ಭಾರತೀಯರಲ್ಲಿ ಹೆಚ್ಚಾಯ್ತು ವಿದೇಶ ಪ್ರೇಮ! – ವಿದೇಶಿ ಪೌರತ್ವ ಪಡೆದವರ ಪೈಕಿ ಭಾರತೀಯರೇ ಹೆಚ್ಚು!

ಭಾರತೀಯರಲ್ಲಿ ಹೆಚ್ಚಾಯ್ತು ವಿದೇಶ ಪ್ರೇಮ! – ವಿದೇಶಿ ಪೌರತ್ವ ಪಡೆದವರ ಪೈಕಿ ಭಾರತೀಯರೇ ಹೆಚ್ಚು!

ಕಳೆದ ವರ್ಷ 7,500 ಕೋಟ್ಯಾಧಿಪತಿಗಳನ್ನು ಕಳೆದುಕೊಂಡಿದ್ದ ಭಾರತ ಈ ವರ್ಷ ಮತ್ತಷ್ಟು ಶ್ರೀಮಂತರನ್ನು ಕಳೆದುಕೊಳ್ಳಲಿದೆ. ಈ ವರ್ಷ ಬರೋಬ್ಬರಿ 6,500 ಶ್ರೀಮಂತರು ವಿದೇಶಗಳಿಗೆ ವಲಸೆ ಹೋಗಲಿದ್ದಾರೆ ಎಂದು ಎಂದು ಇತ್ತೀಚೆಗಷ್ಟೇ ವರದಿಯಾಗಿತ್ತು. ಇದೀಗ ವಿದೇಶಗಳಿಗೆ ವಲಸೆ ಹೋಗುವಲ್ಲಿ ಮತ್ತು ವಿದೇಶಿ ಪೌರತ್ವ ಪಡೆಯುವ ದೇಶಗಳಲ್ಲಿ ಭಾರತವೇ ಮುಂಚೂಣಿಯಲ್ಲಿದೆ ಎಂದು ವರದಿಯಾಗಿದೆ.

ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (ಒಇಸಿಡಿ) ಬಿಡುಗಡೆ ಮಾಡಿರುವ ವರದಿಯಲ್ಲಿ ವಿದೇಶಗಳಿಗೆ ವಲಸೆ ಹೋಗುವಲ್ಲಿ ಮತ್ತು ವಿದೇಶಿ ಪೌರತ್ವ ಪಡೆಯುವ ದೇಶಗಳಲ್ಲಿ ಭಾರತವೇ ಮುಂಚೂಣಿಯಲ್ಲಿದೆ ಎಂದು ಉಲ್ಲೇಖವಾಗಿದೆ. ಆ ಪೈಕಿ ಅಮೆರಿಕದ ಪೌರತ್ವವೇ ಅಗ್ರಸ್ಥಾನದಲ್ಲಿದೆ. ಆದರೆ, ವಿದೇಶೀಯರಿಗೆ ಪೌರತ್ವ ಮಂಜೂರು ಮಾಡುವಲ್ಲಿ ಕೆನಡಾ ಹೆಚ್ಚಿನ ಬೆಳವಣಿಗೆ ದಾಖಲಿಸಿದೆ.

ಇದನ್ನೂ ಓದಿ: ಮೆಟಾ ವಿರುದ್ದ ಮೊಕದ್ದಮೆ ಹೂಡಿದ 30ಕ್ಕೂ ಹೆಚ್ಚು ಯುಎಸ್ ರಾಜ್ಯಗಳು! – ಕಂಪನಿ ಎದುರಿಸುತ್ತಿರುವ ಆರೋಪವೇನು?

ಇನ್ನು ಶ್ರೀಮಂತ ದೇಶಗಳ ಪೌರತ್ವ ಗಳಿಸುವವರಲ್ಲಿ ಭಾರತೀಯರೇ ಮುಂಚೂಣಿಯಲ್ಲಿದ್ದಾರೆ. ಕೆನಡಾದಲ್ಲಿ ಪೌರತ್ವ ನೀಡಿಕೆ ಪ್ರಮಾಣ 2021 ಮತ್ತು 2022ರ ನಡುವೆ ಶೇಕಡ 174ರಷ್ಟು ಏರಿಕೆ ದಾಖಲಾಗಿದೆ. ಇದರೊಂದಿಗೆ ವಲಸಿಗರಲ್ಲಿ ಪೌರತ್ವ ಪಡೆಯುವ ನೆಚ್ಚಿನ ತಾಣವಾಗಿ ಕೆನಡಾ ಹೊರಹೊಮ್ಮಿದೆ. ಕಳೆದ ವರ್ಷ ಒಇಸಿಡಿ ದೇಶಗಳ ಪೌರತ್ವ ಪಡೆದವರ ಸಂಖ್ಯೆ ಒಟ್ಟು 28 ಲಕ್ಷಕ್ಕೆ ಏರಿದೆ ಎಂದು ಹೇಳಿರುವ ವರದಿ ದೇಶವಾರು ವಿವರವನ್ನು ಒದಗಿಸಿಲ್ಲ. ಆದರೆ, 2019ರಿಂದ ಒಇಸಿಡಿ ದೇಶಗಳ ಪೌರತ್ವ ಗಳಿಸುವಲ್ಲಿ ಭಾರತ ಪ್ರಮುಖ ಮೂಲವಾಗಿರುವುದನ್ನು ಅದು ಎತ್ತಿ ತೋರಿಸಿದೆ. 1.3 ಲಕ್ಷ ಭಾರತೀಯರು 2021ರಲ್ಲಿ ಒಂದು ಒಇಸಿಡಿ ರಾಷ್ಟ್ರದ ನಾಗರಿಕತ್ವ ಪಡೆದಿದ್ದಾರೆ. 2019ರಲ್ಲಿ ಅದು 1.5 ಲಕ್ಷ ಆಗಿತ್ತು. 57,000 ಚೀನೀಯರು ಒಇಸಿಡಿ ಪೌರತ್ವ ಪಡೆಯುವುದರೊಂದಿಗೆ ಐದನೇ ಸ್ಥಾನದಲ್ಲಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

Shwetha M