ಬೆಥೆಲ್ ಜಾಗಕ್ಕೆ ಬರ್ತಾರಾ ಕಾಕ್ಸ್? – RCBಗೆ ಬೇಕಿದೆ ಬ್ಯಾಟಿಂಗ್ ಖದರ್
LSG ಲಗಾಮಿಗೆ ಪ್ಲೇಯಿಂಗ್ 11 ರೆಡಿ

ಬೆಥೆಲ್ ಜಾಗಕ್ಕೆ ಬರ್ತಾರಾ ಕಾಕ್ಸ್? – RCBಗೆ ಬೇಕಿದೆ ಬ್ಯಾಟಿಂಗ್ ಖದರ್LSG ಲಗಾಮಿಗೆ ಪ್ಲೇಯಿಂಗ್ 11 ರೆಡಿ

ಲಕ್ನೋ ಸೂಪರ್ ಜೇಂಟ್ಸ್ ಬೇಟೆಗೆ ಸಿದ್ಧವಾಗಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಪ್ರಾಕ್ಟೀಸ್​ನಲ್ಲಿದೆ. ಪಂದ್ಯ ನಡೆಯಲಿರೋ ಏಕನಾ ಸ್ಟೇಡಿಯಮ್​ ಬೆಂಗಳೂರು ಪಾಲಿಗೆ ಲಕ್ಕಿ ಸ್ಟೇಡಿಯಂ ಕೂಡ. ಈ ಮ್ಯಾಚ್ ಗೆದ್ದು ಈ ಸೀಸನ್​ನಲ್ಲಿ ಬೌನ್ಸ್ ಬ್ಯಾಕ್ ಮಾಡೋಕೆ ಕಾಯ್ತಿದ್ದಾರೆ. ಆದ್ರೆ ಈ ಪಂದ್ಯಕ್ಕೆ ಆರ್​ಸಿಬಿ ಪ್ಲೇಯಿಂಗ್ 11 ನಲ್ಲಿ ಬದಲಾವಣೆಯಾಗೋ ಹಿಂಟ್ ಸಿಕ್ಕಿದೆ.

ಇದನ್ನೂ ಓದಿ : REVENGEನಲ್ಲೂ ಗೆಲ್ಲುತ್ತಾ RCB? – ಪಂತ್ ಪಡೆಗೆ RED ALERT

ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಈ ಸೀಸನ್​ನಲ್ಲಿ ಬ್ಯಾಟಿಂಗ್ ಅಂತಾ ಬಂದಾಗ್ಲೂ ಸುನಾಮಿ ಎಬ್ಬಿಸಿದ್ದಾರೆ. ಬೌಲಿಂಗ್ ಅಂತಾ ಬಂದಾಗ್ಲೂ ಕಿಚ್ಚು ಹಚ್ಚಿದ್ದಾರೆ. ಕಂಪ್ಲೀಟ್ ಬ್ಯಾಲೆನ್ಸ್​ಡ್ ಟೀಂ ಆಗಿ ಚಾಂಪಿಯನ್ ಟೀಂ ಪರ್ಫಾಮ್ ಮಾಡ್ತಿದೆ. ಲಾಸ್ಟ್ ಮ್ಯಾಚಲ್ಲಿ ಸೋತಿದ್ರೂ ಈಗ ಲಕ್ನೋ ವಿರುದ್ಧ ಗೆದ್ದು ಪ್ಯಾಚಪ್ ಮಾಡಿಕೊಳ್ಬೇಕಿದೆ. ಇದಕ್ಕಾಗಿ ಪ್ಲೇಯಿಂಗ್ 11ನಲ್ಲಿ ಒಂದು ಬದಲಾವಣೆಯ ಕೂಗು ಎದ್ದಿದೆ.

ವಿರಾಟ್ ಕೊಹ್ಲಿ ಜೊತೆ ಯಾರು ಇನ್ನಿಂಗ್ಸ್ ಆರಂಭಿಸ್ತಾರೆ?

