5 ಸ್ಟಾರ್ ಹೋಟೆಲ್‌ನಲ್ಲಿ 2 ವರ್ಷ ವಾಸ್ತವ್ಯ – ಹಣ ಕೊಡದೇ ಚೆಕ್ಔಟ್ ಮಾಡಿ ಪಂಗನಾಮ..!
2 ವರ್ಷವಿದ್ದರೂ ಒಂದು ಪೈಸೆಯೂ ದುಡ್ಡು ಕೊಟ್ಟಿಲ್ಲ - ಪಂಚತಾರಾ ಹೋಟೆಲ್‌ಗೆ 58 ಲಕ್ಷ ರೂಪಾಯಿ ನಷ್ಟ..!

5 ಸ್ಟಾರ್ ಹೋಟೆಲ್‌ನಲ್ಲಿ 2 ವರ್ಷ ವಾಸ್ತವ್ಯ – ಹಣ ಕೊಡದೇ ಚೆಕ್ಔಟ್ ಮಾಡಿ ಪಂಗನಾಮ..!2 ವರ್ಷವಿದ್ದರೂ ಒಂದು ಪೈಸೆಯೂ ದುಡ್ಡು ಕೊಟ್ಟಿಲ್ಲ - ಪಂಚತಾರಾ ಹೋಟೆಲ್‌ಗೆ 58 ಲಕ್ಷ ರೂಪಾಯಿ ನಷ್ಟ..!

ಪಂಚತಾರಾ ಹೋಟೆಲ್ ಅಂದ್ರೆ ಅದೂ ಲಕ್ಸ್ಯೂರಿಯಸ್ ಸೇವೆಯಾಗಿರುತ್ತದೆ. ಅಲ್ಲಿ ಒಂದು ದಿನ ಉಳಿದುಕೊಳ್ಳೋದು ಕೂಡಾ ಸಾಮಾನ್ಯ ಜನರಿಗೆ ಕಷ್ಟವೇ. ಆದರೆ ಇಲ್ಲೊಬ್ಬ ವ್ಯಕ್ತಿ ಹಣ ಪಾವತಿ ಮಾಡದೇ ಪಂಚತಾರಾ ಹೋಟೆಲ್ ನಲ್ಲಿ ಉಳಿದು ಕೊಂಡಿದ್ದಾನೆ. ಅದೇನು ಒಂದೆರಡು ದಿನ ಅಂತೀರಾ.. ಬರೋಬ್ಬರಿ ಎರಡು ವರ್ಷಗಳಿಂದ ದೆಹಲಿಯ ಫೈವ್ ಸ್ಟಾರ್ ಹೋಟೆಲ್‍ ನಲ್ಲಿ ಯಾವುದೇ ಬಿಲ್ ಪಾವತಿ ಮಾಡದೆ ತಂಗಿದ್ದನಂತೆ. ಇದರಿಂದ ಹೋಟೆಲ್ ಗೆ ಸುಮಾರು 58 ಲಕ್ಷ ರೂಪಾಯಿ ನಷ್ಟವಾಗಿದೆ. ಆದರೆ, ಆತ ಸ್ವಲ್ಪವೂ ದುಡ್ಡು ಪಾವತಿಸದೇ, ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಎರಡು ವರ್ಷ ಕಳೆದಿರುವುದಕ್ಕೆ ಸ್ವತಃ ಹೊಟೇಲ್ ಸಿಬ್ಬಂದಿಯೇ ಸಹಾಯ ಮಾಡಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ: ವಧುವಿನ ಮನೆಗೆ ವರನ ಕಡೆಯಿಂದ 15 ಟ್ರ್ಯಾಕ್ಟರ್‌ಗಳಲ್ಲಿ ಬಂತು ಉಡುಗೊರೆ – 500 ಗಿಫ್ಟ್ ನೋಡಿ ಸಂಭ್ರಮಿಸಿದ ಮದುಮಗಳು..!

ಇಂದಿರಾಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದ ಬಳಿ ಏರೋಸಿಟಿಯಲ್ಲಿರುವ ರೋಸೆಟ್ ಹೌಸ್ ಎಂಬ ಹೋಟೆಲ್‍ನವರು ಐಜಿಐ ವಿಮಾನ ನಿಲ್ದಾಣ ಬಳಿಯ ಪೊಲೀಸ್ ಠಾಣೆಯಲ್ಲಿ ಈ ಕುರಿತಾಗಿ ದೂರು ಸಲ್ಲಿಸಿದ್ದಾರೆ. ಬರ್ಡ್ ಏರ್‍ಪ್ರೊಟ್ಸರ್ ಹೋಟೆಲ್ ಪ್ರೈವೇಟ್ ಲಿಮಿಟೆಡ್‍ನ ಅಧಿಕೃತ ಪ್ರತಿನಿಧಿ ವಿನೋದ್ ಮಲ್ಹೋತ್ರಾ ಅವರು ಇತ್ತೀಚೆಗೆ ದಾಖಲಿಸಿದ ಎಫ್‍ಐಆರ್ ಪ್ರಕಾರ, ಅತಿಥಿ ಅಂಕುಶ್ ದತ್ತಾ ಎಂಬಾತ ಕಳೆದ 603 ದಿನಗಳ ಕಾಲ ಹೋಟೆಲ್‍ನಲ್ಲಿ ಅನಧಿಕೃತವಾಗಿ ತಂಗಿದ್ದಾನೆ. 58 ಲಕ್ಷ ವೆಚ್ಚವಾಗಿದ್ದರೂ ಒಂದು ಪೈಸೆಯನ್ನೂ ಪಾವತಿಸದೆ ಚೆಕ್ ಔಟ್ ಮಾಡಿದ್ದಾರೆ ಎಂದು ದೂರಿದ್ದಾರೆ.

ಹೋಟೆಲ್‌ನ ಫ್ರಂಟ್ ಆಫೀಸ್ ವಿಭಾಗದ ಮುಖ್ಯಸ್ಥ ಪ್ರೇಮ್ ಪ್ರಕಾಶ್, ರೂಮಿನ ದರಗಳನ್ನು ನಿರ್ಧರಿಸಲು ಅಧಿಕಾರ ಹೊಂದಿದ್ದರು ಮತ್ತು ಎಲ್ಲಾ ಅತಿಥಿಗಳ ಬಾಕಿಗಳನ್ನು ಪತ್ತೆ ಹಚ್ಚಲು ಹೋಟೆಲ್ ಕಂಪ್ಯೂಟರ್ ಸಿಸ್ಟಮ್‌ಗೆ ಪ್ರವೇಶವನ್ನು ಹೊಂದಿದ್ದರು. ಇವರು ಅಂಕುಶ್‌ ದತ್ತಾ ಅವರ ದೀರ್ಘಾವಧಿಯ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಹೋಟೆಲ್ ನಿಯಮಗಳನ್ನು ಉಲ್ಲಂಘಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಎಫ್‌ಐಆರ್ ಆರೋಪಿಸಿದೆ.

ದತ್ತಾ ಅವರು ಮೇ 30, 2019 ರಂದು ಚೆಕ್ ಇನ್ ಮಾಡಿದ್ದಾರೆ ಮತ್ತು ಒಂದು ರಾತ್ರಿ ಕೊಠಡಿಯನ್ನು ಕಾಯ್ದಿರಿಸಿದ್ದಾರೆ ಎಂದು ಹೋಟೆಲ್ ತಿಳಿಸಿದೆ. ಅವರು ಮೇ 31 ರಂದು ಮರುದಿನ ಚೆಕ್ ಔಟ್ ಮಾಡಬೇಕಿತ್ತು. ಆದರೆ ಅವರು ತಮ್ಮ ವಾಸ್ತವ್ಯವನ್ನು ಜನವರಿ 22, 2021 ರವರೆಗೆ ವಿಸ್ತರಿಸುತ್ತಲೇ ಇದ್ದರು. ನಂತರ ಯಾರಿಗೂ ತಿಳಿಯದೆ ಚೆಕ್‍ಔಟ್ ಮಾಡಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

suddiyaana