ತಪ್ಪಿಸಿಕೊಂಡಿದ್ದ ಶ್ವಾನ ಹೋಗಿದ್ದೆಲ್ಲಿ ಗೊತ್ತಾ? ವಿಡಿಯೋ ವೈರಲ್

ತಪ್ಪಿಸಿಕೊಂಡಿದ್ದ ಶ್ವಾನ ಹೋಗಿದ್ದೆಲ್ಲಿ ಗೊತ್ತಾ? ವಿಡಿಯೋ ವೈರಲ್

ಶ್ವಾನಗಳು ತಪ್ಪಿಸಿಕೊಂಡರೆ ಮಾಲಕರು ಅವುಗಳಿಗಾಗಿ ಹುಡುಕುತ್ತಾರೆ. ಎಲ್ಲಾ ಕಡೆ ವಿಚಾರಿಸುತ್ತಾರೆ. ಅಲ್ಲದೇ ಅವುಗಳು ಆದಷ್ಟು ಬೇಗ ಮನೆಗೆ ಮರಳಲಿ ಎಂದು ಜಾಹಿರಾತುಗಳನ್ನು ನೀಡುತ್ತಾರೆ. ಆದರೆ ಲಂಡನ್ ನಲ್ಲಿ ನಡೆದ ಘಟನೆಯೊಂದು ಎಲ್ಲರಿಗೂ ಅಚ್ಚರಿಗೊಳಿಸಿದ್ದು, ತಪ್ಪಿಸಿಕೊಂಡ ಶ್ವಾನದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಮೇಕೆಗಳನ್ನು ಮಳೆಯಿಂದ ರಕ್ಷಿಸಲು ರೈನ್ ಕೋಟ್ ಸಿದ್ದಪಡಿಸಿದ ರೈತ

ಹೌದು, ಲಂಡನ್​ನಲ್ಲಿ ಈ ಅಪರೂಪದ ಘಟನೆ ನಡೆದಿದೆ. ಎಲ್ಲೋ ಕಳೆದುಹೋಗಿದ್ದ ಶ್ವಾನ ನೇರವಾಗಿ ಪೊಲೀಸ್​ ಠಾಣೆಗೆ ಬಂದು ಅಚ್ಚರಿ ಮೂಡಿಸಿದೆ. ಆನ್​ಲೈನ್​ನಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿ ನೆಟ್ಟಿಗರೆಲ್ಲ ಎಂಥ ಬುದ್ದಿವಂತ ನಾಯಿ ಇದು ಎಂದು ಕೊಂಡಾಡಿದ್ದಾರೆ.

ಈ ನಾಯಿಯ ಹೆಸರು ರೋಸಿ. ಇನ್ನೊಂದು ನಾಯಿಯೊಂದಿಗೆ ತಿರುಗಾಡಿಕೊಂಡು ಹೋಗುವ ವೇಳೆ ರಸ್ತೆ ಮಧ್ಯೆ ತಪ್ಪಿಸಿಕೊಂಡಿದೆ. ಆಮೇಲೆ ತನ್ನಷ್ಟಕ್ಕೆ ತಾನೇ ಪೊಲೀಸ್​ ಠಾಣೆಯೊಳಗೆ ಬಂದು ಕುಳಿತುಕೊಂಡಿದೆ. ಹೀಗೆ ಬಂದು ಕುಳಿತ ಶ್ವಾನವನ್ನು ಗಮನಿಸಿದ ಪೊಲೀಸರು ಅದರ ಕೊರಳಿನಲ್ಲಿದ್ದ ಕಾಲರ್​ನಿಂದ ಪೋಷಕರನ್ನು ಪತ್ತೆ ಹಚ್ಚಿದ್ದಾರೆ.

ಈ ವಿಡಿಯೋ ಅನ್ನು 60,000 ಕ್ಕೂ ಅಧಿಕ ಜನರು ವೀಕ್ಷಿಸಿದ್ದು, ಅನೇಕರು ರೋಸಿಯನ್ನು ಹೊಗಳಿದ್ದಾರೆ. ಇಷ್ಟೊಂದು ಬುದ್ಧಿ ನಿನಗೆ ಹೇಗೆ ಬಂತು ಹುಡುಗಿ ಎಂದಿದ್ದಾರೆ. ಅಲ್ಲದೇ ಎಂಥ ಜಾಣ ನಾಯಿ ನೀನು, ಜಗತ್ತಿನಲ್ಲಿರುವ ನಾಯಿಗಳಿಗೆ ಇಂಥ ಬುದ್ಧಿ ಬರಲಿ, ಆಗ ನಾಯಿಗಳನ್ನು ಕಳೆದುಕೊಂಡು ಬೇಸರಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತದೆ ಎಂದಿದ್ದಾರೆ ಇನ್ನೊಬ್ಬರು.

suddiyaana