SUPER OVER ಅಲ್ಲ ಕಾಮಿಡಿ ಓವರ್ – ಸೋಲೋಕಂತಲೇ ಆಡ್ತಿದ್ದಾರಾ ಲಕ್ನೋ?
ರಿಂಕು & ನರೈನ್ ಆಟಕ್ಕೆ ಗೆದ್ದ KKR

SUPER OVER ಅಲ್ಲ ಕಾಮಿಡಿ ಓವರ್ – ಸೋಲೋಕಂತಲೇ ಆಡ್ತಿದ್ದಾರಾ ಲಕ್ನೋ?ರಿಂಕು & ನರೈನ್ ಆಟಕ್ಕೆ ಗೆದ್ದ KKR

ಕೊಲ್ಕತ್ತಾ ಮತ್ತು ಲಕ್ನೋ ನಡುವಿನ ಮ್ಯಾಚ್ ಅಂದಾಗ್ಲೇ ಅಷ್ಟೇನು ಇಂಪಾರ್ಟೆನ್ಸ್ ಇರ್ಲಿಲ್ಲ. ಯಾಕಂದ್ರೆ ಬಾಟಮ್ 2ನಲ್ಲಿರೋ ತಂಡಗಳ ಪರ್ಫಾಮೆನ್ಸ್  ಅಷ್ಟಕ್ಕಷ್ಟೇ ಇತ್ತು. ಆದ್ರೆ ಕ್ಲೈಮ್ಯಾಕ್ಸ್ ಅಂತಾ ಬಂದಾಗ ಥ್ರಿಲ್ಲಿಂಗ್ ಅನ್ಬೇಕೋ ಅಥವಾ ಕಾಮಿಡಿ ಶೋ ಅನ್ಬೇಕೋ ಗೊತ್ತಿಲ್ಲ. ಯಾಕಂದ್ರೆ ಸೋಲೋಕಂತಲೇ ಆಡಿದಂತೆ ಇತ್ತು ಎರಡೂ ತಂಡಗಳು. ಹೀಗಿದ್ರೂ ಗೇಮ್​ನಲ್ಲಿ ಒಂದಷ್ಟು ಇಂಟ್ರೆಸ್ಟಿಂಗ್ ವಿಚಾರಗಳಂತೂ ನಡೆದ್ವು.

ಇದನ್ನೂ ಓದಿ : RCB ಪಂದ್ಯದಂದು ಚಿನ್ನಸ್ವಾಮಿಯಲ್ಲಿ 240ಕ್ಕೂ ಹೆಚ್ಚು ಸಿಸಿಟಿವಿ ಕೇಬಲ್‌ ಕಟ್!‌ –ಮ್ಯಾಚ್‌ ವೇಳೆ ಆಗಿದ್ದೇನು?

ಏಕನಾ ಸ್ಟೇಡಿಯಮ್​ನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಮ್ಯಾಚ್ ಸೂಪರ್ ಓವರ್​ನಲ್ಲಿ ಕೊನೆಯಾಯ್ತು. ಈ ಸೀಸನ್​ನ ಮೊದಲ ಸೂಪರ್ ಓವರ್ ಇದು. ಟಾಸ್​ ಗೆದ್ದ ಲಕ್ನೋ ತಂಡ ಬೌಲಿಂಗ್ ಚೂಸ್ ಮಾಡಿಕೊಂಡ್ರು. ಸೋ ಬ್ಯಾಟಿಂಗ್ ಆರಂಭಿಸಿದ ಕೆಕೆಆರ್​ ಪರ ಬ್ಯಾಟರ್ಸ್ ದು ಅದೇ ರಾಗ ಅದೇ ಹಾಡು. ರಿಂಕು ಸಿಂಗ್ ಮತ್ತು ಕ್ಯಾಮರೂನ್ ಗ್ರೀನ್ ಆಟದಿಂದ 155 ರನ್ ಕಲೆ ಹಾಕಿದ್ರು. ಈ ಟಾರ್ಗೆಟ್ ಬೆನ್ನತ್ತಿದ್ದ ಲಕ್ನೋ ಸುಲಭವಾಗಿ ಗೆಲ್ಬೋದು ಅನ್ಕೊಂಡ್ರೆ ಲಕ್ನೋ ಬ್ಯಾಟರ್ಸ್ ಕೂಡ ಕ್ರೀಸ್​ನಲ್ಲಿ ನಿಂತೂ ಆಡೋದಕ್ಕಿಂತ ಡಗೌಟ್​ನಲ್ಲಿ ಕೂತು ನೋಡೋದೇ ಚೆಂದ ಅನ್ನೋ ಥರ ಔಟ್ ಆಗಿ ಆಗಿ ಹೋದ್ರು. ಹೀಗಿದ್ರೂ ಕೊನೇ ಓವರ್​ನಲ್ಲಿ ಟೇಲ್ ಎಂಡರ್​ಗಳೇ ಗೆಲ್ಲೋಕೆ ಒಂದು ಅವಕಾಶ ಸೃಷ್ಟಿಸಿದ್ರು.

