ಗಜೇಂದ್ರನ ಏಕಾಂತವಾಸ ಅಂತ್ಯ – ಆನೆ ಶಿಬಿರಕ್ಕೆ ಬಂದ ಏಕಾಂಗಿ ಗಜೇಂದ್ರ

ಗಜೇಂದ್ರನ ಏಕಾಂತವಾಸ ಅಂತ್ಯ – ಆನೆ ಶಿಬಿರಕ್ಕೆ ಬಂದ ಏಕಾಂಗಿ ಗಜೇಂದ್ರ

ಹಲವು ವರ್ಷಗಳಿಂದ ಏಕಾಂಗಿ. ದಸರಾ ಆನೆಯಾದರು ಒಂದೊಮ್ಮೆ ಟೈಮ್ ಕೆಟ್ಟಿತ್ತು. ಮದವೇರಿದ ಪರಿಣಾಮ ಇಬ್ಬರ ಸಾವಿಗೂ ಕಾರಣವಾಗಿದ್ದ ಗಜೇಂದ್ರ. ನರಹಂತಕ ಆನೆ ಎಂಬ ಕುಖ್ಯಾತಿಯೂ ಹಣೆಗಂಟಿಕೊಂಡಿತ್ತು. ಕೊನೆಗೂ ಗಜೇಂದ್ರನ ಹಣೆಬರಹ ಬದಲಾಗಿದೆ. ಈಗ ಗಜೇಂದ್ರ ಒಂಟಿಯಲ್ಲ.

ಇದನ್ನೂ ಓದಿ:ಚಲಿಸುತ್ತಿದ್ದ ಬಸ್‌ನ ಡೋರ್‌ ಏಕಾಏಕಿ ಓಪನ್!‌ – ರಸ್ತೆಗೆ ಬಿದ್ದ ಅಕ್ಕ-ತಂಗಿ!

ಆನೆ ಗಜೇಂದ್ರನ ಕೆಟ್ಟ ಸಮಯ ಮುಗಿದಿದೆ. ಇದೀಗ ಕಿಲ್ಲರ್ ಗಜೇಂದ್ರ ಗುಡ್ ಬಾಯ್ ಗಜೇಂದ್ರ ಆಗಿದ್ದಾನೆ. ಹಲವು ವರ್ಷಗಳಿಂದ ಒಂಟಿಯಾಗಿ ಕಾಲ ಕಳೆಯುತ್ತಿದ್ದ ಆತನನ್ನು ಕೊಡಗು ಜಿಲ್ಲೆಯ ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರಕ್ಕೆ ಸ್ಥಳಾಂತರ ಮಾಡಲಾಗಿದೆ. ಒಂದು ಸಮಯದಲ್ಲಿ ಗಜೇಂದ್ರ ದಸರಾ ಆನೆಯಾಗಿ ಗಮನ ಸೆಳೆದಿದ್ದ. ಐತಿಹಾಸಿಕ ಮೈಸೂರು ದಸರಾ ಉತ್ಸವದಲ್ಲಿ 15ಕ್ಕೂ ಹೆಚ್ಚು ಭಾರಿ ಗಜೇಂದ್ರ ಭಾಗವಹಿಸಿದ್ದ. ಆಕರ್ಷಕ ಮೈಕಟ್ಟು, ಗಾಂಭೀರ್ಯದ ನಡಿಗೆ, ನೀಳ ದಂತ ಹೊಂದಿರುವ ಗಜೇಂದ್ರ ಎಲ್ಲರ ಕಣ್ಮಣಿಯಾಗಿದ್ದ.

ಚಾಮರಾಜನಗರ ಜಿಲ್ಲೆಯ ಕೆ.ಗುಡಿಯ ಕೇಂದ್ರ ಬಿಂದುವಾಗಿದ್ದ ಗಜೇಂದ್ರನಿಗೆ 2015, ಮಾರ್ಚ್‌ 18ರಲ್ಲಿ ಮದವೇರಿತ್ತು. ಇದರ ಪರಿಣಾಮ ಶ್ರೀರಾಮ ಎಂಬ ಆನೆ ಹಾಗೂ ಗಣಪತಿ ಎಂಬ ಮಾವುತನನ್ನು ಕೊಂದು ಹಾಕಿತ್ತು. ಈ ಘಟನೆಯ ಬಳಿಕ ಗಜೇಂದ್ರನಿಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಅವಕಾಶ ನೀಡಲಿಲ್ಲ. ಅಂದಿನಿಂದ ಹಲವು ವರ್ಷಗಳ ಕಾಲ ಕೆ. ಗುಡಿ ಆನೆ ಶಿಬಿರದಲ್ಲಿ ಗಜೇಂದ್ರ ಏಕಾಂಗಿಯಾಗಿದ್ದ. ಬಳಿಕ 2024ರ ನವೆಂಬರ್‌ನಲ್ಲಿ ಕೆ.ಗುಡಿಯಿಂದ ಬೂದಿಪಡಗದ ಆನೆ ಶಿಬಿರಕ್ಕೆ ಶಿಫ್ಟ್ ಮಾಡಲಾಗಿತ್ತು.  ಅಲ್ಲಿಯೂ ಒಂಟಿಯಾಗಿದ್ದ ಗಜೇಂದ್ರ.

ಇನ್ನು ಗಜೇಂದ್ರನ ಗತವೈಭವದ ದಿನ ಕಂಡಿದ್ದ ಅಭಿಮಾನಿಗಳಿಗೆ ಗಜೇಂದ್ರನ ಏಕಾಂಗಿತನ ಬೇಸರ ತಂದಿತ್ತು. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಸೇವ್ ಗಜೇಂದ್ರ ಎಂಬ ಅಭಿಯಾನ ಆರಂಭಿಸಿದ್ದರು. ಈ ಅಭಿಯಾನ ಅರಣ್ಯ ಸಚಿವರ ತನಕವೂ ತಲುಪಿತ್ತು. ಕೊನೆಗೂ ಅರಣ್ಯ ಸಚಿವ ಈಶ್ವ ಖಂಡ್ರೆ ಗಜೇಂದ್ರನನ್ನು ಸುರಕ್ಷಿತವಾದ ಶಿಬಿರಕ್ಕೆ ಸ್ಥಳಾಂತರಿಸಬೇಕು ಎಂದು ಸೂಚಿಸಿದ್ದರು. ಪ್ರಾಣಿ ಪ್ರಿಯರ, ಅಭಿಮಾನಿಗಳ ಒತ್ತಾಸೆಗೆ ಮಣಿದ ಸಚಿವ ಈಶ್ವರ ಖಂಡ್ರೆ  ಅವರು ಗಜೇಂದ್ರನನ್ನು ಸ್ಥಳಾಂತರಿಸುವಂತೆ ಮಾರ್ಚ್‌ 26ರಂದು ಅಧಿಕಾರಿಗಳಿಗೆ ಸೂಚಿಸಿದ್ದರು. ಅರಣ್ಯ ಸಚಿವರ ಸೂಚನೆ ಬಳಿಕ ಗಜೇಂದ್ರ ಆನೆಯನ್ನ ಸ್ಥಳಾಂತರ ಮಾಡಲಾಗಿದೆ. ಇದೀಗ 63 ವರ್ಷದ ಗಜೇಂದ್ರ ಕೊಡಗು ಜಿಲ್ಲೆಯ ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರಕ್ಕೆ ಆಗಮಿಸಿದ್ದಾನೆ.

Sulekha