ಅಪ್ಪ, ಅಪ್ಪ ಒಪ್ಪಿದರೆ ಮಾತ್ರವೇ ಪ್ರೇಮ ವಿವಾಹಕ್ಕೆ ಅವಕಾಶ – ಸರ್ಕಾರದಿಂದ ಶೀಘ್ರದಲ್ಲೇ ಹೊಸ ಆದೇಶ?

ಅಪ್ಪ, ಅಪ್ಪ ಒಪ್ಪಿದರೆ ಮಾತ್ರವೇ ಪ್ರೇಮ ವಿವಾಹಕ್ಕೆ ಅವಕಾಶ – ಸರ್ಕಾರದಿಂದ ಶೀಘ್ರದಲ್ಲೇ ಹೊಸ ಆದೇಶ?

ಪ್ರೀತಿ ಅನ್ನೋದೇ ಒಂದು ಮಾಯೆ. ಯಾವಾಗ, ಯಾರ ಮೇಲೆ, ಎಲ್ಲಿ, ಯಾಕೆ ಪ್ರೀತಿ ಮೂಡುತ್ತೋ ಹೇಳೋಕೆ ಆಗಲ್ಲ. ಆದರೆ ಒಮ್ಮೆ ಪ್ರೇಮದ ಬಲೆಗೆ ಬಿದ್ದ ಹಕ್ಕಿಗಳು ಮತ್ತೆ ಅದರಿಂದ ಹೊರ ಬರೋದು ಕಷ್ಟ. ಕೆಲವೊಮ್ಮೆ ಪೋಷಕರು ಒಪ್ಪದೆ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಸಾವಿರಾರು ಉದಾಹರಣೆಗಳಿವೆ. ಇನ್ನೂ ಕೆಲವರು ಮನೆಯನ್ನೇ ಬಿಟ್ಟು ದೂರ ಹೋಗಿ ಮದುವೆಯಾಗುತ್ತಾರೆ. ಆದರೆ ಇನ್ನು ಮುಂದೆ ಪ್ರೇಮ ವಿವಾಹಕ್ಕೆ ಹೆತ್ತವರು ಒಪ್ಪಿಗೆ ನೀಡಲೇಬೆಕಂತೆ.

ಇದನ್ನೂ ಓದಿ : ದೇಶದಲ್ಲಿ 13 ಲಕ್ಷ ಮಹಿಳೆಯರು ನಾಪತ್ತೆ –ರಾಜ್ಯದಲ್ಲಿ ಬರೋಬ್ಬರಿ 40 ಸಾವಿರ ಮಂದಿ ಮಿಸ್ಸಿಂಗ್!

ಪೋಷಕರ ಒಪ್ಪಿಗೆ ಪಡೆದು ಪ್ರೇಮ ವಿವಾಹವಾದರೆ ನಿಜಕ್ಕೂ ಅದು ಅದ್ಭುತ. ಆದರೆ ಕೆಲವೊಮ್ಮೆ ಹಲವು ಕಾರಣಗಳಿಗೆ ಪೋಷಕರು ಒಪ್ಪಿಗೆ ನೀಡಲ್ಲ. ಹೀಗಾಗಿ ಪ್ರೇಮಿಗಳು ಓಡಿ ಹೋಗಿ ಮದುವೆಯಾಗುತ್ತಾರೆ. ಬಳಿಕ ಹೆತ್ತವರು ಪಡುವ ಕಷ್ಟ ಅಷ್ಟಿಷ್ಟಲ್ಲ. ಇದಿಗ ಪ್ರೇಮ ವಿವಾಹವಾಗಬೇಕಾದರೆ ಮನೆಯವರ ಒಪ್ಪಿಗೆ ಕಡ್ಡಾಯವಾಗಿ ಬೇಕು ಎಂದು ಗುಜರಾತ್​​ ಸರ್ಕಾರ ಹೊಸ ಆದೇಶ ನೀಡುವ ಸಾಧ್ಯತೆ ಇದೆ. ಗುಜರಾತ್​​ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮೆಹ್ಸಾನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸರ್ದಾರ್ ಪಟೇಲ್ ಸಮುದಾಯವನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಪ್ರೇಮ ವಿವಾಹಕ್ಕೆ ಪೋಷಕರ ಒಪ್ಪಿಗೆಯ ಬೇಡಿಕೆಯನ್ನು ಪಾಟಿದಾರ್ ಸಮುದಾಯದ ಕೆಲವು ವರ್ಗಗಳು ಮಾಡುತ್ತಿವೆ. ಈ ಬಗ್ಗೆ ಖಂಡಿತ ತಕ್ಷಣದಲ್ಲೇ ಕ್ರಮಕೈಗೊಳ್ಳುತ್ತೇವೆ ಎಂದು ಹೇಳುವ ಮೂಲಕ ಪ್ರೇಮ ವಿವಾಹಕ್ಕೆ ಮನೆಯವರ ಒಪ್ಪಿಗೆ ಬೇಕು ಎಂಬ ಚರ್ಚೆಗೆ ಸಿಎಂ ತೆರೆ ಎಳೆದಂತಾಗಿದೆ.

ಪ್ರೇಮ ವಿವಾಹ ಮಾಡಿಕೊಳ್ಳಲು ಮನೆಬಿಟ್ಟು ಓಡಿ ಹೋಗಿರುವ ಘಟನೆಗಳ ಬಗ್ಗೆ ಮಾಹಿತಿ ಪಡೆಯುವಂತೆ ಆರೋಗ್ಯ ಸಚಿವ ರುಶಿಕೇಶ್ ಪಟೇಲ್ ಅವರಿಗೆ ತಿಳಿಸಿದ್ದೇನೆ. ಪ್ರೇಮ ವಿವಾಹಕ್ಕೆ ಪೋಷಕರ ಅನುಮೋದನೆಯನ್ನು ಕಡ್ಡಾಯಗೊಳಿಸಲು ರಚಿಸಬೇಕಾದ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮವನ್ನು ಮಾಡಲಾಗಿದೆ ಎಂದು ಸಿಎಂ ಹೇಳಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಂವಿಧಾನಿಕ ಅನುಮೋದನೆ ಸಿಕ್ಕರೆ ಖಂಡಿತ ಮುಂದಿನ ಹಂತ ಕಾರ್ಯಯೋಜನೆಗಳನ್ನು ಸಿದ್ಧಪಡಿಸಲಾಗುವುದು ಎಂದು ಹೇಳಿದ್ದಾರೆ. ಇನ್ನು ಈ ನಿರ್ಧಾರಕ್ಕೆ ಪ್ರತಿಪಕ್ಷ ಕಾಂಗ್ರೆಸ್​ ಕೂಡ ಮೇಲ್ನೋಟಕ್ಕೆ ಒಲವು ತೋರಿಸಿದೆ ಎಂದು ಹೇಳಿದ್ದಾರೆ. ಪ್ರೇಮ ವಿವಾಹಕ್ಕೆ ಜೋಡಿಗಳು ಪೋಷಕರನ್ನು ನಿರ್ಲಕ್ಷಿಸುತ್ತಿರುವ ಕಾರಣ ಈ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ ಎಂದು ಕಾಂಗ್ರೆಸ್ ಶಾಸಕ ಇಮ್ರಾನ್ ಖೇದವಾಲಾ ಹೇಳಿದ್ದಾರೆ.

suddiyaana