UAE ಗೆ ಹೋದವರಿಗೆ ಈ ಸಮಸ್ಯೆಯೇಕೆ? – ವೈದ್ಯರನ್ನು ಕೇಳದಿದ್ದರೆ ಏನಾಗುತ್ತೆ?

UAE ಗೆ ಹೋದವರಿಗೆ ಈ ಸಮಸ್ಯೆಯೇಕೆ? – ವೈದ್ಯರನ್ನು ಕೇಳದಿದ್ದರೆ ಏನಾಗುತ್ತೆ?

ಗಲ್ಫ್ ದೇಶಗಳಿಗೆ ಹೋಗಿ ಅಲ್ಲಿಯೇ ಕೆಲಸ ಮಾಡಿ ಕೈ ತುಂಬಾ ಸಂಪಾದನೆ ಮಾಡಿಕೊಳ್ಳುವುದು ಅನೇಕರ ಕನಸು.. ಹೀಗೆ ಹೋದವರು ಒಂದಷ್ಟು ವರ್ಷಗಳಲ್ಲಿ ಬೇಕಷ್ಟು ಸಂಪಾದನೆ ಮಾಡಿರುವ ಉದಾಹರಣೆಯೂ ಇದೆ.. ಆದ್ರೆ ಹೀಗೆ ಯುಎಇಗೆ ಹೋಗಿ ನೆಲೆಸುತ್ತಿರುವವರ ತಲೆ ಬೋಳಾಗುತ್ತಿರುವ ಬಗ್ಗೆ ವರದಿಯಾಗಿದೆ.

ಭಾರತದಿಂದ ಯುಎಇಗೆ ಕೆಲಸಕ್ಕೆಂದು ಹೋಗೋದು ತುಂಬಾನೇ ಕಾಮನ್.. ಅದರಲ್ಲೂ ದಕ್ಷಿಣ ಭಾರತದ ಜನರಿಗೂ, ಗಲ್ಫ್ ರಾಷ್ಟ್ರಗಳಿಗೂ ಹತ್ತಿರದ ನಂಟಿದೆ.. ಆದ್ರೆ ಅಲ್ಲಿಗೆ ಹೋಗಿ ಕೆಲಸ ಮಾಡುವವರಿಗೆ ತೀವ್ರ ಕೂದಲು ಉದುರುವಿಕೆ ಸಮಸ್ಯೆ ಎದುರಾಗುತ್ತಿದೆ. ಇದಕ್ಕೆ ಅತಿಯಾದ ಬಿಸಿಲು, ಅಲ್ಲಿನ ನೀರು ಮತ್ತು ನಿರಂತರ ಏರ್ ಕಂಡಿಷನರ್ ಅಡಿಯಲ್ಲಿ ವಾಸ ಮಾಡೋದೇ ಕಾರಣ ಅಂತ ಹೇಳ್ತಿರುತ್ತಾರೆ… ಆದ್ರೆ  ತಜ್ಞರು ಮಾತ್ರ ಬೇರೆಯದ್ದೇ ಅಭಿಪ್ರಾಯ ಹೊಂದಿದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆಯ ನಂತರ ಕಾಂಗ್ರೆಸ್‌ ಇತಿಹಾಸಕ್ಕೆ ಸೇರಲಿದೆ – ಹಿಮಂತ ಬಿಸ್ವ ಶರ್ಮಾ ಸ್ಪೋಟಕ ಹೇಳಿಕೆ

ಬುರ್ಜಿಲ್ ಡೇ ಸರ್ಜರಿ ಸೆಂಟರ್ನ ಡರ್ಮಟಾಲಜಿ ಮತ್ತು ಕಾಸ್ಕೆಟಾಲಜಿ ತಜ್ಞರ ಪ್ರಕಾರ, ಹವಾಮಾನ ಬದಲಾವಣೆ, ಒತ್ತಡ ಮತ್ತು ಜೀವನಶೈಲಿಯ ಬದಲಾವಣೆಗಳಿಂದ ಯುಎಇ ಗೆ ಹೋದವರಲ್ಲಿ ಹೆಚ್ಚು ಕೂದಲು  ಉದುರುವಿಕೆಯಾಗುತ್ತಿದೆ. ಅದರಲ್ಲೂ ರೆಡಿ ಟು ಈಟ್ ರೀತಿಯ ಇನ್ಸ್‌ಸ್ಟೆಂಟ್ ಫುಡ್ ಸೇವನೆ ಇದರಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುತ್ತದೆ. ಸಂಸ್ಕರಿಸಿದ ಆಹಾರಗಳಲ್ಲಿ ಕಂಡುಬರುವ ಹೆಚ್ಚಿನ ಮಟ್ಟದ ಸಕ್ಕರೆ ಮತ್ತು ಅನಾರೋಗ್ಯಕರ ಕೊಬ್ಬುಗಳು‌, ದೇಹದಲ್ಲಿ ಬದಲಾವಣೆಗಳನ್ನು ಉಂಟುಮಾಡಬಹುದು. ಅದು ಅತಿಯಾದ ಕೂದಲು ಉದುರುವಿಕೆಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.

