ಗಿಲ್ ಗೆ ಹೊಸ ಗರ್ಲ್ ಫ್ರೆಂಡ್?  – ಸಾರಾ ಬಿಟ್ಟು ಯಾರಿವಳು?

ಗಿಲ್ ಗೆ ಹೊಸ ಗರ್ಲ್ ಫ್ರೆಂಡ್?  – ಸಾರಾ ಬಿಟ್ಟು ಯಾರಿವಳು?

ಟೀಮ್ ಇಂಡಿಯಾ ಸ್ಟಾರ್ ಬ್ಯಾಟ್ಸ್ಮನ್ ಶುಭಮನ್ ಗಿಲ್ ಸಿಕ್ಕಾಪಟ್ಟೆ ಹ್ಯಾಂಡ್ಸಮ್.. ಗಿಲ್ ಗೆ ಲೇಡಿ ಫ್ಯಾನ್ಸ್ ಸಿಕ್ಕಾಪಟ್ಟೆ ಇದ್ದಾರೆ.. ಒಂದರ್ಥದಲ್ಲಿ  ಯುವತಿಯರ ಕ್ರಶ್ ಅಂತಾನೇ ಹೇಳ್ಬೋದು.. ಗಿಲ್ , ಸಾರಾ ತೆಂಡೂಲ್ಕರ್ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ವದಂತಿ ಇತ್ತು.. ಅದ್ರ ಜೊತೆ ಜೊತೆಗೆ ಸಾರಾ ಖಾನ್ ಜೊತೆಗೂ ಸುತ್ತಾಡುತ್ತಿದ್ದಾರೆ ಅಂತಾ ಹೇಳಲಾಗುತ್ತಿತ್ತು.. ಇದೀಗ ಗಿಲ್ ಜೊತೆ ಮತ್ತೊಂದು ಹೆಸರು ತಳುಕು ಹಾಕಿಕೊಂಡಿದೆ.. ಗಿಲ್ ನಟಿಯೊಬ್ಬರ ಜೊತೆ ಡೇಟಿಂಗ್ ಮಾಡ್ತಾ ಇದ್ದಾರಂತೆ..

ಇದನ್ನೂ ಓದಿ:  ಈ ಬಾರಿಯೂ ಉತ್ತರ ಪ್ರದೇಶದ ಅಮೇಥಿಯಿಂದ ಚುನಾವಣೆಗೆ ಸ್ಪರ್ಧಿಸುತ್ತಾರಾ ರಾಹುಲ್‌?

ಗಿಲ್ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇರ್ತಾರೆ. ಕ್ರಿಕೆಟ್ ನಲ್ಲಿ ಅವರು ಮಾಡ್ತಿರುವ ಸಾಧನೆ ಪ್ರತಿನಿತ್ಯ ಚರ್ಚೆ ಆಗ್ತಾನೇ ಇರುತ್ತೆ. ಜೊತೆಗೆ, ಅವರ ವೈಯುಕ್ತಿಕ ಬದುಕಿನ ವಿಚಾರಗಳು ಕೂಡ ಸದಾ ಚರ್ಚೆಯಲ್ಲಿ ಇರುತ್ತವೆ.. ಗಿಲ್ ಹೆಸರು  ಸಾರಾ ತೆಂಡೂಲ್ಕರ್ ಜೊತೆಗೆ ಓಡಾಡಿದ್ದು ಗೊತ್ತೇ ಇದೆ.‌  ಕ್ರಿಕೆಟ್ ದೇವರ ಮಗಳು ಮಾತ್ರವಲ್ಲದೆ ಸಾರಾ ಖಾನ್ ಜೊತೆ ಸಹ ಅವರ ಹೆಸರು ತಳುಕು ಹಾಕಿಕೊಂಡಿತ್ತು. ಈ ಎಲ್ಲ ವದಂತಿಗಳ ನಡುವೆಯೇ ಈಗ ಅವರ ಕುರಿತಾಗಿ ಮತ್ತೊಂದು ಹೊಸ ವದಂತಿ ಕೇಳಿಬಂದಿದೆ. ಅದೇನಪ್ಪಾ ಅಂದರೆ ಗಿಲ್ ಈಗ ಹಾಲಿವುಡ್ ನಟಿಯನ್ನು ಪ್ರೀತಿಸುತ್ತಿದ್ದಾರಂತೆ..  ಇವರಿಬ್ಬರು ಡೇಟಿಂಗ್ ಕೂಡ ಮಾಡುತ್ತಿದ್ದಾರೆ ಅನ್ನೋ ಗುಸು ಗುಸು ಶುರುವಾಗಿದೆ… ಮೇಲಾಗಿ ಆ ನಟಿ ಗಿಲ್ ಗೊಸ್ಕರ ಭಾರತಕ್ಕೆ ಬಂದಿದ್ದು.. ಇತ್ತೀಚಿಗಷ್ಟೇ ಅವಳು ಗಿಲ್ ಆಡೋದನ್ನು ನೋಡಲು ಬಂದಿದ್ದಳು.

