ನಿದ್ದೆ ಮಂಪರಿನಲ್ಲಿದ್ದ ಭ್ರಷ್ಟ ಅಧಿಕಾರಿಗಳಿಗೆ ಶಾಕ್! – ಬೆಳ್ಳಂಬೆಳಗ್ಗೆ 90ಕ್ಕೂ ಹೆಚ್ಚು ಕಡೆಗಳಲ್ಲಿ ಲೋಕಾಯುಕ್ತ ದಾಳಿ
ಬೆಂಗಳೂರು: ಭ್ರಷ್ಟ ಅಧಿಕಾರಿಗಳುನ್ನು ಬೇಟೆಯಾಡುವ ಸಲುವಾಗಿ ಲೋಕಾಯುಕ್ತ ಅಧಿಕಾರಿಗಳು ಇಂದು (ಸೋಮವಾರ) ರಾಜ್ಯದ ಹಲವೆಡೆ ದಾಳಿ ನಡೆಸಿದ್ದಾರೆ. ಸುಮಾರು 90 ಕಡೆಗಳಲ್ಲಿ ದಾಳಿ ನಡೆಸಿದ್ದು, ಸುಮಾರು 200ಕ್ಕೂ ಹೆಚ್ಚು ಅಧಿಕಾರಿಗಳಿಂದ ಏಕಕಾಲದಲ್ಲಿ ದಾಳಿ ನಡೆದಿದೆ.
ರಾಜ್ಯದ 17 ಸರ್ಕಾರಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ದೂರು ದಾಖಲಾಗಿದ್ದು, ಒಟ್ಟು 17 ಅಧಿಕಾರಿಗಳಿಗೆ ಸಂಬಂಧಿಸಿದಂತೆ ಒಟ್ಟು 90 ಕಡೆ ದಾಳಿ ಮಾಡಲಾಗಿದೆ.
ಬೆಂಗಳೂರಿನ ಕೆಆರ್‌ಪುರದಲ್ಲಿ ಆರ್‌ಟಿಓ ಅಧಿಕಾರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಯ ಮನೆ, ಕಚೇರಿ ಸೇರಿದಂತೆ ಮೂರು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಮೂರು ಕಡೆಗಳಲ್ಲೂ ಪರಿಶೀಲನೆ ಮುಂದುವರಿಯುತ್ತಿದೆ.
ಇದನ್ನೂ ಓದಿ: ದಿನಕ್ಕೆ ಒಂದು ಬಾರಿಯೂ ಕೂದಲು ಬಾಚೋದಿಲ್ವಾ? – ತಲೆಯಲ್ಲಿರುವ ಕೂದಲು ಖಾಲಿಯಾಗೋ ಮೊದಲು ಈ ವಿಚಾರ ತಿಳ್ಕೊಳಿ!
ಪಾಲಿಕೆ ಎಆರ್‌ಓ ಚಂದ್ರಪ್ಪ ಅವರ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಚಂದ್ರಪ್ಪಗೆ ಸೇರಿದ ಮೂರು ಸ್ಥಳಗಳ ದಾಳಿ ನಡೆಸಲಾಗಿದೆ. ಇಬ್ಬರು ಎಸ್‌ಪಿಗಳ ನೇತೃತ್ವದಲ್ಲಿ ದಾಳಿ ನಡೆಸಿದ್ದು, ವಂಶಿ ಕೃಷ್ಣ, ಶ್ರೀನಾಥ್ ಜೋಶಿ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಆರ್‌ಆರ್ ನಗರ ವಲಯ ಹೆಗ್ಗನಹಳ್ಳಿ ವಾರ್ಡ್ ಎಆರ್‌ಓ ಚಂದ್ರಪ್ಪ 30ನೇ ತಾರೀಕಿನಂದು ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಈ ಹಿನ್ನೆಲೆ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ.
ಇನ್ನು ಕಾರ್ಮಿಕ ಇಲಾಖೆ ಡೆಪ್ಯೂಟಿ ಡೈರೆಕ್ಟರ್ ಶ್ರೀನಿವಾಸ್ ಮನೆ ಮೇಲೆ ಲೋಕಾ ದಾಳಿ ನಡೆಸಿದೆ. ಬೆಂಗಳೂರು ಹಾಗೂ ಕೊಳ್ಳೆಗಾಲ ಮನೆ ಮೇಲೆ ದಾಳಿ ನಡೆಸಿದ್ದು,ಲೋಕಾಯುಕ್ತ ಅಧಿಕಾರಿಗಳಿಂದ ಮನೆಯಲ್ಲಿ ದಾಖಲೆ ಪರಿಶೀಲನೆ ನಡೆಸಲಾಗಿದೆ. ಶ್ರೀನಿವಾಸ್‌ಗೆ ಸಂಬಂಧಿಸಿದ ಮೂರು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ.
ದಾಳಿ ವೇಳೆ ಶ್ರೀನಿವಾಸ್ ಮನೆಯಲ್ಲಿ ಕಂತೆ ಕಂತೆ ಹಣ, ಚಿನ್ನಾಭರಣ ಪತ್ತೆಯಾಗಿದೆ. ಶ್ರೀನಿವಾಸ್‌ಗೆ ಸೇರಿ ಉಪ್ಕಾರ್ ರೆಸಿಡೆನ್ಸಿ ಉಲ್ಲಾಳ್ ಮನೆಯಲ್ಲಿ ಹಣ ಹಾಗೂ ಚಿನ್ನಾಭರಣ ಪತ್ತೆಯಾಗಿದ್ದು, ಶ್ರಿನಿವಾಸ್ ಮನೆ ಸೇರಿದಂತೆ ನಗರದ 9 ಕಡೆ ದಾಳಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಅದೇ ರೀತಿ ರಾಜ್ಯದ ಅನೇಕ ಜಿಲ್ಲೆಗಳಲ್ಲೂ ಲೋಕಾಯಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.