ಗುಜರಾತ್ ವಿರುದ್ಧ ಗೆದ್ದು ಬೀಗಿದ ಲಕ್ನೋ ಸೂಪರ್ ಜೈಂಟ್ಸ್.. – 33 ರನ್‌ಗಳ ಭರ್ಜರಿ ಜಯ

ಗುಜರಾತ್ ವಿರುದ್ಧ ಗೆದ್ದು ಬೀಗಿದ ಲಕ್ನೋ ಸೂಪರ್ ಜೈಂಟ್ಸ್.. – 33 ರನ್‌ಗಳ ಭರ್ಜರಿ ಜಯ

ಗುಜರಾತ್ ಟೈಟನ್ಸ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ ಭರ್ಜರಿ ಗೆಲುವು ಸಾಧಿಸಿದೆ. ಯಶ್‌ ಠಾಕೂರ್‌ ಹಾಗೂ ಕೃನಾಲ್ ಪಾಂಡ್ಯ ಅಬ್ಬರದ ಬೌಲಿಂಗ್‌ ದಾಳಿ ನೆರವಿನಿಂದ ಲಕ್ನೋ ಸೂಪರ್‌ ಜೈಂಟ್ಸ್‌ 33 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

ಮೊದಲು ಬ್ಯಾಟ್‌ ಮಾಡಿದ್ದ ಲಕ್ನೋ ಸೂಪರ್ ಜೈಂಟ್ಸ್ 5 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತ್ತು. ಭರ್ಜರಿ ಬ್ಯಾಟಿಂಗ್ ಮಾಡಿದ ಮಾರ್ಕಸ್ ಸ್ಟೊಯಿನಿಸ್ 58 ರನ್ ಸಿಡಿಸಿದ್ರೆ, ಕ್ಯಾಪ್ಟನ್ ಕೆ.ಎಲ್ ರಾಹುಲ್ 33 ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ನೆರವಾದರು.

ಇದನ್ನೂ ಓದಿ: ರೀಲ್‌ ಲೈಫ್‌ನಂತೆಯೇ ರಿಯಲ್‌ ಲೈಫ್‌ – ಸೀತಾರಾಮ ಸೀರಿಯಲ್‌ನ ಸಿಹಿಯ ಬಾಳಿನ ಕಹಿಯೇನು? 

164 ರನ್‌ಗಳ ಗುರಿ ಬೆನ್ನತ್ತಿದ ಗುಜರಾತ್ ಟೈಟನ್ಸ್‌ ಆರಂಭದಲ್ಲಿ ಆಘಾತ ಅನುಭವಿಸಿತು. ತಂಡಕ್ಕೆ 54 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ 100ರ ಗಡಿ ದಾಟುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿತು. ಕೊನೆಗೆ 130 ರನ್‌ಗಳಿಗೆ ಗುಜರಾತ್ ಟೈಟನ್ಸ್ ಆಲೌಟ್ ಆಗಿ ಲಕ್ನೋ ವಿರುದ್ಧ ಹೀನಾಯ ಸೋಲು ಅನುಭವಿಸಿತು.

ಭರ್ಜರಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಪ್ರದರ್ಶನದಿಂದ ಲಕ್ನೋ ಸೂಪರ್ ಜೈಂಟ್ಸ್‌ ತಂಡ ಗೆದ್ದು ಬೀಗಿದ್ದು, ಐಪಿಎಲ್ ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನವನ್ನು ಕಾಯ್ದುಕೊಂಡಿದೆ. ಇಂದು ಡೆಲ್ಲಿ ವಿರುದ್ಧ ಮುಂಬೈ ಇಂಡಿಯನ್ಸ್ ಗೆಲ್ಲುವುದರೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಮೇಲೇರಿದ್ದು, ಬೆಂಗಳೂರು ರಾಯಲ್ಸ್ ಚಾಲೆಂಜರ್ಸ್ ತಂಡ 9ನೇ ಸ್ಥಾನಕ್ಕೆ ಕುಸಿದಿದೆ. ಡೆಲ್ಲಿ ಕಾಪಿಟಲ್ಸ್ ತಂಡ ಕೊನೇ ಸ್ಥಾನವನ್ನು ಕಾಯ್ದುಕೊಂಡಿದೆ.

Shwetha M