ಅಷ್ಟಕ್ಕೂ ಆಕೆ ಯಾರು ಗೊತ್ತಾ? ಬೇರೆ ಯಾರೂ ಅಲ್ಲಾ…ಕ್ಯೂಬಾದ ನಾಯಕಿ ನಟಿ ಡಿ ಅರ್ಮಾಸ್.. ಇವರು ಏಪ್ರಿಲ್ 17 ರಂದು ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದವು. ಇದನ್ನು ನೋಡಿದ ಅಭಿಮಾನಿಗಳು ಗಿಲ್ ಅವರ ಹೊಸ ಗರ್ಲ್ ಫ್ರೆಂಡ್ ಅಂತಾ ಹೇಳಿದ್ದಾರೆ..  36 ವರ್ಷದ ಅನಾ ಡಿ ಅರ್ಮಾಸ್ ಕ್ಯೂಬಾದ ಸ್ಟಾರ್ ನಟಿಯಾಗಿದ್ದಾರೆ.. ಅವರ ಪೂರ್ಣ ಹೆಸರು ಅನಾ ಸೆಲ್ಜಾ ಡಿ ಅರ್ಮಾಸ್ ಅಂತಾ.. 18 ನೇ ವಯಸ್ಸಿನಲ್ಲಿ, ಅವರು ‘ಉನಾ ರೋಸಾ ಡಿ ಫ್ರಾನ್ಸಿಯಾ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ್ದರು.  ಇದೀಗ ಗಿಲ್ ಜೊತೆ ಡಿ ಅರ್ಮಾಸ್ ಹೆಸರು ಕೂಡ ಸೇರಿಕೊಂಡಿದ್ದು, ಗಿಲ್ ಯಾರ ಜೊತೆ ನಿಜವಾಗಿಯೂ ಡೇಟಿಂಗ್ ಮಾಡ್ತಿದ್ದಾರೆ ಅಂತಾ ಅಭಿಮಾನಿ ಹೆಣ್ಮಕ್ಕಳು ತಲೆಕೆಡಿಸಿಕೊಳ್ಳುವಂತಾಗಿದೆ. ಆದ್ರೆ ಗಿಲ್ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ತಾನು ಆಯ್ತು.. ತನ್ನ ಆಟ ಆಯ್ತು ಅಂತಾ ಸೈಲೆಂಟ್ ಆಗಿ ತಂಡವನ್ನು ಪ್ಲೇ‌ಆಫ್ ಕಡೆಗೆ ಕೊಂಡೊಯ್ಯೋದ್ರಲ್ಲಿ ಬ್ಯುಸಿಯಾಗಿದ್ದಾರೆ..

Shwetha M

Leave a Reply

Your email address will not be published. Required fields are marked *