ಅಲೆಗಳ ನಡುವೆ ದಡಕ್ಕೆ ಅಪ್ಪಳಿಸಿದ ರಾಶಿ ರಾಶಿ ಮೀನು – ಹಾರುವ ಮೀನು ಹಿಡಿಯಲು ಮುಗಿಬಿದ್ದ ಜನ
ಬೇಸಿಗೆಯಲ್ಲಿ ಬೆಂದ ಭೂರಮೆಗೆ ಮುಂಗಾರು ಮಳೆಯ ಸ್ಪರ್ಶ ಹೊಸ ಹೊಳಪನ್ನ ನೀಡುತ್ತದೆ. ಮರಗಿಡಗಳ ಚಿಗುರಿಗೆ ನೀರೆರೆಯುತ್ತದೆ. ಮುಂಗಾರು ಮಳೆ ಇಡೀ ಜೀವ ಜಗತ್ತಿಗೆ ಹೊಸತನವನ್ನು ತರುತ್ತದೆ. ಮನುಷ್ಯರಿಂದ ಹಿಡಿದು ಪ್ರತಿಯೊಂದು ಪ್ರಾಣಿಯೂ ಕೂಡ ಮೊದಲ ಮಳೆ ಮೈ ಚುಂಬಿಸುತ್ತಿದ್ದಂತೆ ಖುಷಿಯಿಂದ ತೇಲಾಡುತ್ತವೆ. ಇದೀಗ ಇಂತದ್ದೇ ಒಂದು ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಇದನ್ನೂ ಓದಿ : ರಸ್ತೆಯಲ್ಲಿ ಜಾನುವಾರುಗಳು ಓಡಾಡಿದ್ರೆ ಮಾಲೀಕನಿಗೆ ಬೀಳುತ್ತೆ ಚಪ್ಪಲಿ ಏಟು!
ಮುಂಗಾರು ಮಳೆ ಬೀಳುತ್ತಿದ್ದಂತೆ ಸಮುದ್ರ, ಹಳ್ಳ ಕೊಳ್ಳಗಳು ತುಂಬಿ ತುಳುಕುತ್ತಿದ್ದಂತೆ ಅದರಲ್ಲಿರುವ ಮೀನುಗಳು ಬೇರೆಡೆ ವಲಸೆ ಹೋಗಲು ಮುಂದಾಗುತ್ತವೆ. ನೀರಿನ ಹರಿಯುವಿಕೆಯ ವಿರುದ್ಧವಾಗಿ ಸಾಗುವ ಈ ಮೀನುಗಳು ಅನೇಕ ಬಾರಿ ಗುರಿ ಸೇರಲಾಗದೇ ಮನುಷ್ಯನ ಹೊಟ್ಟೆ ಸೇರುತ್ತವೆ. ಇದೇ ಸಮಯದಲ್ಲಿ ಮೀನುಗಳು ಸಂತಾನೋತ್ಪತ್ತಿ ಕ್ರಿಯೆಯನ್ನು ಶುರು ಮಾಡುತ್ತವೆ. ಸ್ವಚ್ಛ ನೀರನ್ನು ಅರಸಿ ನೀರಿನ ವಿರುದ್ಧ ಹರಿಯುವ ಇವುಗಳು ಪ್ರಕೃತಿಯ ವಿಶಿಷ್ಟ ವೈಚಿತ್ರದಂತೆ ನೋಡುಗರಿಗೆ ಭಾಸವಾಗುತ್ತದೆ. ಅದೇ ರೀತಿ ಕೇರಳದ ಕೊಚ್ಚಿ ಪೋರ್ಟ್ ಬಳಿ ಮೀನುಗಳು ನೀರಿನಿಂದ ಚಿಮ್ಮಿ ನೆಲಕ್ಕೆ ಬೀಳುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಕೆಲ ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಈಗ ವಿಡಿಯೋ ವೈರಲ್ ಆಗುತ್ತಿದೆ. ಪೋರ್ಟ್ ಕೊಚ್ಚಿ ಬೀಚ್ ಬಳಿ ಮೀನುಗಳು ನೀರಿನಿಂದ ಮೇಲಕ್ಕೆ ಚಿಮ್ಮಿ ತೀರಕ್ಕೆ ಬೀಳುತ್ತಿವೆ. ಇದನ್ನ ನೋಡಿ ಓಡಿ ಬಂದ ಜನ ಬಿಟ್ಟಿ ಸಿಕ್ಕ ಮೀನನ್ನು ಬುಟ್ಟಿ, ಚೀಲ, ಪ್ಲಾಸ್ಟಿಕ್ ಕವರ್‌ಗಳಲ್ಲಿ ತುಂಬಿಕೊಂಡು ಹೋಗುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ಬೀಚ್‌ನಲ್ಲಿ ದೋಣಿಗಳನ್ನು ಲಂಗಾರು ಹಾಕಲು ಕಟ್ಟಿರುವ ಕಂಬಗಳು ಒಂದು ಕಡೆ ಇದ್ದರೆ, ಅದೇ ಬದಿಯಲ್ಲಿ ಮೀನುಗಳು ರಾಶಿ ರಾಶಿಯಾಗಿ ಮೇಲೆ ಹಾರುತ್ತಿವೆ. ಅಲೆಗಳು ಹತ್ತಿರ ಬರುತ್ತಿದ್ದಂತೆ ಮೀನುಗಳು ಹಾರುತ್ತಾ ಹಾರುತ್ತಾ ರಾಶಿಯಾಗಿ ತೀರಕ್ಕೆ ಬರುತ್ತಿವೆ. ಒಂಥರಾ ಮೀನಿನ ಸುಂಟರಗಾಳಿಯಂತೆ ಈ ವಿಡಿಯೋ ಕಾಣಿಸುತ್ತಿದೆ. Anu Rahuf ಎಂಬುವವರ ಇನ್ಸ್ಗ್ರಾಮ್ ಪೇಜ್‌ನಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.