UAE ಬೇಟೆಗೆ ಸಜ್ಜಾಯ್ತು ಇಂಡಿಯಾ – PAKಗೆ ಭಾರತದ FINAL ಪೆಟ್ಟು?
ಸೊಕ್ಕಿಳಿಸ್ತಾರಾ ರೈಸಿಂಗ್ ಸ್ಟಾರ್ಸ್?

UAE ಬೇಟೆಗೆ ಸಜ್ಜಾಯ್ತು ಇಂಡಿಯಾ – PAKಗೆ ಭಾರತದ FINAL ಪೆಟ್ಟು?ಸೊಕ್ಕಿಳಿಸ್ತಾರಾ ರೈಸಿಂಗ್ ಸ್ಟಾರ್ಸ್?

ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಸೋತಿರೋ ಭಾರತ ಈಗ ಮೂರನೇ ಪಂದ್ಯಕ್ಕೆ ಸಿದ್ಧವಾಗಿದೆ. ನಾಳೆ ಭಾರತ ಮತ್ತು ಯುಎಇ ನಡುವೆ ಪಂದ್ಯ ನಡೆಯಲಿದ್ದು ಸೆಮೀಸ್ ಟಿಕೆಟ್​ಗಾಗಿ ಭಾರತ ಈ ಮ್ಯಾಚ್ ಗೆಲ್ಲಬೇಕಿದೆ. ಌಂಡ್ ಇದೇ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಸೇಡು ತೀರಿಸಿಕೊಳ್ಳೋಕೆ ಇನ್ನೊಂದು ಚಾನ್ಸ್ ಕೂಡ ಸಿಗ್ಬೋದು.

ಇದನ್ನೂ ಓದಿ : IND Vs PAK ಸೇಡಿನ ಸಮರ – ಯಂಗ್ ಇಂಡಿಯನ್ಸ್ ಪಾಠ ಕಲಿಸ್ತಾರಾ?

ನೇಪಾಳ ವಿರುದ್ಧ ಬರೋಬ್ಬರಿ 306 ರನ್‌ಗಳ ಭರ್ಜರಿ ಗೆಲುವಿನ ಮೂಲಕ ಟೂರ್ನಮೆಂಟ್ ಸ್ಟಾರ್ಟ್ ಮಾಡಿದ್ದ ಭಾರತ ಎರಡನೇ ಪಂದ್ಯದಲ್ಲಿ ಪಾಕಿಸ್ತಾನದ ಎದುರು 48 ರನ್‌ಗಳಿಂದ ಸೋಲು ಕಂಡಿದೆ. ಹೀಗಾಗಿ ಯುಎಇ ವಿರುದ್ಧ ಗೆಲುವು ಸಾಧಿಸಿ ಮತ್ತೆ ಕಂ ಬ್ಯಾಕ್ ಮಾಡಬೇಕಿದೆ. ಅಲ್ದೇ ಯುಎಇ ತಂಡ ಆಲ್ರೆಡಿ ಸೆಮೀಸ್​ ರೇಸ್​ನಿಂದ ಹೊರ ಬಿದ್ದಿದೆ. ಪಾಕಿಸ್ತಾನ A ವಿರುದ್ಧ 61 ರನ್‌ಗಳಿಂದ ಸೋತಿದ್ದ ಯುಎಇ, ನೇಪಾಳ ವಿರುದ್ಧವೂ 6 ವಿಕೆಟ್‌ಗಳ ಸೋಲು ಕಂಡಿದೆ. ಹೀಗಾಗಿ ಭಾರತ ವಿರುದ್ಧ ಗೆಲುವು ಸಾಧಿಸುವುದು ಯುಎಇಗೆ ಸುಲಭ ಇರಲ್ಲ.  ಹಾಗೇ ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಯಾಕಂದ್ರೆ ಕಳೆದ ಆವೃತ್ತಿಯಲ್ಲಿ ಯುಎಇ ವಿರುದ್ಧವೇ 42 ಎಸೆತಗಳಲ್ಲಿ 144 ರನ್ ಸಿಡಿಸಿದ್ದ ವೈಭವ್ ಈ ಸಲನೂ ಅಂಥದ್ದೇ ಪರ್ಫಾಮೆನ್ಸ್ ನೀಡ್ತಾರಾ ಅನ್ನೋ ಕುತೂಹಲವಿದೆ. ಈಗಾಗ್ಲೇ ನೇಪಾಳ ವಿರುದ್ಧ ಹಾಗೇ ಪಾಕ್ ವಿರುದ್ಧ ಸೂರ್ಯವಂಶಿ ಬೇಗ ವಿಕೆಟ್ ಒಪ್ಪಿಸಿರೋದ್ರಿಂದ ಯುಎಇ ವಿರುದ್ಧ ಭರ್ಜರಿ ಪ್ರದರ್ಶನ ನೀಡಲೇಬೇಕಿದೆ.

ಭಾರತಕ್ಕೆ ವರದಾನವಾದ ನೆಟ್ ರನ್ ರೇಟ್!

ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಮೆಂಟ್​ನಲ್ಲಿ ಬಿ ಗುಂಪಿನಲ್ಲಿರೋ ಪಾಕಿಸ್ತಾನ ಈಗಾಗಲೇ ಎರಡು ಪಂದ್ಯಗಳನ್ನ ಗೆದ್ದು ಸೆಮಿಫೈನಲ್​ಗೆ ಕಾಲಿಟ್ಟಿದೆ. ಭಾರತ ಮತ್ತು ನೇಪಾಳ ತಲಾ ಎರಡು ಅಂಕಗಳನ್ನು ಹೊಂದಿವೆ. ಭಾರತಕ್ಕೆ ಪ್ಲಸ್ ಪಾಯಿಂಟ್ ಏನಂದ್ರೆ ನೆಟ್​ರನ್ ರೇಟ್. +2.580ರ ಅತ್ಯುತ್ತಮ ನೆಟ್ ರನ್‌ರೇಟ್. UAE ವಿರುದ್ಧ ಭಾರತ ಗೆದ್ದರೆ ಸೆಮಿಫೈನಲ್ ಟಿಕೆಟ್ ಕನ್ಫರ್ಮ್ ಆಗಲಿದೆ. ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾಗಿ ಪಾಕಿಸ್ತಾನ A ತಂಡ ನೇಪಾಳವನ್ನು ಸೋಲಿಸಿದರೆ ಭಾರತಕ್ಕೆ ಸೆಮೀಸ್ ಅವಕಾಶ ಸಿಗಲಿದೆ. ಆದರೆ ನೇಪಾಳ ಪಾಕಿಸ್ತಾನವನ್ನು ಸೋಲಿಸಿ ಭಾರತ-ಯುಎಇ ಪಂದ್ಯ ರದ್ದಾದ್ರೆ ಸೆಮಿಫೈನಲ್ ಕನಸು ಭಗ್ನವಾಗಲಿದೆ. ಹೀಗಾಗಿ UAE ವಿರುದ್ಧ ಗೆಲ್ಲೋದು ಭಾರತಕ್ಕೆ ಮೋಸ್ಟ್ ಇಂಪಾರ್ಟೆಂಟ್. ಯುಎಇ ಏನ್ ಡಮ್ಮಿ ಟೀಂ.. ಈಸಿಯಾಗಿ ಗೆದ್ದುಬಿಡ್ತಾರೆ ಅನ್ನಿಸಿದ್ರೂ ಕೂಡ ಓವರ್ ಕಾನ್ಫಿಡೆನ್ಸ್ ಮುಳುವಾಗಬಹುದು. ಹೀಗಾಗಿ ಕೇರ್​ಫುಲ್ ಆಗಿ ಆಡ್ಬೇಕಾಗುತ್ತೆ. ಌಂಡ್ ಭಾರತದ ನೆಕ್ಸ್ಟ್ ಜರ್ನಿಯಲ್ಲಿ ಸಾಕಷ್ಟು ಪ್ರಶ್ನೆಗಳೂ ಇವೆ.

ಭಾರತಕ್ಕೆ ಸೆಮೀಸ್ ಟಿಕೆಟ್ ಲೆಕ್ಕಾಚಾರ!

