ಮದ್ಯ ಕುಡಿದು ಕೋಟಿ ಕೋಟಿ ಗಳಿಕೆ.. ಮಾರ್ಕ್ರಮ್ ಹೆಂಡ್ತಿ ವಿಚಿತ್ರ ಕೆಲಸ – LSG ಸ್ಟಾರ್ ನ ಪತ್ನಿ ಆದಾಯದ ಗುಟ್ಟು!

ಮದ್ಯ ಕುಡಿದು ಕೋಟಿ ಕೋಟಿ ಗಳಿಕೆ.. ಮಾರ್ಕ್ರಮ್ ಹೆಂಡ್ತಿ ವಿಚಿತ್ರ ಕೆಲಸ – LSG ಸ್ಟಾರ್ ನ ಪತ್ನಿ ಆದಾಯದ ಗುಟ್ಟು!

ಕಳೆದೊಂದು ತಿಂಗಳಿನಿಂದ ಐಪಿಎಲ್ ಹಬ್ಬ ನಡಿತಾ ಇದೆ. ಈ ಟೂರ್ನಿಯಲ್ಲಿ 10 ತಂಡಗಳು ಟ್ರೋಫಿಗಾಗಿ ಸೆಣೆಸಾಡ್ತಿವೆ. ಸ್ಟಾರ್ ಆಟಗಾರರೆನಿಸಿಕೊಂಡವರೆಲ್ಲಾ ಐಪಿಎಲ್‌ ನಲ್ಲಿ ಕಂಪ್ಲೀಟ್ ಫೈಲ್ಯೂರ್ ಆಗಿದ್ದಾರೆ. ಇದೀಗ ಲಕ್ನೋ ಸೂಪರ್ ಜೈಂಟ್ಸ್ ಆಟಗಾರ ಐಡೆನ್ ಮಾರ್ಕ್ರಾಮ್ ಮಾತ್ರ ಸಖತ್ ಸುದ್ದಿಯಲ್ಲಿದ್ದಾರೆ. ಐಪಿಎಲ್ ಸೀಸನ್ 18 ರಲ್ಲಿ ಸತತ ನಾಲ್ಕು ಬಾರಿ ಹಾಫ್ ಸೆಂಚುರಿ ಬಾರಿಸಿದ್ದಾರೆ. ಐಡೆನ್ ಮಾರ್ಕ್ರಾಮ್ ಮೈದಾನದಲ್ಲಿ ಫೋರ್ ಸಿಕ್ಸ್ ಬಾರಿಸುತ್ತಿದ್ದಂತೆ ಅವರ ಪತ್ನಿ ವಿಚಾರ ಈಗ ಮುನ್ನೆಲೆಗೆ ಬಂದಿದೆ. ಮಾರ್ಕ್ರಾಮ್ ಹೆಂಡ್ತಿ ಆಲ್ಕೋಹಾಲ್ ಟೇಸ್ಟ್ ಮಾಡಿ ಕೋಟಿ ಕೋಟಿ ಸಂಪಾದನೆ ಮಾಡ್ತಿದ್ದಾರೆ ಎಂಬ ವಿಚಾರ ರಿವೀಲ್ ಆಗಿದೆ.

ಇದನ್ನೂ ಓದಿ: RCB Vs DC.. ರಿವೇಂಜ್ ಟಾಸ್ಕ್.. ಗೆದ್ರೆ ನಾವೇ ಟೇಬಲ್ ಟಾಪರ್ಸ್ – ಬಲಿಷ್ಠ ತಂಡಗಳಲ್ಲಿ ಯಾರಿಗೆ ಪ್ಲಸ್?

