ಮೊದಲು ಸರಸ.. ನಂತರ 17 ಬಾರಿ ಇರಿದು ಕೊಂದ – ಬೆಂಗಳೂರಿನ ಓಯೋ ರೂಮ್‌ನಲ್ಲಿ ಪ್ರೇಯಸಿಯ ಭೀಕರ ಹತ್ಯೆ

ಮೊದಲು ಸರಸ.. ನಂತರ 17 ಬಾರಿ ಇರಿದು ಕೊಂದ – ಬೆಂಗಳೂರಿನ ಓಯೋ ರೂಮ್‌ನಲ್ಲಿ ಪ್ರೇಯಸಿಯ ಭೀಕರ ಹತ್ಯೆ

ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಹತ್ಯೆ ನಡೆದಿದೆ. ಪ್ರಿಯತಮ ತನ್ನ ಪ್ರಿಯತಮೆಯನ್ನ ಓಯೋ ರೂಮ್​ನಲ್ಲಿ 17 ಬಾರಿ ಇರಿದು ಕೊಂದಿದ್ದಾನೆ. ಮೊದಲು ಲೈಂಗಿಕ ಸಂಪರ್ಕ ನಡೆಸಿ, ಮತ್ತಿನಲ್ಲಿ ತೇಲಾಡುತ್ತಿದ್ದ ಪ್ರಿಯತಮೆಯನ್ನ ಇರಿದು ಕೊಂದು ಪ್ರಿಯಕರ ಪರಾರಿಯಾಗಿದ್ದಾನೆ. ಇದೀಗ ಪಾಪಿ ಪ್ರಿಯಕರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಇದನ್ನೂ ಓದಿ:ಜೊತು ಬಿದ್ದು ಲೋಕಲ್ ಟ್ರೈನ್‌ನಲ್ಲಿ ಪ್ರಯಾಣ – ಪ್ರಾಣ ಕಳೆದುಕೊಂಡ ಐವರು ಪ್ರಯಾಣಿಕರು

ಬೆಂಗಳೂರಿನ ಪೂರ್ಣ ಪ್ರಜ್ಞಾಲೇಔಟ್​​ನ ಹೋಟೆಲ್​​ ಓಯೋ ರೂಮ್​ನಲ್ಲಿ ಭೀಕರ ಕೃತ್ಯ ನಡೆದಿದೆ. ಟೆಕ್ಕಿ ಯಶಸ್​ ಎಂಬಾತ 36 ವರ್ಷದ ಹರಿಣಿ ಎಂಬಾಕೆಯನ್ನ 17 ಬಾರಿ ಇರಿದು ಕೊಂದಿದ್ದಾನೆ. ಮೃತ ಹರಿಣಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಇದೀಗ ಪರಪುರುಷನ ಸಂಗ ಮಾಡಿದ ತಪ್ಪಿಗೆ ಭೀಕರವಾಗಿ ಕೊಲೆಯಾಗಿದ್ದಾಳೆ. ಬಹಳ ದಿನಗಳ ಹಿಂದೆ ಗೃಹಿಣಿ ಹರಿಣಿ ಇದ್ದ ಏರಿಯಾಗೆ ಜಾತ್ರೆಗೆ ಟೆಕ್ಕಿ ಯಶಸ್ ಬಂದಿದ್ದ. ಈ ವೇಳೆ ಹರಿಣಿ ಪರಿಚಯವಾಗಿ ಫೋನ್​ ನಂಬರ್​​ ಪಡೆದಿದ್ದರು. ಬಳಿಕ ಸ್ನೇಹ ಬೆಳೆದು ಚಾಟಿಂಗ್, ಡೇಟಿಂಗ್, ಸುತ್ತಾಟ ಮಾಡಿದ್ದರು. ಜೊತೆಗೆ ಲೈಂಗಿಕ ಸಂಬಂಧ ಕೂಡಾ ಹೊಂದಿದ್ದರು. ಹಲವು ಬಾರಿ ಇದೇ ರೀತಿ ಭೇಟಿಯಾಗಿದ್ದರು.

