62 ದಿನಗಳ ಅಮರನಾಥ ಯಾತ್ರೆ ಇಂದು ಮುಕ್ತಾಯ – ಗುಹೆಯಲ್ಲಿ ವಿಶೇಷ ಪೂಜೆ ಸಂಪನ್ನ

62 ದಿನಗಳ ಅಮರನಾಥ ಯಾತ್ರೆ ಇಂದು ಮುಕ್ತಾಯ – ಗುಹೆಯಲ್ಲಿ ವಿಶೇಷ ಪೂಜೆ ಸಂಪನ್ನ

ಶ್ರೀನಗರ: ಹಿಂದೂಗಳ ಪವಿತ್ರ ಅಮರನಾಥ ಯಾತ್ರೆ ಇಂದು ( ಗುರುವಾರ) ಮುಕ್ತಾಯಗೊಳ್ಳಲಿದ್ದು, ಅಮರನಾಥ ಗುಹೆಯಲ್ಲಿ ಅರಸಿ ಪೂಜೆ ನೆರವೇರಿಸಲಾಗಿದೆ.

ಕಳೆದ ಜುಲೈ 1 ರಿಂದ ಆರಂಭವಾದ ಈ ಯಾತ್ರೆ 62 ದಿನಗಳ ಕಾಲ ನಡೆದಿತ್ತು. ಇಲ್ಲಿವರೆಗೆ 4 ಲಕ್ಷಕ್ಕೂ ಅಧಿಕ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಶಿವನ ದರ್ಶನ ಪಡೆದಿದ್ದಾರೆ. ಇಂದು ಕೊನೆ ದಿನವಾಗಿದ್ದರಿಂದ ಅಮರನಾಥ ಗುಹೆಯಲ್ಲಿ ಅರಸಿ ಪೂಜೆ ನೆರವೇರಿಸಲಾಗಿದೆ.

ಇದನ್ನೂ ಓದಿ: ಶುಭ್ರ ಆಗಸದಲ್ಲಿ ಉರಿಯುವ ರಿಂಗ್ ನಂತೆ ಕಾಣಿಸಿಕೊಳ್ಳಲಿದ್ದಾನೆ ರವಿಮಾಮ! – ಅ. 14ರಂದು ಸಂಭವಿಸಲಿದೆ ಸೂರ್ಯಗ್ರಹಣ

ಇನ್ನು ಅಮರನಾಥ ಯಾತ್ರೆಯನ್ನು ಉಗ್ರರು ಟಾರ್ಗೆಟ್‌ ಮಾಡುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಈ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯಂತೆ ಕಚ್ಚೆಚ್ಚರ ವಹಿಸಲಾಗಿತ್ತು. ಹೆಚ್ಚಿನ ಭದ್ರತಾ ಪಡೆಗಳನ್ನು ನೇಮಿಸಲಾಗಿತ್ತು. ಯಾತ್ರೆ ನಡೆಯುತ್ತಿರುವ ದಿನಗಳಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯೂ ವರದಿಯಾಗಲಿಲ್ಲ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಮಳೆ, ಭೂಕುಸಿತ ಹಾಗೂ ವಾತಾವರಣದ ಕಾರಣದಿಂದಾಗಿ ಯಾತ್ರೆಯನ್ನು ಕೆಲವು ದಿನಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಉಳಿದಂತೆ ಈ ಬಾರಿಯ ಯಾತ್ರೆ ಸುಗಮವಾಗಿ ನಡೆಯಿತು. ಈ ಬಾರಿಯ ಯಾತ್ರೆಯಲ್ಲಿ ಭೂಕುಸಿತ, ಅನಾರೋಗ್ಯದ ಸಮಸ್ಯೆಯಿಂದಾಗಿ ಸುಮಾರು 46 ಮಂದಿ ಯಾತ್ರಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

suddiyaana