ದೇಹದಲ್ಲಿರುವ ಎಪಿಜೆನೊಮ್ ಎಂಬುದು ರಾಸಾಯನಿಕ ಸಂಯುಕ್ತಗಳು ಮತ್ತು ಪ್ರೋಟೀನ್‌ ಗಳ ವ್ಯವಸ್ಥೆಯಾಗಿದೆ. ಅನಾರೋಗ್ಯಕರ ಎಪಿಜೆನೋಮ್ ಕಾರ್ಯಗಳು ಕೂದಲು ಉದುರುವಿಕೆಗೆ ಕಾರಣವಾಗುತ್ತವೆ. ಅನಾರೋಗ್ಯಕರ ಆಹಾರ ಕ್ರಮಗಳು, ಒತ್ತಡ ಮತ್ತು ಜೀವನಶೈಲಿಯ ಬದಲಾವಣೆಗಳು ಎಪಿಜೆನೊಮ್‌ನ  ಮೇಲೂ ಪ್ರಭಾವ ಬೀರುತ್ತದೆ ಎಂದು ತಜ್ಞರು ವಿವರಿಸುತ್ತಾರೆ..

ಇನ್ನೂ ಕೆಲವು ತಜ್ಞರು ಈ ಸಮಸ್ಯೆಗೆ ಇನ್ನೂ ಕೆಲ ಕಾರಣಗಳನ್ನು ನೀಡುತ್ತಾರೆ..  ಕೆಲಸದ ಒತ್ತಡ, ಕುಟುಂಬದಿಂದ ದೂರವಿರುವುದು, ಹೊಸ ಪರಿಸರಕ್ಕೆ ಹೋಗುವುದರಿಂದ ಕೂದಲು ಉದುರುವಿಕೆ ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ.. ಇದರ ಜೊತೆಗೆ ಅನಾರೋಗ್ಯಕರ ಆಹಾರ ಪದ್ಧತಿ ಕೂಡ ಕೂದಲು ಉದುರಲು ಕಾರಣ ಎಂತಾ ಹೇಳಿದ್ದಾರೆ.. ಹೀಗಾಗಿ ವಿಟಮಿನ್ ಕೊರತೆ ಇರುವವರು ಅದಕ್ಕೆ ಪೂರಕವಾದ ಆಹಾರಗಳನ್ನು ತೆಗೆದುಕೊಳ್ಳಬೇಕು.

ಇನ್ನು ಒತ್ತಡವನ್ನು ಕಡಿಮೆ ಮಾಡುವುದು ಹಾಗೂ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಕೂದಲಿನ ಸೀರಮ್ ಬಳಕೆ ಮಾಡಬೇಕು., ನೆತ್ತಿಯಲ್ಲಿ ರಕ್ತ ಪರಿಚಲನೆ ಸುಧಾರಿಸುವುದು ಮತ್ತು ಚರ್ಮರೋಗ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳುವುದು ಉತ್ತಮ ಅಂತಾ ವೈದ್ಯರು ಸಲಹೆ ನೀಡಿದ್ದಾರೆ.. ಅದು ಬಿಟ್ಟು ತಮಗಿಷ್ಟ ಬಂದಂತೆ ಕೂದಲು ಉಳಿಸಲು ತಲೆಯ ಮೇಲೆ ನಾನಾ ಪ್ರಯೋಗ ಮಾಡ್ತಾ ಹೋದ್ರೆ ಕೂದಲು ಉದುರುವಿಕೆ ತಡೆಯುವ ಬದಲು ತಲೆ ಬೋಳಾಗಬಹುದು.

Shwetha M