ಮೈಕೆಲ್ ಅಜಯ್ ಮತ್ತು ಇಶಾನಿ ನಡುವೆ ಅರಳಿದ ಪ್ರೀತಿ – ಬಿಗ್‌ಬಾಸ್ ಮನೆಯಲ್ಲಿ ಅಧಿಕೃತ ಘೋಷಣೆ ಮಾಡಿದ ಲವ್ಬರ್ಡ್ಸ್
ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಅರಳುವುದು ಹೊಸತೇನಲ್ಲ. ಇಲ್ಲಿ ಶುರುವಾದ ಪ್ರೀತಿ, ಬಿಗ್‌ಬಾಸ್ ಮನೆಯಿಂದ ಹೊರಬಂದ ಮೇಲೂ ಮುಂದುವರೆದ ಉದಾಹರಣೆಗಳಿವೆ. ಬಿಗ್‌ಬಾಸ್ ಮನೆಯಲ್ಲಿ ಲವ್ ಆಗಿ ನಂತರ ಮದುವೆಯಾದವರು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ. ಇವರಲ್ಲದೇ, ಅರವಿಂದ್ ಮತ್ತು ದಿವ್ಯಾ ಉರುಡುಗ ಕೂಡಾ ಜೋಡಿ ಹಕ್ಕಿಗಳೇ. ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಮತ್ತೊಂದು ಜೋಡಿ ಪ್ರೀತಿಯಲ್ಲಿ ಬಿದ್ದಿರುವ ಬಗ್ಗೆ ಅಧಿಕೃತವಾಗಿಯೇ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಬಿಗ್‌ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ಬಂಧನ – ಬಿಗ್‌ಬಾಸ್ ಇತಿಹಾಸದಲ್ಲೇ ಮೊದಲ ಬಾರಿ ಸ್ಪರ್ಧಿಯ ಬಂಧನ
ಬಿಗ್‌ಬಾಸ್ ಮನೆಯಲ್ಲಿ ಸ್ನೇಹವಿದೆ. ವಿರೋಧವೂ ಇದೆ. ಇದೆಲ್ಲವನ್ನೂ ಮೀರಿದ ಪ್ರೀತಿಯೂ ಇದೆ. ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಇಬ್ಬರ ನಡುವೆ ಪ್ರೀತಿ ಅರಳಿದೆ. ಮೈಕೆಲ್ ಅಜಯ್ ಮತ್ತು ಇಶಾನಿ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಗುಸು ಗುಸು ಕೇಳಿ ಬಂದಿತ್ತು. ಇದೀಗ ಮೈಕಲ್, ಇಶಾನಿ ತನ್ನ ಗರ್ಲ್‌ಫ್ರೆಂಡ್ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಮೈಕಲ್ ಇಬ್ಬರ ನಡುವೆ ಪ್ರೀತಿ ಬಗ್ಗೆ ಹೇಳಿದ್ದೇ ತಡ, ಅದನ್ನು ಎಲ್ಲರಿಗೂ ಕೇಳುವಂತೆ ವಿನಯ್ ಗೌಡ ಕೂಗಿ ಹೇಳಿದ್ದಾರೆ. ‘ಇಂದಿನಿಂದ ನನ್ನ ತಂಗಿ ಅಧಿಕೃತವಾಗಿ ಮೈಕೆಲ್‌ಗೆ ಗರ್ಲ್‌ಫ್ರೆಂಡ್’ ಎಂದು ಅನೌನ್ಸ್ ಮಾಡಿದ್ದಾರೆ. ಈ ಬಗ್ಗೆ ಘೋಷಣೆ ಮಾಡುತ್ತಿದ್ದಂತೆಯೇ ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಸಂಭ್ರಮಿಸಿದ್ದಾರೆ. ಈ ಶೋನಲ್ಲಿ ಎಲ್ಲ ವಯಸ್ಸಿನ ಸ್ಪರ್ಧಿಗಳು ಇರುತ್ತಾರೆ. ಅದಕ್ಕೆ ತಕ್ಕಂತೆ ಕೆಲವು ಸಂಬಂಧಗಳು ಹುಟ್ಟಿಕೊಳ್ಳುತ್ತವೆ. ವಿನಯ್ ಗೌಡ ಅವರು ಸಿಂಗರ್ ಇಶಾನಿಯನ್ನು ತಂಗಿ ಎಂದು ಕರೆದಿದ್ದಾರೆ. ಅದೇ ರೀತಿ, ಮ್ಯೂಸಿಕ್ನಲ್ಲಿ ಆಸಕ್ತಿ ಇರುವ ಈಶಾನಿ ಮತ್ತು ಮೈಕೆಲ್ ಅಜಯ್ ನಡುವೆ ಪ್ರೀತಿ ಚಿಗುರಿದೆ.
ಬಿಗ್ ಬಾಸ್ ಮನೆಯಲ್ಲಿ ಸಂಬಂಧಗಳನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ. ಟಾಸ್ಕ್ ವಿಚಾರ ಬಂದಾಗ ಎಲ್ಲ ಸಂಬಂಧಗಳನ್ನು ಬದಿಗಿಟ್ಟು ಹೋರಾಡಬೇಕಾಗುತ್ತದೆ. ನಾಮಿನೇಟ್ ಮಾಡುವಾಗ ಮುಲಾಜು ಇಟ್ಟುಕೊಳ್ಳಲು ಆಗುವುದಿಲ್ಲ. ಪರಸ್ಪರ ಪ್ರೀತಿಸುವವರು ಬೇರೆ ಬೇರೆ ಟೀಮ್ನಲ್ಲಿ ಸ್ಪರ್ಧೆಗೆ ಇಳಿದಾಗ ಸಂಬಂಧಗಳಲ್ಲಿ ಬಿರುಕು ಮೂಡಬಹುದು. ಇನ್ಮುಂದೆ ಈಶಾನಿ ಮತ್ತು ಮೈಕೆಲ್ ಅವರು ಈ ಎಲ್ಲ ಸಂದರ್ಭಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದುನೋಡಬೇಕು. ಬಿಗ್ ಬಾಸ್ ಮನೆಯಲ್ಲಿ ಮೂರನೇ ವಾರದ ಆಟ ನಡೆಯುತ್ತಿದೆ. ಈಗಾಗಲೇ ಸ್ನೇಕ್ ಶ್ಯಾಮ್, ಗೌರೀಶ್ ಅಕ್ಕಿ ಎಲಿಮಿನೇಟ್ ಆಗಿದ್ದಾರೆ. ಹುಲಿ ಉಗುರು ಹೊಂದಿದ್ದ ಆರೋಪದ ಮೇಲೆ ವರ್ತೂರು ಸಂತೋಷ್ ಅವರು ಅರೆಸ್ಟ್ ಆಗಿದ್ದರಿಂದ ಅವರ ಬಿಗ್ ಬಾಸ್ ಜರ್ನಿ ಕೂಡ ಅಂತ್ಯವಾಗಿದೆ.