ಮದುವೆಗೆ ಪೋಷಕರ ವಿರೋಧ – 60 ವರ್ಷಗಳ ಬಳಿಕ ಒಂದಾದ ಪ್ರೇಮಿಗಳು!

ಮದುವೆಗೆ ಪೋಷಕರ ವಿರೋಧ – 60 ವರ್ಷಗಳ ಬಳಿಕ ಒಂದಾದ ಪ್ರೇಮಿಗಳು!

ಇಂದಿನ ಕಾಲದಲ್ಲಿ ಪ್ರೀತಿ, ಪ್ರೇಮ ಶುರುವಾಗಿ ಕೆಲವೇ ದಿನಗಳಲ್ಲಿ ಅಂತ್ಯವಾಗುತ್ತೆ. ಇನ್ನೂ ಕೆಲ ಪ್ರೀತಿ ಕಾಲೇಜು ಆರಂಭವಾಗಿ, ಓದು ಮುಗಿಯುವಷ್ಟರ ವೇಳೆಗೆ ಬ್ರೇಕಪ್ ಆಗಿರುತ್ತೆ. ಮತ್ತೆ ಕೆಲವರು ಪೋಷಕರ ವಿರೋಧವಿದೆ ಅಂತಾ ದೂರವಾಗುವುದನ್ನು ನಾವು ಕೇಳಿದ್ದೇವೆ. ಈಗಿನ ಕಾಲದಲ್ಲಿ ಹೇಳಿಕೊಳ್ಳಲು ತನಗೂ ಒಬ್ಬ ಪ್ರಿಯಕರ ಅಥವಾ ಪ್ರಿಯತಮೆ ಇರಲಿ ಅಂತ ಲವ್ ಮಾಡುವವರೆ ಹೆಚ್ಚು. ಆದರೆ ಈ ಮಾತು ಎಲ್ಲರ ಪ್ರೀತಿಗೆ ಅನ್ವಯಿಸುವುದಿಲ್ಲ. ಏಕೆಂದರೆ ಕೆಲವರು ತಮ್ಮ ಪ್ರೀತಿಯಲ್ಲಿ ಎಷ್ಟರ ಮಟ್ಟಿಗೆ ನಿಷ್ಠೆಯನ್ನು ಹೊಂದಿರುತ್ತಾರೆ ಎಂದರೆ ಅವರ ಪ್ರೀತಿಗೆ ಯಾರೇ ಅಡ್ಡ ಬಂದರೂ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳೋದಿಲ್ಲ. ಮನೆಯವರ, ಸ್ನೇಹಿತರ ವಿರೋಧದ ನಡುವೆಯೂ ಒಂದಾಗುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತಿದೆ ಈ ವೃದ್ಧ ಜೋಡಿ. ಸುಮಾರು 60 ವರ್ಷಗಳ ಹಿಂದೆ ಪೋಷಕರ ವಿರೋಧದಿಂದ ಬೇರ್ಪಟ್ಟ ಪ್ರೇಮಿಗಳು ಇದೀಗ ಒಂದಾಗಿದ್ದಾರೆ.

ಇದನ್ನೂ ಓದಿ: ತಂದೆ ಮೃತದೇಹದ ಮುಂದೆಯೇ ಮದುವೆಯಾದ ಮಗ! – ಕಾರಣವೇನು ಗೊತ್ತಾ?

