ಒತ್ತುವರಿ ಜಾಗ ತೆರವುಗೊಳಿಸುವಂತೆ ದೇವರಿಗೇ ನೋಟಿಸ್ – ರೈಲ್ವೆ ಇಲಾಖೆ ಎಡವಟ್ಟಿನಿಂದ ಆಗಿದ್ದೇನು..!?

ಒತ್ತುವರಿ ಜಾಗ ತೆರವುಗೊಳಿಸುವಂತೆ ದೇವರಿಗೇ ನೋಟಿಸ್ – ರೈಲ್ವೆ ಇಲಾಖೆ ಎಡವಟ್ಟಿನಿಂದ ಆಗಿದ್ದೇನು..!?

ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಾಗ ನೋಟಿಸ್ ಕೊಟ್ಟು ತೆರವು ಮಾಡೋದು ಸಾಮಾನ್ಯ. ಆದ್ರೆ ಮಧ್ಯಪ್ರದೇಶದಲ್ಲಿ ಅತಿಕ್ರಮಣ ಮಾಡಿದವರಿಗೆ ನೋಟಿಸ್ ನೀಡುವ ಬದಲು ದೇವರಿಗೇ ನೋಟಿಸ್ ಕೊಟ್ಟು ಎಡವಟ್ಟು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : ಬಾರದ ಆ್ಯಂಬುಲೆನ್ಸ್ – ತಳ್ಳೋ ಗಾಡಿಯಲ್ಲೇ ತಂದೆಯನ್ನು ಆಸ್ಪತ್ರೆಗೆ ಸಾಗಿಸಿದ 6 ವರ್ಷದ ಬಾಲಕ

ಹೌದು. ದೇವಸ್ಥಾನದ ಅರ್ಚಕನಿಗೆ ನೋಟಿಸ್ ನೀಡುವ ಬದಲು ಭಜರಂಗ ಬಲಿ ಹೆಸ್ರಿಗೆ ನೀಡಿ ರೈಲ್ವೆ ಇಲಾಖೆ ಎಡವಟ್ಟು ಮಾಡಿದೆ. ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಸಬಲ್ಗಢ್ ಪಟ್ಟಣದಲ್ಲಿ ಘಟನೆ ನಡೆದಿದೆ. ರೈಲ್ವೇಗೆ ಸೇರಿದ ಭೂಮಿಯನ್ನು ಅತಿಕ್ರಮಣ ಮಾಡಿಕೊಳ್ಳಲಾಗಿದೆ ಎಂದು ಭಾರತೀಯ ರೈಲ್ವೆ ಇಲಾಖೆಯು ಭಜರಂಗ್ ಬಲಿ ಹೆಸರಿನಲ್ಲಿ ನೋಟಿಸ್ ಜಾರಿಗೊಳಿಸಿತ್ತು. ಫೆಬ್ರವರಿ 8ರಂದು ನೋಟಿಸ್ ಜಾರಿ ಮಾಡಿ 7 ದಿನಗಳ ಒಳಗಾಗಿ ಅತಿಕ್ರಮಣ ಮಾಡಿರುವ ಭೂಮಿಯನ್ನ ತೆರವುಗೊಳಿಸುವಂತೆ ಡೆಡ್​ಲೈನ್ ನೀಡಿತ್ತು. ಹಾಗೇನಾದ್ರೂ ನಾವೇ ತೆರವುಗೊಳಿಸಿದ್ರೆ ನೀವು ವೆಚ್ಚ ಕೊಡಬೇಕು ಎಂದು ಎಚ್ಚರಿಕೆ ನೀಡಿತ್ತು.

ಭಜರಂಗ ಬಲಿಗೆ ನೀಡಿದ್ದ ನೋಟಿಸ್ ಎಲ್ಲೆಡೆ ವೈರಲ್ ಆಗಿತ್ತು. ಬಳಿಕ ಮಧ್ಯಪ್ರದೇಶದ ಹಲವೆಡೆ ಹನುಮ ಭಕ್ತರು ಪ್ರತಿಭಟನೆ ನಡೆಸಿದ್ದರು. ಕೊನೆಗೂ ತನ್ನ ಎಡವಟ್ಟಿನ ಬಗ್ಗೆ ಅರಿತುಕೊಂಡ ರೈಲ್ವೆ ಇಲಾಖೆ ನೋಟಿಸ್ ವಾಪಸ್ ಪಡೆದಿದೆ. ದೇಗುಲದ ಅರ್ಚಕರಿಗೆ ನೀಡಬೇಕಾದ ನೋಟಿಸ್ ಅನ್ನು ಭಜರಂಗ ಬಲಿ ಹೆಸ್ರಿಗೆ ಕೊಟ್ಟಿರೋದಾಗಿ ಸ್ಪಷ್ಟನೆ ನೀಡಿದ್ದಾರೆ.

 

suddiyaana