ಸಿಕ್ಸ್ ಬಾರಿಸಿ ಮ್ಯಾಚ್ ಟೈ ಮಾಡಿಸಿದ ಶಮಿ!

ಕೊನೆಯ ಓವರ್‌ನಲ್ಲಿ ಲಖನೌಗೆ ಗೆಲ್ಲಲು 17 ರನ್‌ಗಳ ಅಗತ್ಯವಿತ್ತು. ಕೆಕೆಆರ್ ಪರ ಬೌಲಿಂಗ್ ಮಾಡ್ತಿದ್ದ ಕಾರ್ತಿಕ್ ತ್ಯಾಗಿ 2 ನೋಬಾಲ್ ಎಸೆದ್ರು. ಮೊದಲ ಎಸೆತದಲ್ಲಿ ಸಿಂಗಲ್ ಬಂದರೆ, 2ನೇ ಎಸೆತದಲ್ಲಿ ಬೌಂಡರಿ ನೀಡಿದರು. ಆ ಎಸೆತ ನೋ ಬಾಲ್ ಆಗಿತ್ತು. ನಂತರ ಫ್ರೀ ಹಿಟ್ ಎಸೆತವನ್ನೂ ನೋ ಬಾಲ್ ಎಸೆದರು. ಅದರಲ್ಲಿ 2 ರನ್ ಬಂದಿತು. ಮತ್ತೊಂದು ಫ್ರೀ ಹಿಟ್‌ನಲ್ಲಿ ಹಿಮ್ಮತ್ ಸಿಂಗ್ ಬೌಂಡರಿ ಬಾರಿಸಿದರು. ಒಟ್ಟಾರೆ 2 ಲೀಗಲ್ ಎಸೆತಗಳಲ್ಲಿ 9 ರನ್ ಬಂದಿತು. ಕೊನೆಯ 4 ಎಸೆತಗಳಲ್ಲಿ 8 ರನ್‌ಸ್ ಬೇಕಿತ್ತು. ಆದ್ರೆ 3ನೇ ಎಸೆತದಲ್ಲಿ ಹಿಮ್ಮತ್ ಸಿಂಗ್ ರಿಂಕು ಸಿಂಗ್‌ಗೆ ಕ್ಯಾಚ್ ನೀಡಿದ್ರು. 4ನೇ ಎಸೆತದಲ್ಲಿ ಪ್ರಿನ್ಸ್ ಯಾದವ್ ಬೈಸ್ ಮೂಲಕ ಶಮಿಗೆ ಸ್ಟ್ರೈಕ್ ನೀಡಿದರು. 2 ಎಸೆತಗಳಲ್ಲಿ ಗೆಲ್ಲಲು 7 ರನ್‌ಗಳ ಅಗತ್ಯವಿತ್ತು. 5ನೇ ಎಸೆತದಲ್ಲಿ ಕಾರ್ತಿಕ್ ಡಾಟ್ ಮಾಡುವಲ್ಲಿ ಯಶಸ್ವಿಯಾದರು. ಆದರೆ ಕೊನೆಯ ಎಸೆತದಲ್ಲಿ ಶಮಿ ಸಿಕ್ಸರ್ ಸಿಡಿಸಿ ಪಂದ್ಯವನ್ನ ಟೈ ಮಾಡಿದರು. ಈ ಮೂಲಕ ಲಕ್ನೋಗೆ ಗೆಲ್ಲೋಕೆ ಒಂದು ಅವಕಾಶ ಸೃಷ್ಟಿಸಿದ್ರು. ಆದ್ರೆ ಸೂಪರ್ ಓವರ್ ಹೋಗಿ ಕಾಮಿಡಿ ಓವರ್ ಆಯ್ತು.

3 ಬಾಲ್.. 2 ವಿಕೆಟ್.. ಸುನಿಲ್ ನರೈನ್ ಸೂಪರ್!

