ರಾಮ ಮಂದಿರದ ಹೆಸರಲ್ಲಿ ಹಣ ಲೂಟಿ.. – QR ಕೋಡ್ ಹಗರಣ ಬಯಲಿಗೆ!

ರಾಮ ಮಂದಿರದ ಹೆಸರಲ್ಲಿ ಹಣ ಲೂಟಿ.. – QR ಕೋಡ್ ಹಗರಣ ಬಯಲಿಗೆ!

ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಗೆ ಕೆಲವೇ ಕೆಲವು ದಿನಗಳ ಮಾತ್ರ ಬಾಕಿ ಉಳಿದಿದೆ. ಎಲ್ಲೆಲ್ಲೂ ಶ್ರೀರಾಮನ ಜಪ ಶುರುವಾಗಿದೆ. ಜನವರಿ 22 ರಂದು ರಾಮ ಮಂದಿರ ಲೋಕಾರ್ಪಣೆಗೊಳ್ಳಲಿದ್ದು, ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ದೇಶ ವಿದೇಶಗಳಿಂದ ರಾಮಮಂದಿರಕ್ಕೆ ಕಾಣಿಕೆಗಳು ಬರುತ್ತಿವೆ. ಇದೀಗ ಆತಂಕದ ವಿಚಾರವೊಂದು ಬಯಲಾಗಿದೆ. ರಾಮ ಮಂದಿರ ಹೆಸರಲ್ಲಿ ಕೆಲವರು ಲೂಟಿ ಮಾಡಲು ಇಳಿದಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಪೆನ್‌ ಹಿಡಿದು ಶಾಲೆಗೆ ಬರುವ ಬದಲು ಗನ್‌ ಹಿಡಿದುಕೊಂಡು ಬಂದ ವಿದ್ಯಾರ್ಥಿ! – ಸಣ್ಣ ವಯಸ್ಸಿಗೆ ಇಷ್ಟೊಂದು ದ್ವೇಷನಾ?

ಹೌದು, ರಾಮಮಂದಿರದ ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಉಳಿದಿದೆ. ರಾಮನ ಭಕ್ತರು ದೇಶ ವಿದೇಶದಿಂದ ಕಾಣಿಕೆಗಳನ್ನು ಕಳುಹಿಸಿಕೊಡುತ್ತಿದ್ದಾರೆ. ಇದೀಗ ರಾಮ ಮಂದಿರ ನಿರ್ಮಾಣಕ್ಕೆ ಎಂದು ಭಕ್ತರಲ್ಲಿ ಹಣ ಎತ್ತಿ ವಂಚನೆ ಮಾಡ್ತಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು ವಿಶ್ವ ಹಿಂದೂ ಪರಿಷತ್ ನೀಡಿದೆ. ಜೊತೆಗೆ ಭಕ್ತರು ಮೋಸ ಹೋಗದಂತೆ ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡಿಕೊಂಡಿದೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ವಿಶ್ವ ಹಿಂದೂ ಪರಿಷತ್​ನ ವಕ್ತಾರ ವಿನೋದ್ ಬನ್ಸಾಲ್, ಸೋಶಿಯಲ್ ಮೀಡಿಯಾ ಮೂಲಕ ರಾಮ ಮಂದಿರ ನಿರ್ಮಾಣ ಹೆಸರಲ್ಲಿ ಹಣ ಮಾಡುವ ದಂಧೆ ಬೆಳಕಿಗೆ ಬಂದಿದೆ. ‘ಶ್ರೀ ರಾಮ ಜನ್ಮಭೂಮಿ ತೀರ್ಥ ಛೆತ್ರ ಅಯೋಧ್ಯ, ಉತ್ತರ ಪ್ರದೇಶ’ ಅಂತಾ ಫೇಸ್​ಬುಕ್​ನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದ್ದಾರೆ. ಅಲ್ಲಿ ಕ್ಯೂಆರ್ (QR)​ ಕೋಡ್ ಮೂಲಕ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಕೇಳಲಾಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಉತ್ತರ ಪ್ರದೇಶ ಗೃಹ ಸಚಿವಾಲಯ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Shwetha M