ಹೆಂಡತಿ ಹರಿಣಿ ಪರ ಪುರುಷನ ಜೊತೆ ಸರಸ ಸಲ್ಲಾಪ ಮಾಡುತ್ತಿರುವುದು ಗಂಡ ದಾಸೇಗೌಡನಿಗೆ ಗೊತ್ತಾಗಿತ್ತು. ಹರಿಣಿ ಫೋನ್​ ಕಿತ್ಕೊಂಡಿದ್ದ ದಾಸೇಗೌಡ ಮನೆಯಲ್ಲೇ ಕೂಡಿ ಹಾಕಿದ್ದರು. ಹರಿಣಿ ಫೋನ್ ಗೆ ಸಿಗದೆ, ಸರಸಕ್ಕೂ ಸಿಗದೇ ಇರೋದು ಯಶಸ್ ಸಿಟ್ಟಿಗೆ ಕಾರಣವಾಗಿತ್ತು. ಹರಿಣಿ ಸಿಕ್ಕರೆ ಸಾಯಿಸಲೇ ಬೇಕು ಅಂತಾ ಮನದಲ್ಲೇ ದ್ವೇಷ ಬೆಳೆಸಿಕೊಂಡಿದ್ದ. ಇತ್ತ ತಿಂಗಳ ನಂತರ ಮತ್ತೆ ಹೊರ ಬಂದಿದ್ದ ಹರಿಣಿ, ತನ್ನ ಬಾಯ್​ಫ್ರೆಂಡ್ ಯಶಸ್ ನ್ನ ಸಂಪರ್ಕಿಸಿದ್ದಾಳೆ. ಜೂನ್ 6ರಂದು ಮಾತುಕತೆ ನಡೆಸಿ ಇಬ್ಬರು ಹೋಟೆಲ್​ಗೆ ಹೋಗಿದ್ದರು. ಮೊದಲೇ ರಾಯಲ್ಸ್ ಹೋಟೆಲ್​ನಲ್ಲಿ ರೂಮ್​ ಬುಕ್ ಮಾಡಿದ್ದ ಯಶಸ್, ಹೋಟೆಲ್​ ನಲ್ಲಿ ಹರಿಣಿ ಜೊತೆ ಲೈಂಗಿಕ ಸಂಪರ್ಕ ಮಾಡಿದ್ದಾನೆ. ಪ್ರಿಯತಮನ ತೋಳಿನಲ್ಲಿ ಆನಂದದಲ್ಲಿ ಹರಿಣಿ ತೇಲಾಡಿದ್ದಳು. ಇದೇ ಅಮಲಿನಲ್ಲಿದ್ದ ಹರಿಣಿಯನ್ನ 17 ಬಾರಿ ಇರಿದು ಕೊಂದಿದ್ದಾನೆ. ನಂತರ ಪರಾರಿಯಾಗಿದ್ದಾನೆ. ವಿಷಯ ತಿಳಿದು ಹೋಟೆಲ್​ಗೆ ಭೇಟಿ ನೀಡಿದ್ದ ಸುಬ್ರಹ್ಮಣ್ಯಪುರ ಪೊಲೀಸರು, ಬಳಿಕ ಎಫ್​ಎಸ್​ಎಲ್ ತಂಡ ಕರೆಸಿ ಎಲ್ಲಾ ಸಾಕ್ಷ್ಯ ಸಂಗ್ರಹಿಸಿದ್ದಾರೆ. ಇತ್ತ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಹರಿಣಿ ನನ್ನಿಂದ ದೂರಾಗಿದ್ದಕ್ಕೆ ಕೊಲೆ ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

Sulekha

Leave a Reply

Your email address will not be published. Required fields are marked *