ಮೈತ್ರಿಗೆ ಕೈ ಕೊಟ್ರಾ ಸುಮಲತಾ? – ಮಂಡ್ಯದಲ್ಲೇ ಸ್ಪರ್ಧಿಸೋದಾಗಿ ಸವಾಲ್

ಮೈತ್ರಿಗೆ ಕೈ ಕೊಟ್ರಾ ಸುಮಲತಾ? – ಮಂಡ್ಯದಲ್ಲೇ ಸ್ಪರ್ಧಿಸೋದಾಗಿ ಸವಾಲ್

ಬಿಜೆಪಿ ಜೆಡಿಎಸ್ ದೋಸ್ತಿಯಲ್ಲಿ ಜೆಡಿಎಸ್​ಗೆ ಮೂರು ಕ್ಷೇತ್ರಗಳು ಫೈನಲ್ ಆಗಿವೆ. ಹಾಸನ, ಮಂಡ್ಯ ಮತ್ತು ಕೋಲಾರ. ಹಾಸನ ಕ್ಷೇತ್ರಕ್ಕೆ ಹಾಲಿ ಸಂಸದ ಪ್ರಜ್ವಲ್ ರೇವಣ್ಣಗೆ ಮತ್ತೆ ಜೆಡಿಎಸ್ ಟಿಕೆಟ್ ಘೋಷಣೆ ಮಾಡಿದೆ. ಆದ್ರೆ ಕೋಲಾರ ಮತ್ತು ಮಂಡ್ಯ ಕ್ಷೇತ್ರಗಳ ಕ್ಯಾಂಡಿಡೇಟ್ಸ್ ಯಾರು ಅನ್ನೋದು ಇನ್ನೂ ಕೂಡ ಸಸ್ಪೆನ್ಸ್ ಆಗೇ ಇದೆ. ಮಂಡ್ಯದಿಂದ ಖುದ್ದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯೇ ಸ್ಪರ್ಧೆ ಮಾಡ್ತಾರೆ ಅನ್ನೋ ಬಿಸಿ ಬಿಸಿ ಚರ್ಚೆಯಾಗ್ತಿದೆ. ಈ ಬಗ್ಗೆ ಯಾರೂ ಕೂಡ ಕ್ಲಾರಿಟಿ ಕೊಟ್ಟಿಲ್ಲ. ಮತ್ತೊಂದೆಡೆ ಹೆಚ್​ಡಿಕೆಗೆ ಗುರುವಾರ ಬೆಳಗ್ಗೆ ಯಶಸ್ವಿಯಾಗಿ ಹಾರ್ಟ್ ಆಪರೇಷನ್ ನಡೆದಿದೆ. ಮಾರ್ಚ್ 25 ರಂದು ಹಾಸನದಲ್ಲಿ ಜಂಟಿ ಸಭೆಯಲ್ಲಿ ಭಾಗಿಯಾಗಲಿರುವ ಹೆಚ್​ಡಿಕೆ ಅಂದೇ ಅಭ್ಯರ್ಥಿಗಳ ಹೆಸರನ್ನ ಘೋಷಣೆ ಮಾಡಲಿದ್ದಾರೆ. ಆದ್ರಿಲ್ಲಿ ದೋಸ್ತಿಗೆ ಬಿಗ್ ಶಾಕ್ ಕೊಡೋಕೆ ಸುಮಲತಾ ಅಂಬರೀಶ್ ಸಜ್ಜಾಗಿದ್ದಾರೆ. ಅಷ್ಟಕ್ಕೂ ಬಿಜೆಪಿ ಟಿಕೆಟ್ ಸಿಗದೆ ಅತಂತ್ರರಾಗಿರೋ ಸುಮಲತಾ ಅಂಬರೀಶ್ ನಡೆ ಏನು ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಅಂದು ಜಡ್ಡು.. ಇಂದು ರಿತು.. CSK ಕ್ಯಾಪ್ಟನ್ಸಿ ಬದಲಿಸಿದ್ದೇಕೆ? – ನಿವೃತ್ತಿಗೆ ಸಿದ್ಧರಾದ್ರಾ ಧೋನಿ?