ಇನ್ನು ಸೂಪರ್ ಓವರ್‌ನಲ್ಲಿ ಲಖನೌ ಪರ ಪೂರನ್ ಜೊತೆಗೆ  ಮಾರ್ಕ್ರಮ್ ಕ್ರೀಸ್​ಗೆ ಬಂದರು. ಸುನೀಲ್ ನರೈನ್ ಕೆಕೆಆರ್ ಪರ ಸೂಪರ್ ಓವರ್​ ಮಾಡಿದರು. ನರೈನ್ ಮೊದಲ ಎಸೆತದಲ್ಲೇ ಪೂರನ್​ರನ್ನ  ಬೌಲ್ಡ್ ಮಾಡಿದರು. ನಂತರದ ಎಸೆತದಲ್ಲಿ ಪಂತ್ ಸಿಂಗಲ್ ತೆಗೆದುಕೊಂಡರೆ, ಮಾರ್ಕ್ರಮ್ ದೊಡ್ಡ ಹೊಡೆತಕ್ಕೆ ಯತ್ನಿಸಿ ಪೊವೆಲ್ ಕ್ಯಾಚ್ ಹಿಡಿದು ನಂತ್ರ ರಿಂಕು ಸಿಂಗ್ ಕಂಪ್ಲೀಟ್ ಮಾಡಿದ್ರು. ಕೊನೆಗೆ ಲಖನೌ ತಂಡ ಸೂಪರ್ ಓವರ್​ನಲ್ಲಿ 3 ಬಾಲಲ್ಲೇ 2 ವಿಕೆಟ್ ಕಳ್ಕೊಂಡು 1 ರನ್ ಗಳಿಸಿತು. ಕೆಕೆಆರ್ ಗೆಲುವಿಗೆ 2 ರನ್ ಬೇಕಿತ್ತು. ಪ್ರಿನ್ಸ್ ಯಾದವ್ ಬೌಲಿಂಗ್​ಗೆ ಬಂದ್ರು. ಮೊದಲ ಬಾಲ್​ನೇ ರಿಂಕು ಬೌಂಡರಿಗಟ್ಟಿ ಗೆದ್ದು ಬೀಗಿದ್ರು. ಅಷ್ಟಕ್ಕೂ ಗೆಲ್ಲೋ ಮ್ಯಾಚ್​​ನ ಲಕ್ನೋ ತಂಡವೇ ಬಿಟ್ಟುಕೊಡ್ತು. ಕಳಪೆ ಫಾರ್ಮ್​ನಲ್ಲಿದ್ದ ಪೂರನ್ ಮತ್ತು ಮಾರ್ಕ್ರಂನ ಸೂಪರ್ ಓವರ್ ಕಳಿಸಿದ್ದೇ ದಡ್ಡತನ. ಅಟ್​ಲೀಸ್ಟ್ ಆಯುಷ್ ಬದೋನಿ, ಮುಕುಲ್ ಚೌಧರಿ, ಹಿಮ್ಮತ್​ ಸಿಂಗ್​ನ ಕಳಿಸಿದ್ರೂ ನಡೀತಿದ್ರು. ಹೋಗ್ಲಿ ಶಮಿ ಬಂದಿದ್ರೂ ಒಂದೆರಡು ಸಿಕ್ಸ್ ಆದ್ರೂ ಹೊಡೀತಿದ್ರು. ಆದ್ರೆ ಲಕ್ನೋ ನಾಯಕನ ದಡ್ಡತನಕ್ಕೆ ಬೆಲೆ ತೆರಬೇಕಾಯ್ತು. ಸುನಿಲ್ ನರೈನ್ ಅದ್ಭುತ ಬೌಲಿಂಗ್ ಹಾಗೇ ರಿಂಕು ಸಿಂಗ್ ಅದ್ಭುತ ಬ್ಯಾಟಿಂಗ್ ಮತ್ತು ಫೀಲ್ಡಿಂಗ್​ನಿಂದ ಗೆದ್ದ ಕೆಕೆಆರ್​ ಪಾಯಿಂಟ್ಸ್ ಪಟ್ಟಿಯಲ್ಲಿ 5 ಅಂಕಗಳೊಂದಿಗೆ 8ನೇ ಸ್ಥಾನಕ್ಕೇರಿದೆ. ಮುಂಬೈ 9 ಹಾಗೇ ಲಕ್ನೋ 10ನೇ ಸ್ಥಾನದಲ್ಲಿವೆ.

Shantha Kumari