ಲೋಕಾಯುಕ್ತ ರೇಡ್ ಬೆನ್ನಲ್ಲೇ ಶಾಸಕ ವಿರೂಪಾಕ್ಷಪ್ಪ ನಾಪತ್ತೆ – ಬಂಧನಕ್ಕೆ ಬಲೆ ಬೀಸಿದ ಅಧಿಕಾರಿಗಳು!?

ಲೋಕಾಯುಕ್ತ ರೇಡ್ ಬೆನ್ನಲ್ಲೇ ಶಾಸಕ ವಿರೂಪಾಕ್ಷಪ್ಪ ನಾಪತ್ತೆ – ಬಂಧನಕ್ಕೆ ಬಲೆ ಬೀಸಿದ ಅಧಿಕಾರಿಗಳು!?

ಕರ್ನಾಟಕ ಇತಿಹಾಸದಲ್ಲೇ ಲೋಕಾಯುಕ್ತ ಪೊಲೀಸರು ಅತಿದೊಡ್ಡ ಬೇಟೆಯಾಡಿದ್ದು, ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ನ ಕೋಟಿ ಕೋಟಿ ಸಾಮ್ರಾಜ್ಯ ಕಂಡು ಅಧಿಕಾರಿಗಳೇ ಶೇಕ್ ಆಗಿದ್ದಾರೆ. ಈಗಾಗ್ಲೇ ಪ್ರಶಾಂತ್​ನನ್ನ ಬಂಧಿಸಿ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಗನ ಈ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಅಪ್ಪನ ತಲೆದಂಡವಾಗಿದ್ದು, ಶಾಸಕರು ಕೂಡ ಅರೆಸ್ಟ್ ಆಗುವ ಎಲ್ಲಾ ಲಕ್ಷಣಗಳಿವೆ.

ಯೆಸ್, ಈಗಾಗ್ಲೇ ಕೆಎಸ್ ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿರೂಪಾಕ್ಷಪ್ಪ ಅರೆಸ್ಟ್ ಆಗೋದು ಪಕ್ಕಾ ಆದಂತಿದೆ. ದಾಳಿ ಬಳಿಕ ಅಜ್ಞಾತಸ್ಥಳಕ್ಕೆ ತೆರಳಿದ್ದು, ಲೋಕಾಯುಕ್ತ ಪೊಲೀಸರು ತೀವ್ರ ಶೋಧ ನಡೆಸ್ತಿದ್ದಾರೆ. ಬೆಂಗಳೂರು, ದಾವಣಗೆರೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ತೀವ್ರ ಶೋಧ ನಡೆಸಲಾಗ್ತಿದೆ.

ಇದನ್ನೂ ಓದಿ : KSDL ಅಧ್ಯಕ್ಷ ಸ್ಥಾನಕ್ಕೆ ಮಾಡಾಳ್ ವಿರೂಪಾಕ್ಷಪ್ಪ ರಾಜೀನಾಮೆ – ಬಿಜೆಪಿ ಶಾಸಕ ಬಂಧನವಾಗೋದು ಫಿಕ್ಸಾ..?

ಲೋಕಾಯುಕ್ತ ಎಫ್​ಐಆರ್ ನಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಆರೋಪಿ ನಂಬರ್ 1 ಆಗಿದ್ದಾರೆ. ಹೀಗಾಗಿ ವಿರೂಪಾಕ್ಷಪ್ಪ  ಬಂಧನವಾಗೋದು ಬಹುತೇಕ ಖಚಿತ ಆಗಿದೆ. ಮಾಡಾಳ್ ವಿರೂಪಾಕ್ಷಪ್ಪ ಕೆಎಸ್ ಡಿಎಲ್  ಅಧ್ಯಕ್ಷರಾದ ಮೇಲೆ 200 ಕೋಟಿಗೂ ಅಧಿಕ ಅಕ್ರಮ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಲೋಕಾಯುಕ್ತಕ್ಕೆ ಸಾಲು ಸಾಲು ದೂರುಗಳನ್ನ ನೀಡಲಾಗಿತ್ತು. ಈ ಎಲ್ಲಾ ಕಾರಣಗಳಿಂದ ಲೋಕಾಯುಕ್ತ ಪೊಲೀಸರು ನಿನ್ನೆ ಸಂಜೆ ದಿಢೀರ್ ರೇಡ್ ನಡೆಸಿದ್ದರು.

ಬೆಂಗಳೂರಿನ ನಿವಾಸ, ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಒಟ್ಟಾರೆ 8.12 ಕೋಟಿ ಹಣ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಪುತ್ರನ ಬಂಧನವಾಗಿದ್ದರಿಂದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಆತಂಕಗೊಂಡಿಡು ಬಳಿಕ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಗೌಪ್ಯ ಸ್ಥಳದಲ್ಲಿ ಇದ್ದುಕೊಂಡೇ ಮುಂದಿನ ಕಾನೂನು ಹೋರಾಟದ ಬಗ್ಗೆ ವಕೀಲರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಹಾಗೇ ತಮ್ಮ ಆಪ್ತರ ಮೂಲಕ ಸಿಎಂ ಕಚೇರಿಗೆ ಕೆಎಸ್ ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.

ಮತ್ತೊಂದೆಡೆ ದಾವಣಗೆರೆಯ ಚನ್ನಗಿರಿ ನಿವಾಸದ ಮೇಲೂ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಈಗಾಗ್ಲೇ ಬೆಂಗಳೂರಿನ ನಿವಾಸ ಹಾಗೂ ಕಚೇರಿ ಮೇಲೆ ರೇಡ್ ಮಾಡಿದ್ದ ಅಧಿಕಾರಿಗಳು ನಿರಂತರ 18 ಗಂಟೆಗಳ ಕಾಲ ಪರಿಶೀಲನೆ ನಡೆಸಿದ್ದರು. ಬಳಿಕ ಬರೋಬ್ಬರಿ 7 ಬ್ಯಾಗ್​ಗಳಲ್ಲಿ ಕೋಟಿ ಕೋಟಿ ಹಣ, ಚಿನ್ನ ಹಾಗೂ ದಾಖಲಾತಿಗಳನ್ನ ಕೊಂಡೊಯ್ದಿದ್ದಾರೆ. ಕರ್ನಾಟಕ ಲೋಕಾಯುಕ್ತ ಇತಿಹಾಸದಲ್ಲೇ ಇದು ದೊಡ್ಡ ರೇಡ್ ಆಗಿದೆ.  ಯಾಕಂದ್ರೆ ಈ ಹಿಂದೆ ನಡೆಸಿದ ದಾಳಿ ವೇಳೆ ಎಲ್ಲಿಯೂ 8 ಕೋಟಿಯಷ್ಟು ನಗದು ಪತ್ತೆಯಾಗಿರಲಿಲ್ಲ.

suddiyaana