ನಾಯಿಗೆ ಹುಷಾರಿಲ್ಲ ಎಂದು ಪ್ರಾಣಬಿಟ್ಟ ಸಹೋದರಿಯರು! – ಅಷ್ಟಕ್ಕೂ ಆಗಿದ್ದೇನು?

ನಿಯತ್ತು, ನಿಷ್ಠೆ, ನಿಸ್ವಾರ್ಥ ಪ್ರೀತಿಗೆ ಇನ್ನೊಂದು ಹೆಸರೇ ಈ ಶ್ವಾನ. ಒಂದು ಹೊತ್ತು ಊಟ ಹಾಕಿ, ಪ್ರೀತಿ ತೋರಿದರೆ ಅದು ಜೀವನ ಪರ್ಯಂತ ಜತೆಗೆ ಇರುತ್ತದೆ. ಹೀಗಾಗಿ ಶ್ವಾನವನ್ನ ಅನೇಕರು ಮನೆ ಮಕ್ಕಳಂತೆ ಪ್ರೀತಿ ಮಾಡುತ್ತಾರೆ. ,ಮನೆ ಮಕ್ಕಳಂತೆ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾರೆ. ಇದೀಗ ಹೃದಯವಿದ್ರಾವಕ ಘಟನೆ ನಡೆದಿದೆ. ನಾಯಿಗೆ ಹುಷಾರಿಲ್ಲ ಎಂದು ಅಕ್ಕ-ತಂಗಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಈ ಮನಕಲುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ರಾಧಾ ಸಿಂಗ್ ಮತ್ತು ಜಿಯಾ ಸಿಂಗ್ ಮೃತ ಸಹೋದರಿಯರು ಎಂದು ತಿಳಿದುಬಂದಿದೆ.
ಅಷ್ಟಕ್ಕೂ ಆಗಿದ್ದೇನು?
ರಾಧಾ ಸಿಂಗ್ ಮತ್ತು ಜಿಯಾ ಸಿಂಗ್ ತಮ್ಮ ಮನೆಯಲ್ಲಿ ನಾಯಿ ಸಾಕಿದ್ದರು. ಇಬ್ಬರು ಅದನ್ನ ತುಂಬಾ ಮುದ್ದಾಗಿ ಬೆಳೆಸಿದ್ದರು. ಆದ್ರೆ ನಾಯಿ ಅನಾರೋಗ್ಯಕ್ಕೆ ತುತ್ತಾಗಿದೆ. ಇದರಿಂದ ರಾಧಾ ಮತ್ತು ಜಿಯಾ ತುಂಬಾ ಬೇಜಾರು ಮಾಡಿಕೊಂಡಿದ್ರು. ನಾಯಿ ಸ್ಥಿತಿಯನ್ನ ನೋಡಲಾಗದೇ ಕುಗ್ಗಿ ಹೋಗಿದ್ರು. ಹೀಗಾಗಿ ತಾಯಿ ದಿನಸಿ ತರಲು ಕಳುಹಿಸಿದಾಗ ಫಿನೈಲ್ ತರುವಂತೆ ಹೇಳಿದ್ದಾರೆ. ಬಳಿಕ ಅಕ್ಕ, ತಂಗಿ ಪಿನೈಲ್ ಸೇವಿಸಿದ್ದಾರೆ. ಕೂಡಲೇ ಅಸ್ವಸ್ಥರಾದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಅಕ್ಕ- ತಂಗಿ ಮೃತಪಟ್ಟಿದ್ದಾರೆ.
ಅಂದ್ಹಾಗೆ ರಾಧಾ ಮತ್ತು ಜಿಯಾ ಇಬ್ಬರು ಹಲವು ವರ್ಷಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು. ಪದವಿ ಓದಿಕೊಂಡಿದ್ದ ಇವರಿಬ್ಬರು, 2024ರಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರು ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಮಕ್ಕಳು ಪ್ರಾಣ ಕಳೆದುಕೊಂಡಿರುವುದು ಕುಟುಂಬಕ್ಕೆ ಬರಸಿಡಿಲು ಬಡಿದಂತೆ ಆಗಿದೆ. ಮಕ್ಕಳ ಮೃತದೇಹದ ಮುಂದೆ ತಂದೆ, ತಾಯಿ ಕಣ್ಣೀರು ಹಾಕುತ್ತಿದ್ದಾರೆ.

ನೋಡಿರಿ