ಬೆರಳಿನ ಗಾಯಕ್ಕೆ ತುತ್ತಾಗಿರೋ ಫಿಲ್ ಸಾಲ್ಟ್ ಕಳೆದ ಮೂರು ಪಂದ್ಯಗಳಿಂದ ಬೆಂಗಳೂರು ಪರ ಆಡಿಲ್ಲ. ಇಂಗ್ಲೆಂಡ್​​ನಲ್ಲಿ ಚಿಕಿತ್ಸೆ ಪಡೀತಿದ್ದು ಇನ್ನೂ ರಿಕವರ್ ಆಗದ ಕಾರಣ ಲಕ್ನೋ ವಿರುದ್ಧದ ಪಂದ್ಯದಲ್ಲೂ ಆಡಲ್ಲ. ಆದ್ರೆ ಸಾಲ್ಟ್ ಜಾಗದಲ್ಲಿ ಆಡ್ತಿರೋ ಜೇಕಬ್ ಬೆಥೆಲ್ ಸಪ್ಪೆ ಅನ್ನಿಸ್ತಿದ್ದಾರೆ. ಪವರ್ ಪ್ಲೇನಲ್ಲಿ ಸಪೋರ್ಟ್ ಸಿಗ್ತಿಲ್ಲ. 3 ಪಂದ್ಯಗಳಿಂದ ಕೇವಲ 39 ರನ್ಸ್ ಮಾತ್ರ ಕಲೆ ಹಾಕಿದ್ದಾರೆ. ಹೀಗಾಗಿ ಬೆಥೆಲ್ ಬದಲು ಜೋರ್ಡಾನ್ ಕಾಕ್ಸ್​ಗೆ ಚಾನ್ಸ್ ಕೊಡಿ ಅನ್ನೋ ಕೂಗು ಎದ್ದಿದೆ. ಸ್ಫೋಟಕ ಬ್ಯಾಟಿಂಗ್​ಗೆ ಹೆಸರಾಗಿರೋ ಕಾಕ್ಸ್ ಇದುವರೆಗೆ ಐಪಿಎಲ್​ನಲ್ಲಿ ಆಡಿಲ್ಲ. ಬಟ್ ಹಂಡ್ರೆಡ್ ಲೀಗ್ ಹಾಗೂ ಇಂಟರ್​ನ್ಯಾಷನಲ್ ಟಿ20 ಲೀಗ್​ಗಳಲ್ಲಿ ಸದ್ದು ಮಾಡಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ ಈವರೆಗೆ 165 ಇನಿಂಗ್ಸ್ ಆಡಿ 4045 ರನ್ ಕಲೆಹಾಕಿದ್ದಾರೆ. ಒಂದು ಶತಕ ಹಾಗೂ 21 ಅರ್ಧಶತಕಗಳಿವೆ. ಹೀಗಾಗಿ ಕೊಹ್ಲಿ ಜೊತೆ ಕಾಕ್ಸ್ ಆಡಲಿ ಅನ್ನೋದು ಕೆಲವರ ಸಜೇಷನ್.