ಕಳೆದ ಬಾರಿಯಂತೆಯೇ ಈ ಸಲವೂ ಕೂಡ ಮಂಡ್ಯ ತೀವ್ರ ಜಿದ್ದಾಜಿದ್ದಿನ ಕ್ಷೇತ್ರವಾಗಲಿದೆ. ಬಿಜೆಪಿ ಹೈಕಮಾಂಡ್‌ ಜೊತೆಗೆ ಕ್ಷೇತ್ರ ಹಂಚಿಕೆ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷರಾದ ಹೆಚ್‌ ಡಿ ಕುಮಾರಸ್ವಾಮಿ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿದೆ. ಆದರೆ, ಒಮ್ಮೆಯೂ ಸಹ ಬಿಜೆಪಿ ಹೈಕಮಾಂಡ್‌ ಜೆಡಿಎಸ್‌ ಗೆ ಕೊಡುವ ಕ್ಷೇತ್ರಗಳ ಕುರಿತು ಅಧಿಕೃತವಾಗಿ ಘೋಷಿಸಿಲ್ಲ. ಇತ್ತ ದೋಸ್ತಿಯಲ್ಲಿಯ ಬಿರುಕಿನಿಂದಾಗಿ ಮಂಡ್ಯ ಹಾಸನ ಹಾಗೂ ಕೋಲಾರದಿಂದ ಜೆಡಿಎಸ್‌ ಸ್ಪರ್ಧೆ ಮಾಡಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಮಂಡ್ಯ ಬಿಡಲ್ಲ ಎಂದು ಹಾಲಿ ಸಂಸದೆ ಸುಮಲತಾ ಪದೇ ಪದೇ ಅಚ್ಚರಿಯ ಹೇಳಿಕೆ ನೀಡುತ್ತಿದ್ದಾರೆ.

ಸುಮಲತಾ ನಡೆಯೇ ನಿಗೂಢ!  

ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ಚಿಕಿತ್ಸೆಗಾಗಿ ಚೆನ್ನೈಗೆ ತೆರಳುವ ಮೊದಲು ಮಂಡ್ಯ, ಹಾಸನ ಹಾಗೂ ಕೋಲಾರದಿಂದ ಜೆಡಿಎಸ್‌ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಮಾರ್ಚ್ 25 ರಂದು ಆಸ್ಪತ್ರೆಯಿಂದ ಬಂದು ಅಭ್ಯರ್ಥಿಗಳ ಹೆಸರನ್ನ ಘೋಷಣೆ ಮಾಡುವುದಾಗಿ ಹೇಳಿದ್ದರಯ. ಇದರ ಬೆನ್ನಲ್ಲೇ ಮಂಡ್ಯದ ಹಾಲಿ ಸಂಸದೆ ಸುಮಲತಾ ಅಂಬರೀಶ್‌ ಅವರು, ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ ಪಿ ನಡ್ಡಾ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬಳಿಕ ಬೆಂಗಳೂರಿಗೆ ಮರಳಿರುವ ಸುಮಲತಾ ನಡೆಯೇ ನಿಗೂಢವಾಗಿದೆ.  ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಟಿಕೆಟ್ ಇನ್ನೂ ಅಂತಿಮಗೊಳಿಸಿಲ್ಲ. ದೆಹಲಿಯಲ್ಲಿ ವರಿಷ್ಠರೊಂದಿಗೆ ಮಾತಾಡುವಾಗ ಮಂಡ್ಯ ಕ್ಷೇತ್ರಕ್ಕೆ ಅವರು ಇನ್ನೂ ಅಭ್ಯರ್ಥಿಯನ್ನು ಅಂತಿಮಗೊಳಿಸದಿರುವುದಾಗಿ ಹೇಳಿದ್ದಾರೆ. ಕ್ಷೇತ್ರದ ಬಗ್ಗೆ ಎಲ್ಲ ಮಾಹಿತಿಯನ್ನು ಅವರಿಗೆ ತಿಳಿಸಿದ್ದೇನೆ ಎಂದಿದ್ದಾರೆ.  ಮಂಡ್ಯ ಟಿಕೆಟ್‌ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಎಲ್ಲ ಅಂಶಗಳನ್ನು ಗಮನಿಸಿ ಮಾರ್ಚ್ 22 ರಂದು ಹೆಸರನ್ನು ಪ್ರಕಟಿಸಲಿದ್ದಾರೆ ಎಂದಿದ್ದಾರೆ.

ಸುಮಲತಾರ ಮಾತು ಕೇಳಿದ್ರೆ ಈವರೆಗೂ ಕೂಡ ಅವ್ರು ಬಿಜೆಪಿ ಟಿಕೆಟ್ ಸಿಕ್ಕೇ ಸಿಗುತ್ತೆ. ಇನ್ನೂ ಕೂಡ ಮಂಡ್ಯ ಕ್ಷೇತ್ರವನ್ನ ಜೆಡಿಎಸ್​ಗೆ ಬಿಟ್ಟುಕೊಟ್ಟಿಲ್ಲ ಅಂತಾನೇ ಹೇಳ್ತಿದ್ದಾರೆ. ಪದೇಪದೇ ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರನ್ನ ಭೇಟಿಯಾಗಿ ಬರ್ತಿದ್ದಾರೆ. ಆದ್ರೆ ಕುಮಾರಣ್ಣ ಮಾತ್ರ ನಮಗೆ ಮೂರು ಕ್ಷೇತ್ರ ಅಂತಾ ಘೋಷಣೆ ಮಾಡಿದ್ದಾರೆ. ಅದ್ರಲ್ಲೂ ಮಂಡ್ಯಕ್ಕೆ ಅವ್ರೇ ಸ್ಪರ್ಧೆ ಮಾಡುತ್ತಾರೆ ಅಂತಾ ಕಾರ್ಯಕರ್ಯರು, ಮುಖಂಡರು ಹೇಳ್ತಿದ್ದಾರೆ. ಹಾಗೇ ಸುಮಲತಾ ಅವ್ರಿಗೆ ಚಿಕ್ಕಬಳ್ಳಾಪುರದ ಬಿಜೆಪಿ ಟಿಕೆಟ್ ನೀಡ್ತಾರೆ ಎಂದು ಚರ್ಚೆಯಾಗ್ತಿದೆ. ಇದಕ್ಕೆ ಸಂಸದೆ ಸುಮಲತಾ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ.

