ಮುಂಬೈ ವಿರುದ್ಧ ಗೆದ್ದು ಬೀಗಿದ ಲಕ್ನೋ ಸೂಪರ್​ ಜೈಂಟ್ಸ್ – ಮೂರನೇ ಸ್ಥಾನಕ್ಕೆ ಜಿಗಿದ ಲಕ್ನೋ

ಮುಂಬೈ ವಿರುದ್ಧ ಗೆದ್ದು ಬೀಗಿದ ಲಕ್ನೋ ಸೂಪರ್​ ಜೈಂಟ್ಸ್ – ಮೂರನೇ ಸ್ಥಾನಕ್ಕೆ ಜಿಗಿದ ಲಕ್ನೋ

ಮುಂಬೈ ಇಂಡಿಯನ್ಸ್‌  ಹಾಗೂ ಲಕ್ನೋ ಸೂಪರ್‌ ಜೈಂಟ್ಸ್‌  ನಡುವೆ ನಡೆದ ಪಂದ್ಯದಲ್ಲಿ ಲಕ್ನೋ ಗೆದ್ದು ಬೀಗಿದೆ.  4 ವಿಕೆಟ್‌ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ.

ಕ್ನೋ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಮುಂಬೈ 7 ವಿಕೆಟ್‌ ನಷ್ಟಕ್ಕೆ 144 ರನ್‌ ಗಳಿಸಿತು. ಸುಲಭ ಸವಾಲನ್ನು ಬೆನ್ನಟ್ಟಿದ ಲಕ್ನೋ ಇನ್ನೂ 4 ಎಸೆತ ಬಾಕಿ ಇರುವಂತೆಯೇ 6 ವಿಕೆಟ್‌ ನಷ್ಟಕ್ಕೆ 145 ರನ್‌ ಹೊಡೆದು ಜಯಗಳಿಸಿತು.

ಇದನ್ನೂ ಓದಿ: ಬಿಸಿಲಿನ ಝಳದಿಂದ ನಲುಗಿದ ಕರುನಾಡು – ರಾಜ್ಯದಲ್ಲಿ ಉಷ್ಟ ಅಲೆ ಮತ್ತಷ್ಟು ಹೆಚ್ಚಳ!

ಕೊನೆಯ 4 ಓವರ್‌ಗಳಲ್ಲಿ ಲಕ್ನೋ ತಂಡ ಗೆಲ್ಲಲು 23 ರನ್‌ ಬೇಕಿತ್ತು. 17 ಓವರ್‌ ಎಸೆದ ಬುಮ್ರಾ 1 ರನ್‌ ನೀಡುವ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದರು.

ಜೆರಾಲ್ಡ್ ಕೋಟ್ಜಿ 18ನೇ ಓವರ್‌ನಲ್ಲಿ 9 ರನ್‌ ನೀಡಿ ಟರ್ನರ್‌ ಅವರನ್ನು ಬೌಲ್ಡ್‌ ಮಾಡಿದರು. ಕೊನೆಯ 12 ಎಸೆತಗಳಲ್ಲಿ 13 ರನ್‌ ಬೇಕಿತ್ತು. ಹಾರ್ದಿಕ್‌ ಎಸೆದ ಮೊದಲ ಬಾಲಿಗೆ ಬದೌನಿ ರನೌಟ್‌ ಆದರು. ಈ ಓವರ್‌ನಲ್ಲಿ 10 ರನ್‌ ಬರುವ ಮೂಲಕ ಪಂದ್ಯ ಮುಂಬೈಯಿಂದ ಜಾರಿತು. ಕೊನೆಯ ಓವರ್‌ನ ಮೊದಲ ಎಡು ಎಸೆತಗಳಲ್ಲಿ ಪೂರನ್‌ 3 ರನ್‌ ಗಳಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.

ಲಕ್ನೋ ಪರ ಸ್ಟೊಯಿನೆಸ್‌ 62 ರನ್‌(45 ಎಸೆತ, 7 ಬೌಂಡರಿ, 2 ಸಿಕ್ಸ್‌), ಕೆಎಲ್‌ ರಾಹುಲ್‌ 28 ರನ್‌(22 ಎಸೆತ, 3 ಬೌಂಡರಿ, 1 ಸಿಕ್ಸರ್‌) ಸಿಡಿಸಿ ಔಟಾದರು. ಮುಂಬೈ ಪರ ಇಶನ್‌ ಕಿಶನ್‌ 32 ರನ್‌ (36 ಎಸೆತ, 3 ಬೌಂಡರಿ), ನೆಹಾಲ್ ವಧೇರಾ 46 ರನ್‌(41 ಎಸೆತ, 4 ಬೌಂಡರಿ, 2 ಸಿಕ್ಸರ್‌), ಟಿಮ್‌ ಡೇವಿಡ್‌ 35 ರನ್‌ ( 18 ಎಸೆತ, 3 ಬೌಂಡರಿ, 1 ಸಿಕ್ಸರ್‌) ಹೊಡೆದರು.

Shwetha M

Leave a Reply

Your email address will not be published. Required fields are marked *