ಲಕ್ನೋ ಬೇಟೆಗೆ ಪ್ಲೇಯಿಂಗ್ 11

ವಿರಾಟ್ ಕೊಹ್ಲಿ

ಜೇಕಬ್ ಬೆಥೆಲ್

ದೇವದತ್ ಪಡಿಕ್ಕಲ್

ರಜತ್ ಪಾಟಿದಾರ್

ಜಿತೇಶ್ ಶರ್ಮಾ

ಟಿಮ್ ಡೇವಿಡ್

ರೊಮಾರಿಯೊ ಶೆಫರ್ಡ್

ಕೃನಾಲ್ ಪಾಂಡ್ಯ

ಭುವನೇಶ್ವರ್ ಕುಮಾರ್

ಸುಯಾಶ್ ಶರ್ಮಾ

ಜೋಶ್ ಹ್ಯಾಜಲ್‌ ವುಡ್

ಇನ್ನು ಇಂಪ್ಯಾಕ್ಟ್ ಪ್ಲೇಯರ್​ರನ್ನ ಸಿಚುಯೇಷನ್ ನೋಡ್ಕೊಂಡು ಸೆಲೆಕ್ಟ್ ಮಾಡಿಕೊಳ್ತಾರೆ. ಬ್ಯಾಟಿಂಗ್ ಫೇಲ್ಯೂರ್ ಅನ್ಸಿದ್ರೆ ವೆಂಕಟೇಶ್ ಅಯ್ಯರ್ ಬರ್ತಾರೆ. ಇಲ್ಲ ಬೌಲಿಂಗ್ ಬೇಕು ಅಂದ್ರೆ ರಸಿಕ್ ಸಲಾಂ ದಾರ್ ಅವಕಾಶ ಪಡೀತಿದೆ. ಸೋ ಸಿಚುಯೇಷನ್ ನೋಡ್ಕೊಂಡು ಡಿಸೈಡ್ ಮಾಡ್ತಾರೆ. ಌಂಡ್ ಆರ್​ಸಿಬಿಯ ಮತ್ತೊಂದು ಪ್ರಾಬ್ಲಂ ಅಂದ್ರೆ ಲಾಸ್ಟ್ ಮ್ಯಾಚಲ್ಲಿ ಬ್ಯಾಟರ್ಸ್ ಡೌನ್​ಫಾಲ್. ಗುಜರಾತ್ ವಿರುದ್ಧ 79ಕ್ಕೆ 3 ವಿಕೆಟ್ ಕಳ್ಕೊಂಡಿದ್ದ ಬೆಂಗಳೂರು 96 ರನ್ಸ್ ಆಗುವಷ್ಟ್ರಲ್ಲೇ 6 ವಿಕೆಟ್ ಉರುಳಿತ್ತು. ಸೋ ಮಿಡಲ್ ಆರ್ಡರ್​ನಲ್ಲಿ ರನ್ಸ್ ಬೇಕಿದೆ. ಅದೂ ಅಲ್ದೇ 155 ರನ್​ಗಳಿಗೆ ಆಲೌಟ್ ಕೂಡ ಆಗಿದ್ರು. ಹೀಗಾಗಿ ಲಕ್ನೋ ವಿರುದ್ಧ ಮತ್ತೆ ಬ್ಯಾಟಿಂಗ್ ಖದರ್ ತೋರಿಸಬೇಕಿದೆ. ಅದೂ ಅಲ್ದೇ ಲಕ್ನೋದಲ್ಲಿ ಪಂದ್ಯ ನಡೀತಾ ಇದ್ರೂ ಗೆಲುವಿನ ಅಡ್ವಾಂಟೇಜಸ್ ಎಲ್ಲಾ ಬೆಂಗಳೂರು ಪರವೇ ಇದೆ.

ಬೆಂಗಳೂರು-ಲಕ್ನೋ ರೆಕಾರ್ಡ್ಸ್!

ಒಟ್ಟಾರೆ 7 ಪಂದ್ಯ, ಬೆಂಗಳೂರು 5 ಸಲ, ಲಕ್ನೋ 2 ಸಲ ವಿನ್

ಏಕನಾ ಸ್ಟೇಡಿಯಮ್ ನಲ್ಲಿ 2 ಪಂದ್ಯಗಳಲ್ಲೂ ಬೆಂಗಳೂರು ಗೆಲುವು

ಈ ಸೀಸನ್ ನಲ್ಲಿ ತವರಿನಲ್ಲಿ ಒಂದೂ ಪಂದ್ಯ ಗೆಲ್ಲದ ಲಕ್ನೋ

ಏಕನಾದಲ್ಲಿ 4 ಪಂದ್ಯ ಆಡಿದ್ದು ನಾಲ್ಕರಲ್ಲೂ ಸೋಲಿರುವ ಲಕ್ನೋ

Shantha Kumari