79 ವರ್ಷದ ಲೆನ್ ಆಲ್ಬ್ರೈಟನ್ ಮತ್ತು 78 ವರ್ಷದ ಜೀನೆಟ್ ಸ್ಟೀರ್ ಮತ್ತೆ ಒಂದಾದ ಜೋಡಿ. 1963 ರಲ್ಲಿ ಲೆನ್ ಹಾಗೂ ಜೀನೆಟ್ ಮೊದಲ ಬಾರಿಗೆ ಭೇಟಿಯಾಗಿದ್ದರು. ಆಗ ಲೆನ್ ಗೆ 19 ವರ್ಷ ಹಾಗೂ ಜೀನೆಟ್ ಗೆ 18  ವರ್ಷ. ವೈಟ್ ದ್ವೀಪದ ನ್ಯೂಪೋರ್ಟ್ ನ ಸೇಂಟ್ ಮೇರಿಸ್ ಆಸ್ಪತ್ರೆಯಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಾಗಿ ಕೆಲಸ ಮಾಡುತ್ತಿರುವಾಗ ಅವರಿಬ್ಬರ ಮಧ್ಯೆ ಪ್ರೀತಿ ಶುರುವಾಗಿತ್ತಂತೆ. ಅವರು ಭೇಟಿಯಾದ ಕೆಲವು ತಿಂಗಳ ನಂತರ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಹುಡುಗಿಯ ಪೋಷಕರು ಆ ಸಮಯದಲ್ಲಿ ಅವರ ಪ್ರೀತಿಗೆ ಒಪ್ಪಿಗೆ ನೀಡಲಿಲ್ಲವಂತೆ. ಅಲ್ಲದೇ ಆ ಸಮಯದಲ್ಲಿ ಜೀನೆಟ್ ಗೆ  21 ವರ್ಷ ವಯಸ್ಸಾಗಲು ಮೂರು ವರ್ಷಗಳು ಕಡಿಮೆ ಇತ್ತು  ಹೀಗಾಗಿ ಇವರ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು.

ನಂತರ ಅವರಿಬ್ಬರು ಪೋಷಕರ ಒತ್ತಾಯಕ್ಕೆ ಮಣಿದು ಬೇರೆಯವರನ್ನು  ಮದುವೆಯಾಗಿದ್ದರು. ಇಷ್ಟು ವರ್ಷಗಳ ನಂತರ ಜೀನೆಟ್ ನನ್ನು ಹುಡುಕುವ ನಿರ್ಧಾರವನ್ನು ಲೆನ್ ಮಾಡಿದ್ದಾರೆ. ಅಂತಿಮವಾಗಿ ತಮ್ಮ ಹೆಳೆಯ ಪ್ರಿಯತಮೆಯನ್ನು ಮರು ಸಂಪರ್ಕಿಸಿ ಇಬ್ಬರು ಮದುವೆಯಾಗಿದ್ದಾರೆ.

“ವೈವಾಹಿಕ ಜೀವನವು ತುಂಬಾನೇ ಅದ್ಭುತವಾಗಿದೆ. ನನ್ನನ್ನು ಗೌರವದಿಂದ ಕಾಣುವ ವ್ಯಕ್ತಿಯನ್ನು ನಾನು ಮದುವೆಯಾಗಲು ಮತ್ತೆ ಅವಕಾಶ ಸಿಕ್ಕಿದೆ. ಲೆನ್ ಅವರೊಂದಿಗೆ ನನ್ನ ಮಿಕ್ಕಿರುವ ಜೀವನವನ್ನು ಸಂತೋಷದಿಂದ ಕಳೆಯಲು ಬಯಸುತ್ತೇನೆ” ಅಂತ ಜಿನೇಟ್ ಹೇಳಿದ್ದಾರೆ.

“ಇಷ್ಟು ವರ್ಷಗಳ ನಂತರ ಮತ್ತೆ ನಮ್ಮ ನಡುವೆ ಆ ಪ್ರೀತಿ ಶುರುವಾಗಿದೆ. ನಾವು ಪರಸ್ಪರ ಕವಿತೆಗಳನ್ನು ಓದಿದೆವು. ಬಳಿಕ ಉಂಗುರಗಳನ್ನು ಬದಲಾಯಿಸಿಕೊಂಡೆವು. ಕವಿತೆ ಓದಿದಾಗ ನಾನು ತುಂಬಾನೇ ಭಾವುಕನಾದೆ. ಅವಳ ಮೇಲಿನ ನನ್ನ ಪ್ರೀತಿಯಿಂದ ನಾನು ಭಾವಪರವಶನಾದೆ” ಎಂದು ಲೆನ್ ಹೇಳಿದ್ದಾರೆ.

suddiyaana