ಮಂಡ್ಯ ಬಿಡೋ ಮಾತೇ ಇಲ್ಲ!  

ಕಳೆದ ಕೆಲ ದಿನಗಳಿಂದ ಸುಮಲತಾ ಅಂಬರೀಶ್​ಗೆ ಮಂಡ್ಯ ಬದಲಿಗೆ ಬೇರೆ ಕ್ಷೇತ್ರದ ಟಿಕೆಟ್ ನೀಡಲಾಗುತ್ತೆ ಎಂದು ಚರ್ಚೆಯಾಗ್ತಿದೆ. ಇದೀಗ ಚಿಕ್ಕಬಳ್ಳಾಪುರ ಟಿಕೆಟ್ ಕೊಡಬಹುದು ಎನ್ನಲಾಗಿತ್ತು. ಆದ್ರೆ ಈ ಗೊಂದಲಕ್ಕೆ ಸುಮಲತಾ ತೆರೆ ಎಳೆದಿದ್ದಾರೆ. ನನಗೆ ಚಿಕ್ಕಬಳ್ಳಾಪುರ ಕ್ಷೇತ್ರ ನೀಡುವಂತೆ ಬೇರೆಯವರು ವರಿಷ್ಠರ ಮುಂದೆ ಪ್ರಸ್ತಾಪ ಮಾಡುತ್ತಿದ್ದಾರೆ. ಆದ್ರೆ ಯಾರೂ ಕೂಡ ತನ್ನ ಜೊತೆ ಅದರ ಬಗ್ಗೆ ಚರ್ಚೆ ಮಾಡಲಿಲ್ಲ, ಬೆಂಗಳೂರು ಉತ್ತರ ಕ್ಷೇತ್ರವನ್ನೇ ನಾನು ನಿರಾಕರಿಸಿದ್ದೇನೆ. ಇನ್ನೂ ಕ್ಕಬಳ್ಳಾಪುರ ಒಪ್ಪಿಕೊಳ್ಳುವುದು ಸಾಧ್ಯವೇ? ನಾನೇನಿದ್ದರೂ ಮಂಡ್ಯದಿಂದಲೇ ಸ್ಪರ್ಧಿಸುವುದು. ನನ್ನ ರಾಜಕೀಯ ಏನೇ ಆದ್ರೂ ಮಂಡ್ಯದಿಂದ ಮಾತ್ರ ಎಂದು ಸುಮಲತಾ ಅವರು ಅಚ್ಚರಿ ಹೇಳಿಕೆ ನೀಡಿದ್ದಾರೆ. ಇಷ್ಟು ದಿನ ಸುಮಲತಾ ಬೇರೆ ಕಡೆ ಹೋಗ್ತಾರೆ ತನ್ನ ಲೈನ್ ಕ್ಲಿಯರ್ ಅನ್ಕೊಂಡಿದ್ದ ಹೆಚ್​ಡಿಕೆಗೆ ಇದು ತಲೆನೋವು ತಂದಿಟ್ಟಿದೆ.

ಹೀಗೆ ಸುಮಲತಾ ನಂಗೆ ಬೇರೆ ಕ್ಷೇತ್ರ ಬೇಡ. ಇದ್ರೂ ಮಂಡ್ಯ ಹೋದ್ರೂ ಮಂಡ್ಯ ಅಂತಿದ್ದಾರೆ. ಇದು ಮೈತ್ರಿ ನಾಯಕರಿಗೆ ತಲೆಬಿಸಿ ತಂದಿಟ್ಟಿದೆ. ಹೀಗಾಗಿ ಈ ಪ್ರಾಬ್ಲಂನ ಹೇಗೆ ಸಾಲ್ವ್ ಮಾಡ್ತಾರೆ. ಅಥವಾ ಸುಮಲತಾ ಪಕ್ಷೇತರವಾಗಿ ಸ್ಪರ್ಧಿಸ್ತಾರಾ ಅನ್ನೋದನ್ನ ಕಾದು ನೋಡ್ಬೇಕು.

Shwetha M