ಲೂಸಿಫರ್- 2 ಚಿತ್ರಕ್ಕೆ ಸಜ್ಜಾದ ಲೈಕಾ ಸಂಸ್ಥೆ – ಪೃಥ್ವಿರಾಜ್ ಸುಕುಮಾರನ್, ಮೋಹನ್ ಲಾಲ್ ನಟನೆಯ ಚಿತ್ರಕ್ಕೆ ಎಂಪೂರನ್ ಟೈಟಲ್ ಫಿಕ್ಸ್

ಲೂಸಿಫರ್- 2 ಚಿತ್ರಕ್ಕೆ ಸಜ್ಜಾದ ಲೈಕಾ ಸಂಸ್ಥೆ – ಪೃಥ್ವಿರಾಜ್ ಸುಕುಮಾರನ್, ಮೋಹನ್ ಲಾಲ್ ನಟನೆಯ ಚಿತ್ರಕ್ಕೆ ಎಂಪೂರನ್ ಟೈಟಲ್ ಫಿಕ್ಸ್

ಮಲಯಾಳಂ ಸೂಪರ್ ಹಿಟ್ ಸಿನಿಮಾ ಲೂಸಿಫರ್. ಪೃಥ್ವಿರಾಜ್ ಸುಕುಮಾರನ್, ಮೋಹನ್ ಲಾಲ್ ನಟನೆಯ ಲೂಸಿಫರ್ ಸಿನಿಮಾ ಅಭಿಮಾನಿಗಳ ಮನಗೆದ್ದಿತ್ತು. ಇದೀಗ ಈ ಚಿತ್ರದ ಸಿಕ್ವೇಲ್ ಬರಲಿದೆ. ಪ್ರತಿಷ್ಠಿತ ಲೈಕಾ ಸಂಸ್ಥೆ ಲೂಸಿಫರ್ ಸಿಕ್ವೆಲ್ ಮಾಡಲು ಸಜ್ಜಾಗಿದೆ. ಈ ಮೂಲಕ ಲೈಕಾ ಸಂಸ್ಥೆ ಅವರು ಮಲಯಾಳಂ ಚಿತ್ರರಂಗಕ್ಕೆ ಕೂಡ ಕಾಲಿಟ್ಟಿದ್ದಾರೆ.

ಇದನ್ನೂ ಓದಿ:ಸೌತ್ ಸಿನಿಮಾಗಳಿಗೆ ಬಾಲಿವುಡ್ ಬೆಡಗಿಯರು ಬೆರಗು – ರಾಮ್ ಚರಣ್ ಗೆ ನಾಯಕಿಯಾಗಿ ರವೀನಾ ಟಂಡನ್ ಪುತ್ರಿ ಟಾಲಿವುಡ್ ಗೆ ಎಂಟ್ರಿ

ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಇತ್ತೀಚೆಗೆ ಕನ್ನಡದಲ್ಲಿ ನಟ ನಿಖಿಲ್ ಕುಮಾರಸ್ವಾಮಿ ಸಿನಿಮಾಕ್ಕೆ ಹಣ ಹೂಡಿತ್ತು. ಈ ಮೂಲಕ ಲೈಕಾ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿತ್ತು. ಈಗ ಈ ಸಂಸ್ಥೆ ಮಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟಿದೆ. ಪೊನ್ನಿಯಿನ್ ಸೆಲ್ವನ್ ಸರಣಿ ಸಿನಿಮಾ, ದರ್ಬಾರ್, ಸಿನಿಮಾದಂತಹ ಬಿಗ್ ಬಜೆಟ್ ಸಿನಿಮಾಗಳನ್ನು ಸಿನಿಮಾ ರಂಗಕ್ಕೆ ಕೊಡುಗೆಯಾಗಿ ಕೊಟ್ಟಿರುವ ಲೈಕಾ ಮಾಲಿವುಡ್ ಸೂಪರ್ ಡೂಪರ್ ಹಿಟ್ ಚಿತ್ರ ಲೂಸಿಫರ್ ಪಾರ್ಟ್-2ಗೆ ಬಂಡವಾಳ ಹೂಡುತ್ತಿದೆ.

2019ರಲ್ಲಿ ರಿಲೀಸ್ ಆಗಿದ್ದ ಪೊಲಿಟಿಕಲ್ ಆಕ್ಷನ್ ಥ್ರಿಲ್ಲರ್ ಲೂಸಿಫರ್ ಸಿನಿಮಾ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಮೋಹನ್ ಲಾಲ್ ಅವರ ನಟನೆ, ಪೃಥ್ವಿರಾಜ್ ಡೈರೆಕ್ಷನ್ ಬಗ್ಗೆ ಸಿನಿರಸಿಕರು ಚಪ್ಪಾಳೆ ತಟ್ಟಿದ್ದರು. ಇದೀಗ ಲೂಸಿಫರ್ ಪಾರ್ಟ್-2ಗೆ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಸಜ್ಜಾಗಿದ್ದು, ಲೈಕಾ ಜೊತೆಯಾಗಿ ನಿಂತಿದೆ. ‘ಲೂಸಿಫರ್’ 2ನೇ ಅಧ್ಯಾಯಕ್ಕೆ ಎಂಪೂರನ್ ಎಂಬ ಟೈಟಲ್ ಇಡಲಾಗಿದೆ. ಮಲಯಾಳಂನ ಖ್ಯಾತ ನಿರ್ಮಾಣ ಸಂಸ್ಥೆ ಆಶೀರ್ವಾದ ಸಿನಿಮಾಸ್ ಜೊತೆಗೂಡಿ ಲೈಕಾ ಈ ಚಿತ್ರ ನಿರ್ಮಾಣ ಮಾಡುತ್ತಿದೆ. ಜಿ ಕೆ ಎಂ ತಮಿಳ್ ಕುಮಾರನ್ ಲೈಕಾ ಪ್ರೊಡಕ್ಷನ್ ನ ಮುಖ್ಯಸ್ಥರಾಗಿದ್ದಾರೆ. ಮುರಳಿ ಗೋಪಿ ಈ ಚಿತ್ರಕ್ಕೆ ಚಿತ್ರಕಥೆ ಬರೆಯುತ್ತಿದ್ದಾರೆ, ಸುಜಿತ್ ವಾಸುದೇವ್ ಛಾಯಾಗ್ರಹಣವನ್ನು ನಿಭಾಯಿಸುತ್ತಿದ್ದಾರೆ. ದೀಪಕ್ ದೇವ್ ಸಂಗೀತ ಸಂಯೋಜಿಸಿದ್ದಾರೆ. ಸುರೇಶ್ ಬಾಲಾಜಿ ಮತ್ತು ಜಾರ್ಜ್ ಪಯಸ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿಯಲ್ಲಿ ಚಿತ್ರ ನಿರ್ಮಾಣವಾಗಿದೆ.

Sulekha