ಒಂದೇ ಫೋಟೋದಲ್ಲಿ 45 ಸಾವಿರ ನಕ್ಷತ್ರಪುಂಜ! – ಹೇಗಿದೆ ಗೊತ್ತಾ ಚಿತ್ತಾಕರ್ಷಕ ದೃಶ್ಯ?

ಒಂದೇ ಫೋಟೋದಲ್ಲಿ 45 ಸಾವಿರ ನಕ್ಷತ್ರಪುಂಜ! – ಹೇಗಿದೆ ಗೊತ್ತಾ ಚಿತ್ತಾಕರ್ಷಕ ದೃಶ್ಯ?

ನವದೆಹಲಿ: ವಿಜ್ಞಾನಿಗಳು ಬಾಹ್ಯಕಾಶದ ಕುರಿತು ಸದಾ ಅಧ್ಯಯನ ನಡೆಸುತ್ತಲೇ ಇರುತ್ತಾರೆ. ಬಾಹ್ಯಕಾಶದಲ್ಲಿ ನಡೆದ ಕುತೂಹಲಕಾರಿ ಸಂಗತಿಗಳನ್ನು ಜಗತ್ತಿಗೆ ಆಗಾಗ ತಿಳಿಸುತ್ತಿರುತ್ತಾರೆ. ಇದೀಗ ನಾಸಾ ತನ್ನ ಜೇಮ್ಸ್‌ ವೆಬ್‌ ಟೆಲಿಸ್ಕೋಪ್‌ ಅಪೂರ್ವ ಚಿತ್ರವೊಂದನ್ನು ಸೆರೆಹಿಡಿದಿದೆ.

ಇದನ್ನೂ ಓದಿ: ಮಾನವಸಹಿತ ಗಗನಯಾನಕ್ಕೆ ಇಸ್ರೋ ಸಿದ್ಧತೆ – ಬಾಹ್ಯಾಕಾಶ ಯಾತ್ರೆಗೆ ಆಹಾರ ರೀತಿ ಹೇಗಿದೆ?

ನಾಸಾದ ಜೇಮ್ಸ್‌ ವೆಬ್‌ ತಾರಾಪುಂಜಗಳ ಚಿತ್ರವನ್ನು ಸೆರೆಹಿಡಿದೆ. ಒಂದು ತಾರಾಪುಂಜದಲ್ಲಿ ಎಣಿಸಿ ಮುಗಿಸಲಾರದಷ್ಟು ನಕ್ಷತ್ರಗಳಿರುತ್ತವೆ. ಇದೀಗ ಜೇಮ್ಸ್‌ ವೆಬ್‌ ಬರೋಬ್ಬರಿ 45,000 ತಾರಾಪುಂಜಗಳ ಒಂದು ಸಮೂಹವನ್ನು ಒಂದೇ ಚಿತ್ರದಲ್ಲಿ ಸೆರೆಹಿಡಿದಿದೆ.

ಈ ರೀತಿಯ ದೃಶ್ಯವನ್ನು ಈ ಹಿಂದೆ ಹಬಲ್‌ ಎಂಬ ಟೆಲಿಸ್ಕೋಪ್‌ ಕೂಡ ಸೆರೆಹಿಡಿದಿತ್ತು. ಆದರೆ ಆ ಚಿತ್ರ ಈ ಮಟ್ಟದ ಅಪೂರ್ವತೆಯನ್ನು ಪಡೆದುಕೊಂಡಿರಲಿಲ್ಲ. ಆಕಾಶದಲ್ಲಿನ ಗೂಡ್ಸ್‌ -ಸೌಥ್‌ ಎಂಬ ಭಾಗದಲ್ಲಿ ಬರುವ ಭಾಗವನ್ನೇ ಜೇಮ್ಸ್‌ ವೆಬ್‌ ಸೆರೆ ಹಿಡಿದಿದೆ. ಈ ಚಿತ್ರದ ವಿಶೇಷವನ್ನು ಪತ್ತೆಹಚ್ಚಲು 32 ಟೆಲಿಸ್ಕೋಪ್‌ ದಿನಗಳನ್ನು ವಿಜ್ಞಾನಿಗಳು ಬಳಸಿಕೊಳ್ಳಲಿದ್ದಾರೆ. ಸದ್ಯ ವಿಜ್ಞಾನಿಗಳು ಮೊದಲ ನಕ್ಷತ್ರಗಳು, ನಕ್ಷತ್ರಪುಂಜಗಳು ರಚನೆಯಾಗಿದ್ದು ಹೇಗೆ ಎಂಬುವುದನ್ನು ಅಧ್ಯಯನ ನಡೆಸಲಿದ್ದಾರೆ.

suddiyaana