡ್ ಟೀಮ್ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಬಗ್ಗು ಬಡಿದ ಉತ್ಸಾಹದಲ್ಲಿದೆ. ಲಕ್ನೋ ಸೂಪರ್ ಜೈಂಟ್ಸ್ ಎರಡು ಬ್ಯಾಕ್-ಟು-ಬ್ಯಾಕ್ ಸೋಲುಗಳಿಂದ ಕಮ್‌ಬ್ಯಾಕ್ ಮಾಡುವ ಜೋಶ್‌ನಲ್ಲಿದೆ.

Sulekha