ಬೆಳಗ್ಗೆ 11.30ಕ್ಕೆ ಭಾರತ-ಯುಎಇ, ಮಧ್ಯಾಹ್ನ 3:30ಕ್ಕೆ ಪಾಕ್-ನೇಪಾಳ

ಭಾರತ ಯುಎಇ ವಿರುದ್ಧ ಗೆದ್ದು, ನೇಪಾಳ ವಿರುದ್ಧ ಪಾಕ್ ಗೆದ್ರೆ ಭಾರತಕ್ಕೆ ಸೆಮೀಸ್

ಭಾರತವೂ ಗೆದ್ದು ನೇಪಾಳವೂ ಗೆದ್ರೆ ನೆಟ್ ರನ್ ರೇಟ್ ನಲ್ಲಿ ಭಾರತಕ್ಕೆ ಟಿಕೆಟ್

ಮಳೆಗೆ ಭಾರತ-ಯುಎಇ ಪಂದ್ಯ ರದ್ದಾಗಿ ಪಾಕ್ ನೇಪಾಳ ವಿರುದ್ಧ ಗೆದ್ರೂ ಟಿಕೆಟ್

ಯುಎಇ ವಿರುದ್ಧ ಭಾರತ ಸೋತು ನೇಪಾಳ ವಿರುದ್ಧ ಪಾಕ್ ಗೆದ್ರೆ NRR ಆಧಾರ

ಯುಎಇ ವಿರುದ್ಧ ಭಾರತ ಸೋತು ಪಾಕ್ ವಿರುದ್ಧ ನೇಪಾಳ ಗೆದ್ರೆ ನೇಪಾಳಕ್ಕೆ ಸೆಮೀಸ್

ಸೋ ಇಲ್ಲಿ ಆಲ್ಮೋಸ್ಟ್ ಭಾರತಕ್ಕೆ ಸೆಮೀಸ್ ಟಿಕೆಟ್ ಸಿಗುವಂಥ ಚಾನ್ಸಸ್ ಜಾಸ್ತಿನೇ ಇದೆ. ಬಟ್ ಲಾಸ್ಟ್ ಮೂಮೆಂಟ್ ಥ್ರಿಲ್ಲರ್​ವರೆಗೂ ವೇಯ್ಟ್ ಮಾಡ್ಬೇಕಾಗುತ್ತೆ. ಮತ್ತೊಂದೆಡೆ ಟೂರ್ನಮೆಂಟ್​ನಲ್ಲೇ ಭಾರತ-ಪಾಕ್ ಮತ್ತೊಮ್ಮೆ ಮುಖಾಮುಖಿ ಆಗೋ ಚಾನ್ಸ್ ಇದೆ. ಅದೂ ಕೂಡ ಫೈನಲ್ ನಲ್ಲಿ.

ಬಿ ಗುಂಪಿನ ಲೆಕ್ಕಾಚಾರ!

ಸ್ಥಾನ      ತಂಡ        ಪಂದ್ಯ     ಗೆಲುವು        ಸೋಲು      ಅಂಕ      NRR

1       ಪಾಕಿಸ್ತಾನ A       2              2                       0            4       +1.090

2     ಭಾರತ A           2                  1                      1            2       +2.580

3      ನೇಪಾಳ          2                    1                     1            2        -2.461

4      ಯುಎಇ          2                    0                   2           0        -2.061

ಪ್ರಸ್ತುತ ಸಿಚುಯೇಷನ್ ನೋಡ್ತಿದ್ರೆ ಭಾರತ ಹಾಗೇ ಪಾಕ್ ತಂಡಗಳು ಟಾಪ್ 2ನಲ್ಲಿ ಗ್ರೂಪ್ ಹಂತವನ್ನ ಮುಗಿಸೋದು ಪಕ್ಕಾ. ಇನ್ನು ಎ ಗ್ರೂಪ್​ನಲ್ಲಿ ಶ್ರೀಲಂಕಾ ಹಾಗೇ ಬಾಂಗ್ಲಾದೇಶ ತಂಡಗಳು ನಾಕೌಟ್ ಸುತ್ತಿಗೆ ಸೆಲೆಕ್ಟ್ ಆಗಿದ್ದಾರೆ. ಟೂರ್ನಿಯ ಕ್ರಾಸ್‌ಓವರ್ ಸೆಮಿಫೈನಲ್ ಮಾದರಿಯ ಪ್ರಕಾರ, ಗ್ರೂಪ್ Aಯ ಮೊದಲ ಸ್ಥಾನ ಪಡೆದ ತಂಡ ಗ್ರೂಪ್ Bಯ ಎರಡನೇ ಸ್ಥಾನ ಪಡೆದ ತಂಡವನ್ನು ಎದುರಿಸಲಿದೆ. ಮತ್ತೊಂದೆಡೆ ಗ್ರೂಪ್ Bಯ ಮೊದಲ ಸ್ಥಾನ ಪಡೆದ ತಂಡ ಗ್ರೂಪ್ Aಯ ಎರಡನೇ ಸ್ಥಾನ ಪಡೆದ ತಂಡದ ವಿರುದ್ಧ ಸೆಣಸಲಿದೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲು ಸಾಧ್ಯವಿಲ್ಲ. ಎರಡೂ ತಂಡಗಳು ಸೆಮೀಸ್​ನಲ್ಲಿ ಗೆದ್ರೆ ನವೆಂಬರ್ 29 ರಂದು ನಡೆಯಲಿರುವ ಫೈನಲ್ ನಲ್ಲಿ ಮುಖಾಮುಖಿ ಆಗಬಹುದು. ಒಂದು ವೇಳೆ ಭಾರತಕ್ಕೆ ಪಾಕಿಸ್ತಾನ ಫೈನಲ್ ಎದುರಾಳಿಯಾದ್ರೆ ಸಾಕಷ್ಟು ರಿವೇಂಜ್ ಗಳಿವೆ. ಕಳೆದ ಆವೃತ್ತಿಯ ಸೋಲಿಗೆ ಸೇಡು ತೀರಿಸಿಕೊಳ್ಬೇಕು. ಹಾಗೇ ಈ ಆವೃತ್ತಿಯಲ್ಲಿ ಗ್ರೂಪ್ ಹಂತದ ಸೋಲಿಗೆ ಸೇಡು ತೀರಿಸಿಕೊಳ್ಳಬೇಕಿದೆ. ಮೈದಾನದಲ್ಲಿ ಆಟಗಾರರ ಅತಿರೇಕದ ವರ್ತನೆಗೆ ತಿರುಗೇಟು ಕೊಡ್ಬೇಕಿದೆ.

Shantha Kumari

Leave a Reply

Your email address will not be published. Required fields are marked *