ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ – ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ

ರಾಜ್ಯದಲ್ಲಿ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಇದೀಗ ಮಾರ್ಚ್ ಮೊದಲ ದಿನದಂದೇ ಜನರಿಗೆ ಮತ್ತೊಂದು ಬರೆ ಬಿದ್ದಿದೆ. ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿದೆ.
ಇದನ್ನೂ ಓದಿ: ರೋಹಿತ್ ಔಟ್.. ಗಿಲ್ ಕ್ಯಾಪ್ಟನ್ – ಚಾಂಪಿಯನ್ಸ್ ಟ್ರೋಫಿಯಲ್ಲಿ ಬಿಗ್ ಟ್ವಿಸ್ಟ್
19ಕೆಜಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ದೆಹಲಿಯಲ್ಲಿ ಈ ಮೊದಲು 1,797 ರೂಪಾಯಿ ಇತ್ತು ಈಗ ಅದರ ಬೆಲೆ 1,803 ರೂಪಾಯಿ ಆಗಿದೆ. ಪ್ರತಿ ಸಿಲಿಂಡರ್ ಬೆಲೆಯಲ್ಲಿ 6 ರೂಪಾಯಿ ಏರಿಕೆಯಾಗಿದೆ.
ಆದರೆ ಒಂದು ನಿರಾಳತೆಯ ವಿಷಯ ಏನಂದ್ರೆ ಕಳೆದ ಆಗಷ್ಟ್ನಿಂದಲೂ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ರೀತಿಯ ಏರಿಕೆ ಆಗಿಲ್ಲ. ಇಳಿಕೆಯೂ ಕೂಡ ಆಗಿಲ್ಲ. ಒಂದೇ ಬೆಲೆಯನ್ನು ಕಾಯ್ದುಕೊಂಡು ಬರಲಾಗಿದೆ. ನಗರಗಳ ಅನ್ವಯ ಕಮರ್ಷಿಯಲ್ ಸಿಲಿಂಡರ್ ಬೆಲೆ ಹೇಗಿದೆ ಎನ್ನುವುದನ್ನ ನೋಡುವುದಾದ್ರೆ.
ದೆಹಲಿಯಲ್ಲಿ 1,803 ಕೊಲ್ಕತ್ತಾದಲ್ಲಿ 1,913,ಮುಂಬೈನಲ್ಲಿ 1,755 ಮತ್ತು ಚೆನ್ನೈನಲ್ಲಿ 1,965 ರೂಪಾಯಿಗಳಷ್ಟಾಗಿದೆ ಈ ಮೊದಲು ಈ ಬೆಲೆಗಿಂತ 6 ರೂಪಾಯಿ ಕಡಿಮೆಗೆ ಇಲ್ಲಿ ಕಮರ್ಷಿಯಲ್ ಸಿಲಿಂಡರ್ಗಳನ್ನು ನೀಡಲಾಗುತ್ತಿತ್ತು.