ಐಪಿಎಲ್‌ ಸೀಸನ್‌ 18 ಪ್ರತಿ ಮ್ಯಾಚ್‌ ಭಾರಿ ಕುತೂಹಲ ಮೂಡಿಸಿದೆ. ತಂಡಗಳು ಪಾಂಯಿಂಟ್ಸ್‌ ಟೇಬಲ್‌ ನಲ್ಲಿ ಅಗ್ರಸ್ಥಾನ ಪಡೆಯಲು  ಹೆಣಗಾಡ್ತಿವೆ. ಮುಂದಿನ ಪ್ರತಿಯೊಂದು ಪಂದ್ಯವೂ ಹೆಚ್ಚು ಮಹತ್ವ ಪಡೆಯಲಿದೆ. ಲಕ್ನೋ ಸೂಪರ್‌ ಜೆಂಟ್ಸ್‌ ತಂಡ ಕೂಡ ಈ ಬಾರಿ ಹೇಳಿಕೊಳ್ಳುವಷ್ಟು ಉತ್ತಮ ಪ್ರದರ್ಶನ ನೀಡಿಲ್ಲ.. ಎಲ್‌ಎಸ್‌ಜಿ ತಂಡದ ನಾಯಕ ರಿಷಭ್‌ ಪಂತ್‌ ಕಂಪ್ಲೀಟ್‌ ಫೈಲ್ಯೂರ್‌ ಆಗಿದ್ದಾರೆ. ಆದ್ರೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಓಪನರ್ ಐಡೆನ್ ಮಾರ್ಕ್ರಾಮ್ ಬ್ಯಾಟಿಂಗ್‌ ಮೂಲಕ ಅಬ್ಬರಿಸಿದ್ದಾರೆ. ಈ ವರ್ಷದ ಟೂರ್ನಿಯಲ್ಲಿ ಮಾರ್ಕ್ರಾಮ್‌ ನಾಲ್ಕು ಅರ್ಧಶತಕ ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಮಾರ್ಕ್ರಾಮ್‌ ಆಟದ ಜೊತೆಗೆ ವೈಯಕ್ತಿಕ ವಿಚಾರ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ.

ಅಂದ್ಹಾಗೆ ಮಾರ್ಕ್ರಾಮ್ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ. 2021 ರಲ್ಲಿ ಐಪಿಎಲ್‌ ಗೆ ಪಾದಾರ್ಪಣೆ ಮಾಡಿದ್ರು. ಪಂಜಾಬ್‌ ಕಿಂಗ್ಸ್‌ ತಂಡದಲ್ಲಿ ಆಟ ಆಡಿದ್ರು. 2022 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಆಯ್ಕೆಯಾಗ್ತಾರೆ. ಅದಾದ ಬಳಿಕ ಅಂದ್ರೆ 2023 ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿ ಮಾರ್ಕ್ರಾಮ್‌ ಭಡ್ತಿ ಪಡಿತಾರೆ. ಆದ್ರೆ ಮಾರ್ಕ್ರಾಮ್‌ ಸಾರಥ್ಯದ ಎಸ್‌ ಆರ್‌ ಹೆಚ್‌ ತಂಡ ಆ ವರ್ಷ ಕಳಪೆ ಪ್ರದರ್ಶನ ನೀಡಿತ್ತು. ಆ ವರ್ಷ ಟೂರ್ನಿಯ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನಗಳಿಸಿತ್ತು. ಇದ್ರಿಂದಾಗಿ ಮಾರ್ಕ್ರಾಮ್ ಕ್ಯಾಪ್ಟನ್ಸಿ 2024 ಕ್ಕೆ ಮುಂದುವರಿಯಲಿಲ್ಲ. 2024 ರಲ್ಲೂ ಎಸ್‌ಆರ್‌ಹೆಚ್‌ ಟೀಮ್‌ ನಲ್ಲಿ ಆಡಿದ್ದ ಮಾರ್ಕ್ರಾಮ್‌ ಈ ವರ್ಷ ಎಲ್‌ಎಸ್‌ಜಿ ತಂಡದಲ್ಲಿ ಆಡ್ತಿದ್ದಾರೆ.  ಇದೀಗ ಅವರ ಪತ್ನಿ ವಿಚಾರ ಮುನ್ನೆಲೆ ಬಂದಿದೆ.

