ಮೇ ತಿಂಗಳ ಮೊದಲ ದಿನವೇ ಗ್ರಾಹಕರಿಗೆ ಗುಡ್ ನ್ಯೂಸ್ – ಎಲ್ಪಿಜಿ ಸಿಲಿಂಡರ್ ಬೆಲೆ ಭಾರಿ ಇಳಿಕೆ
ನವದೆಹಲಿ: ಮೇ ತಿಂಗಳ ಮೊದಲ ದಿನವೇ ತೈಲ ಕಂಪನಿಗಳು ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿವೆ. ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ ಕಂಡಿದ್ದು, ಈ ಆದೇಶ ಇಂದಿನಿಂದಲೇ ಜಾರಿಗೆ ಬರಲಿದೆ.
ವಾಣಿಜ್ಯ ಬಳಕೆಯ 19 ಕೆಜಿ ತೂಕದ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ ಕಂಡಿದ್ದು, 172. 50 ರೂ ಕಡಿತಗೊಂಡಿದೆ. ಆದರೆ, ಗೃಹಬಳಕೆಯ ಎಲ್ ಪಿ ಜಿ ಸಿಲಿಂಡರ್ ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಇದನ್ನೂ ಓದಿ: ಪಿಯುಸಿಯಲ್ಲಿ 90% ಅಂಕ ಬಂದಿದ್ರೆ ಮಾತ್ರ ಮನೆ ಬಾಡಿಗೆ! – ಏನಿದು ಹೊಸ ರೂಲ್ಸ್?
ವಾಣಿಜ್ಯ ಗ್ಯಾಸ್ ಸಿಲಿಂಡರ್ ಈ ಹಿಂದೆ ದೆಹಲಿಯಲ್ಲಿ 2028 ರೂ.ಗೆ ಲಭ್ಯವಿತ್ತು. ಆದರೆ, ಈಗ ಅದು 1856.50 ರೂ.ಗೆ ಲಭ್ಯವಾಗಲಿದೆ. ಕೋಲ್ಕತ್ತಾದಲ್ಲಿ 2132 ರೂ.ಗೆ ಸಿಗುವ ಸಿಲಿಂಡರ್ ಈಗ 1960.50 ರೂ.ಗೆ ಲಭ್ಯವಾಗಲಿದೆ. ಮುಂಬೈನಲ್ಲಿ ಈ ಮೊದಲು ವಾಣಿಜ್ಯ ಗ್ಯಾಸ್ ಸಿಲಿಂಡರ್ 1980 ರೂ. ಗೆ ಸಿಗುತ್ತಿತ್ತು. ಈಗ ಅದು 1808.50 ರೂ.ಗೆ ಇಳಿದಿದೆ. ಚೆನ್ನೈನಲ್ಲಿ 2192.50 ರೂ.ಗಳ ಸಿಲಿಂಡರ್ ಗೆ 2021.50 ರೂ. ಇಳಿಕೆ ಕಂಡಿದೆ. ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 14 ಕೆಜಿ ಗೃಹ ಬಳಕೆ ಸಿಲಿಂಡರ್ ಬೆಲೆ 1115.5 ರೂಪಾಯಿ ಆಗಿದ್ದರೆ, 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯೂ 1856 ರೂಪಾಯಿಯಷ್ಟಿದೆ.