ಭಾರತೀಯ ವ್ಯಕ್ತಿಗೆ ಲಾಟರಿ ತಂದ ಭಾಗ್ಯ! – ಕಷ್ಟಪಟ್ಟು ಮೇಲೆ ಬಂದಿದ್ದ ವ್ಯಕ್ತಿಗೆ ಸೌದಿಯಲ್ಲಿ ಕುಳಿತು ತಿನ್ನುವ ಯೋಗ!
ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆಂದು ಸೌದಿಗೆ ಹೋಗಿದ್ದ ಭಾರತೀಯನಿಗೆ ಲಾಟರಿಯೊಂದು ಒಲಿದಿದೆ. ಮುಂದಿನ 25 ವರ್ಷ ದುಡಿಯದೆಯೇ ತಿಂಗಳಿಗೆ ಐದೂವರೆ ಲಕ್ಷ ರೂಪಾಯಿ ಸಿಗಲಿದೆ. ಜೀವನದಲ್ಲಿ ಕಷ್ಟಪಟ್ಟು ಮೇಲೆ ಬಂದಿದ್ದ ವ್ಯಕ್ತಿಗೆ ಈಗ ಕುಳಿತಲ್ಲಿಗೆ ದುಡ್ಡು ಬರಲಿದೆ.
ಯುಎಇಯಲ್ಲಿ ಖಾಸಗಿ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ತಮಿಳುನಾಡಿನ ನಿವಾಸಿ ಮಗೇಶ್ ಕುಮಾರ್ ನಟರಾಜನ್ ಎಂಬುವವರಿಗೆ ಲಾಟರಿಯಲ್ಲಿ ಜಾಕ್ಪಾಟ್ ಹೊಡೆದಿದೆ. ಯುಎಇಯಲ್ಲಿ ಲಾಟರಿ ಡ್ರಾನಲ್ಲಿ ಭಾಗವಹಿಸಿ 16 ಕೋಟಿ ಗೆದ್ದ ಮೊದಲ ವಿದೇಶಿಗ ಎಂಬ ದಾಖಲೆಯನ್ನು ಮಗೇಶ್ ಬರೆದಿದ್ದಾರೆ. ಆದರೆ ಈ ಮೊತ್ತವನ್ನು ಒಂದೇ ಬಾರಿಗೆ ನಟರಾಜನ್ಗೆ ನೀಡುತ್ತಿಲ್ಲ. ಇದನ್ನು ಮುಂದಿನ 25 ವರ್ಷಗಳವರೆಗೆ ಪ್ರತಿ ತಿಂಗಳು 5.5 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣವನ್ನು ಪಡೆಯಲಿದ್ದಾರೆ.
49 ವರ್ಷದ ನಟರಾಜನ್ ಅವರು ಎಮಿರೇಟ್ಸ್ ಲಾಟರಿ FAST5 ಗ್ರ್ಯಾಂಡ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಗೆಲುವಿನೊಂದಿಗೆ ಅವರು ಮುಂದಿನ 25 ವರ್ಷಗಳವರೆಗೆ ತಿಂಗಳಿಗೆ 25 ಸಾವಿರ ದಿರ್ಹಮ್ (5.6 ಲಕ್ಷ ರೂ.) ಪಡೆಯಲಿದ್ದಾರೆ.
ಬಾಲ್ಯದಿಂದಲೂ ನಾನು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದೇನೆ. ನನ್ನ ಶಿಕ್ಷಣಕ್ಕೆ ನನ್ನ ಸಮುದಾಯದ ಹಲವು ಮಂದಿ ನೆರವಾಗಿದ್ದಾರೆ, ಇದೀಗ ನನ್ನ ಸಮಯ ಬಂದಿದೆ, ನನ್ನ ಸಮುದಾಯಕ್ಕೆ ಏನಾದರೂ ಮಾಡಬೇಕೆಂದುಕೊಂಡಿದ್ದೇನೆ ಎಂದಿದ್ದಾರೆ.
ಈ ಮೊತ್ತದ ಹಣವನ್ನು ತನ್ನ ಸಮುದಾಯದ ಏಳಿಗೆಗೆ ವಿನಿಯೋಗಿಸುವ ಜೊತೆಗೆ ನನ್ನ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೆ ಬಹುಮಾನದ ಹಣವನ್ನು ವಿನಿಯೋಗಿಸುತ್ತೇನೆ ಎಂದು ಮಗೇಶ್ ಹೇಳಿದ್ದಾರೆ.
ಮಗೇಶ್ ಕುಮಾರ್ ನಟರಾಜನ್ ಮೂಲತಃ ತಮಿಳುನಾಡಿನ ಅಂಬೂರಿನವರು. 2019 ರಲ್ಲಿ ಕೆಲಸ ನಿಮಿತ್ತ ನಾಲ್ಕು ವರ್ಷಗಳ ಅವಧಿಗೆ ಸೌದಿ ಅರೇಬಿಯಾಕ್ಕೆ ಹೋಗಿದ್ದರು. ಅಲ್ಲಿ ಕೆಲಸ ಮಾಡುತ್ತಲೇ ಲಾಟರಿಯಲ್ಲಿ ಅದೃಷ್ಟ ಪರೀಕ್ಷೆಗಿಳಿದು ಟಿಕೆಟ್ ಕೊಳ್ಳುತ್ತಲೇ ಇದ್ದರು. ಇದೀಗ ಈ ಲಾಟರಿಯಿಂದ ಅದೃಷ್ಟ ಬದಲಾಗಿದೆ.