ಮಾರ್ಕ್‌ರಮ್ ಮುದ್ದಿನ ಮಡದಿಯ ಹೆಸ್ರು ನಿಕೋಲ್ ಡೇನಿಯಲ್ ಓ ಕಾನರ್. ಇವರಿಬ್ರು ಪ್ರೀತಿಸಿ ಮದುವೆಯಾಗಿದ್ದಾರೆ. ಬಾಲ್ಯ ಸ್ನೇಹಿತರಾಗಿದ್ದ ನಿಕೋಲ್‌ ಹಾಗೂ ಮಾರ್ಕ್ರಾಮ್‌ ಮಧ್ಯೆ ಬರು ಬರುತ್ತಾ ಪ್ರೀತಿ ಚಿಗುರಿತು. ಸುಮಾರು  13 ವರ್ಷಗಳಿಂದ ಡೇಟಿಂಗ್‌ ನಡೆಸಿದ್ದ ಈ ಜೋಡಿ 2022 ರಲ್ಲಿ ಮನೆಯವರ ಒಪ್ಪಿಗೆ ಪಡೆದು  ಮದುವೆಯಾದರು. ಅಂದ್ಹಾಗೆ ನಿಕೋಲ್‌ indipendente women.. ಗಂಡ ಸ್ಟಾರ್‌ ಕ್ರಿಕೆಟರ್‌.. ಬೇಕಾದಷ್ಟು ದುಡ್ಡು ಬರುತ್ತೆ.. ಮಜಾ ಮಾಡ್ಕೊಂಡು ಕಾಲ ಕಳಿಬೋದು ಅಂತಾ ಯೋಚಿಸಿಲ್ಲ.. ಗಂಡನ ಜೊತೆ ತಾನೂ ಸಂಪಾದನೆ ಮಾಡ್ತೀನಿ ಅಂತಾ ಹೊರಟವಳು ಆಕೆ, ಹೀಗಾಗೇ ಡೇನಿಯಲ್ ಉದ್ಯಮ ಕ್ಷೇತ್ರದ‌ ಗುರುತಿಸಿಕೊಂಡಿದ್ದಾರೆ. ಡೇನಿಯಲ್ ಬಳಿ ‘ನಡೌರ ಜ್ಯುವೆಲ್ಲರಿ’ ಎಂಬ ಆಭರಣ ಅಂಗಡಿ ಇದೆ. ಇದಕ್ಕೆ ಸ್ವತಃ ಆಕೆಯೇ ಮಾಡೆಲಿಂಗ್ ಮಾಡುತ್ತಾರೆ. ಅಷ್ಟೇ ಅಲ್ಲದೇ ಆಕೆ ಮದ್ಯ ರುಚಿ ನೋಡುವ ಕೆಲಸ ಮಾಡ್ತಿದ್ದಾರೆ. ಇದ್ರಿಂದ ಕೋಟಿ ಕೋಟಿ ಸಂಪಾದನೆ ಮಾಡ್ತಿದ್ದಾರೆ.

ಹೌದು, ಆಲ್ಕೋಹಾಲ್ ತಯಾರಿಕಾ ಕಂಪನಿಯಲ್ಲೂ ಕೆಲಸ ಮಾಡ್ತಿದ್ದಾರೆ. ಆಕೆ  ಮದ್ಯವನ್ನು ಪರೀಕ್ಷಿಸುವ ಕೆಲಸವನ್ನು ಮಾಡುತ್ತಾರೆ.  ವರದಿಗಳ ಪ್ರಕಾರ, ಮಾರ್ಕ್‌ರಮ್ ಹೆಂಡ್ತಿ ಈ ಉದ್ಯೋಗದಲ್ಲಿ ವರ್ಷಕ್ಕೆ ಬರೋಬ್ಬರಿ 4 ಮಿಲಿಯನ್ ಡಾಲರ್  ಸಂಪಾದನೆ ಮಾಡ್ತಿದ್ದಾರೆ. ಅಂದ್ರೆ 34 ಕೋಟಿ ರೂಪಾಯಿಗೂ ಅಧಿಕ ಸಂಪಾದನೆ ಮಾಡ್ತಿದ್ದಾರೆ ಎಂದು ಹೇಳಲಾಗ್ತಿದೆ. ಇನ್ನು ಆಭರಣ ಅಂಗಡಿಯಿಂದಲೂ ಲಕ್ಷಾಂತರ ರೂಪಾಯಿ ಆದಾಯ ಬರುತ್ತದೆ.

Shwetha M

Leave a Reply

Your email address will not be published. Required fields are marked *