‘ತಮಿಳುನಾಡಿನ ಮಲ್ಲಿಗೆ’ ಲಂಡನ್ ಸುಂದರಿಯ ಮುಡಿಗೆ – ಹೂವಿನ ಘಮಕ್ಕೆ ಮನಸೋತ ವಿದೇಶಿ ಬೆಡಗಿ

‘ತಮಿಳುನಾಡಿನ ಮಲ್ಲಿಗೆ’ ಲಂಡನ್ ಸುಂದರಿಯ ಮುಡಿಗೆ – ಹೂವಿನ ಘಮಕ್ಕೆ ಮನಸೋತ ವಿದೇಶಿ ಬೆಡಗಿ

ವಿದೇಶಿಗರು ಬಂದು ಭಾರತದ ಸಂಸ್ಕೃತಿ, ಸಂಪ್ರದಾಯವನ್ನು ಮೆಚ್ಚಿಕೊಳ್ಳುವುದನ್ನು ನೋಡಿದ್ದೇವೆ. ಕೇಳಿದ್ದೇವೆ. ಭಾರತದ ಪರಿಸರವನ್ನು ಅದೆಷ್ಟೋ ವಿದೇಶಿಗರು ಕೊಂಡಾಡಿದ್ದಾರೆ. ಇದೀಗ ತಮಿಳುನಾಡಿನಲ್ಲಿ ಲಂಡನ್ ಪತ್ರಕರ್ತೆಯೊಬ್ಬರು ಪ್ರವಾಸದಲ್ಲಿದ್ದಾರೆ. ತಮಿಳುನಾಡಿನಲ್ಲಿ ಪ್ರವಾಸ ಮಾಡುತ್ತಿರುವ ಲಂಡನ್ ಬೆಡಗಿ ತಮಿಳುನಾಡಿನ ಮಲ್ಲಿಗೆಗೆ ಮನಸೋತಿದ್ದಾರೆ.

ತಮಿಳುನಾಡಿನ ಹೂ ಹಣ್ಣಿನ ಮಾರುಕಟ್ಟಗೆ ಭೇಟಿ ನೀಡಿದ ಅಲೆಕ್ಸ್ ಹೂವನ್ನು ನೋಡಿ ಸಂತಸಪಟ್ಟಿದ್ದಾರೆ. ವಿದೇಶಿ ಅತಿಥಿ ನಮ್ಮೂರಿನ ಹೂ ನೋಡಿ ಸಂಭ್ರಮಿಸಿದ್ದು ನೋಡಿ ಹೂ ಮಾರುವಾಕೆ ಆಕೆಯ ಮುಡಿಗೆ ಹೂ ಮುಡಿಸಿದ್ದಾರೆ.

ಇದನ್ನೂ ಓದಿ: 

ತಮಿಳುನಾಡಿನ ಮಲ್ಲಿಗೆ ಘಮ ಮಾತ್ರ ಖುಷಿಯಾಗಿಲ್ಲ. ಹೂ ಮುಡಿಸಿದಾಕೆಯ ಮುಗ್ಧ ಪ್ರೀತಿ ಕೂಡಾ ಲಂಡನ್ ಸುಂದರಿಯ ಮನಮುಟ್ಟಿದೆ. ತಾನು ಹೂ ಮುಡಿದುಕೊಳ್ಳುವ ವಿಡೀಯೋ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ‘ತಮಿಳುನಾಡು ಬಹಳ ಸಮೃದ್ಧವಾದ ರಾಜ್ಯ. ಕರಾವಳಿ ತೀರ, ಗಿರಿಧಾಮಗಳು, ಚಹಾ ತೋಟಗಳಲ್ಲಿ ವಿಹರಿಸುವುದು ವಿಶೇಷ ಅನುಭವ ಕೊಡುತ್ತದೆ. ಸಾವಿರಾರು ವರ್ಷಗಳಷ್ಟು ಹಳೆಯದಾದ ದೇವಾಲಯಗಳು ಕಲಾತ್ಮಕತೆಯಿಂದ ಕೂಡಿವೆ. ಸಾಮಾನ್ಯವಾಗಿ ನನ್ನ ಪ್ರಯಾಣಗಳು ಎಲ್ಲಾ ಸಮಯದಲ್ಲಿಯೂ ಯೋಜಿತವಾಗಿರುತ್ತವೆ ಎಂದು ಹೇಳಲಾಗದು. ಇಂಥ ಸಂದರ್ಭದಲ್ಲಿ ಕೆಲ ಅನಿರೀಕ್ಷಿತ ವ್ಯಕ್ತಿಗಳ ಒಡನಾಟ ಖುಷಿಗೆ ಇಂಬು ಕೊಡುತ್ತವೆ’ ಎಂದು ಎಲೆಕ್ಸ್ ಬರೆದುಕೊಂಡಿದ್ದಾರೆ. ವಿಡಿಯೋ ನೋಡಿದವರು, ನಾವು ಭಾರತೀಯರು ಸ್ನೇಹಜೀವಿಗಳು ಎಂದಿದ್ದಾರೆ. ಇನ್ನು ಕೆಲವರು ನಮ್ಮ ದೇಶ ಯಾವತ್ತೂ ಅತಿಥಿಗಳನ್ನು ಗೌರವಿಸುತ್ತದೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ತಮಿಳುನಾಡಿನ ಪ್ರವಾಸದಲ್ಲಿರುವ ಅಲೆಕ್ಸ್, ಪಾಕವೈಶಿಷ್ಟ್ಯ, ಸಾಂಪ್ರದಾಯಿಕ ಹಬ್ಬಗಳ ಆಚರಣೆಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ.

suddiyaana